Karnataka news paper

ದ್ವೇಷ ಭಾಷಣ ಮಾಡುವ ಧರ್ಮ ಸಂಸದ್‌ ಕಾರ್ಯಕ್ರಮ ನಿಷೇಧಿಸಿ: ಸುಪ್ರೀಂನಲ್ಲಿ ಮುಸ್ಲಿಂ ಸಂಘಟನೆಯಿಂದ ಅರ್ಜಿ


ಹೈಲೈಟ್ಸ್‌:

  • ದ್ವೇಷ ಭಾಷಣ ಮಾಡುವ ಧರ್ಮ ಸಂಸದ್‌ ಅನ್ನು ನಿಷೇಧಿಸಿ ಎಂದು ಸುಪ್ರೀಂಗೆ ಅರ್ಜಿ
  • ಜಮೀಯತ್‌- ಉಲ್‌- ಉಲಾಮಾ – ಹಿಂದ್‌ ಎನ್ನುವ ಮುಸ್ಲಿಂ ನಾಯಕರ ಸಂಘಟನೆಯಿಂದ ದಾವ
  • ಇಂಥ ಸಭೆಗಳು ಸಂವಿಧಾನ, ಕಾನೂನು, ದೇಶದ ಏಕತೆ ಹಾಗೂ ಸಮಗ್ರತೆಗೆ ವಿರುದ್ಧ ಎಂದು ಅರ್ಜಿ

ಹೊಸ ದಿಲ್ಲಿ: ಮುಸ್ಲಿಂ ಸಮುದಾಯ ವಿರುದ್ಧ ದ್ವೇಷದ ಭಾಷಣ ಮಾಡಿ ಮಾರಣಹೋಮಕ್ಕೆ ಪ್ರಚೋದನೆ ನೀಡುವ ಧರ್ಮ ಸಂಸದ್‌ನಂತ ಕಾರ್ಯಕ್ರಮಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ವಿದ್ವಾಂಸರ ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಜಮೀಯತ್‌- ಉಲ್‌- ಉಲಾಮಾ – ಹಿಂದ್‌ ಎನ್ನುವ ಮುಸ್ಲಿಂ ನಾಯಕರ ಸಂಘಟನೆ ಈ ಬಗ್ಗೆ ಸೋಮವಾರ ಸರ್ವೋಚ್ಚ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದ್ದು, ಇಂಥ ಕಾರ್ಯಕ್ರಮಗಳನ್ನು ನಿಷೇಧಿಸಬೇಕು. ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಉತ್ತರಾಖಂಡ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ನಡೆಸಲಾಗಿತ್ತು. ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ನಾವೆಲ್ಲ ಹೋರಾಡಬೇಕು ಎಂದು ಹೇಳಿ ಪ್ರಚೋದಿಸಲಾಗಿತ್ತು. ಈ ಧರ್ಮ ಸಂಸತ್‌ ಅನ್ನು ಉಲ್ಲೇಖಿಸಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ದ್ವೇಷದ ಧ್ವನಿಗಳಿಗೆ ನಿಮ್ಮ ಮೌನವೇ ಪ್ರಚೋದನೆ!: ಪ್ರಧಾನಿ ಮೋದಿಗೆ ಐಐಎಂ ವಿದ್ಯಾರ್ಥಿ, ಸಿಬ್ಬಂದಿ ಪತ್ರ
‘ಮುಸ್ಲಿಮರ ನರಮೇಧ ಮಾಡಲು ಕರೆ ಕೊಡುವ ಈ ಧರ್ಮ ಸಂಸದ್‌ ಸಭೆಗಳು ಕೇವಲ ಧಾರ್ಮಿಕ ವಿಚಾರ ಮಾತ್ರವಲ್ಲ. ಇದು ಸಂವಿಧಾನ, ಕಾನೂನು, ಏಕತೆ ಹಾಗೂ ದೇಶದ ಸಮಗ್ರತೆಯ ವಿಚಾರ’ ಎಂದು ಜಮೀಯತ್‌- ಉಲ್‌- ಉಲಾಮಾ ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಹಾಗೂ ಹೇಳಿಕೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಹರಿದ್ವಾರ ಹಾಗೂ ದೆಹಲಿಯಲ್ಲಿ ಸರ್ಕಾರದ ಮೂಗಿನಡಿಯೇ ಇಂಥ ಕಾರ್ಯಕ್ರಮಗಳು ನಡೆಸಲಾಗಿದೆ. ಸಾರ್ವಜನಿಕವಾಗಿ, ಉದ್ದೇಶ ಪೂರ್ವಕವಾಗಿಯೇ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಬಹು ಸಂಖ್ಯಾತರನ್ನು ಪ್ರಚೋದಿಸಲಾಗುತ್ತದೆ. ದುರದೃಷ್ಠವಶಾತ್‌ ಈ ಎರಡೂ ಕಾರ್ಯಕ್ರಮಗಳ ಬಗ್ಗೆ ಈವರೆಗೂ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲಾಲಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್‌ ಎಂದಿದ್ದ ‘ದೇವ ಮಾನವ’ ಅರೆಸ್ಟ್‌: ದೇಶದ್ರೋಹದ ಕೇಸ್‌ ದಾಖಲು
‘ಧರ್ಮ ಸಂಸದ್‌ನಲ್ಲಿ ಪ್ರಚೋದಕ ಭಾಷಣ ಮಾಡಿದ ಪ್ರಕರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೌನ ಸದ್ಯ ಮುಸ್ಲಿಮರಲ್ಲಿ ಇರುವ ಭಯಕ್ಕೆ ಮತ್ತಷ್ಟು ತುಪ್ಪ ಸುರಿಸಿದೆ’ ಎಂದು ಜಮೀಯತ್‌- ಉಲ್‌- ಉಲಾಮಾ – ಹಿಂದ್‌ ತಾನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮೀಯತ್‌- ಉಲ್‌- ಉಲಾಮಾ -ಎ- ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾನೂನು ಜಾರಿ ಸಂಸ್ಥೆಗಳು ಈ ಪ್ರಕರಣ ಸಂಬಂಧ ತಮ್ಮ ಕರ್ತವ್ಯ ನಿಭಾಯಿಸಿಲ್ಲ. ಹೀಗಾಗಿ ದೇಶಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ.

ಮತಾಂತರ ತಡೆಗೆ ಧರ್ಮ ಸಂಸತ್‌ನಲ್ಲಿ ಮಠಾಧೀಶರ ಸಂಕಲ್ಪ: ಮುರುಘಾ ಶ್ರೀ
ಏತನ್ಮಧ್ಯೆ, ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿದೆ. ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ, ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿದ್ದ ಪೀಠ ವಿಚಾರಣೆ ನಡೆಸಲಿದೆ.



Read more

[wpas_products keywords=”deal of the day sale today offer all”]