Karnataka news paper

ಅಕಾಲಿಕ ಮಳೆ, ಪ್ರವಾಹ, ಬರ: ರೈತರ ಬದುಕು ಚಿತ್ರಾನ್ನ ಆಗಿಬಿಟ್ಟಿದೆ: ಸಿದ್ದರಾಮಯ್ಯ ಬೇಸರ


ಹೈಲೈಟ್ಸ್‌:

  • ಬಿಜೆಪಿ ಸರ್ಕಾರ ಬಂದ ಮೇಲೆ ಕಳೆದ ಮೂರು ವರ್ಷಗಳಿಂದ ಪ್ರವಾಹ, ಅತಿವೃಷ್ಠಿ
  • ಈ ವರ್ಷ ಮೂರು ಬಾರಿ ಪ್ರವಾಹ ಬಂದಿದೆ
  • ಅಕ್ಟೋಬರ್ ನವೆಂಬರ್‌ನಲ್ಲಿ ಅತಿವೃಷ್ಠಿ ಆಗಿದೆ: ಸದನಕ್ಕೆ ಸಿದ್ದು ಮಾಹಿತಿ

ಬೆಳಗಾವಿ: ಅಕಾಲಿಕ ಮಳೆ, ಪ್ರವಾಹ ಹಾಗೂ ಕೆಲವು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ, ರೈತರ ಬದುಕು ಚಿತ್ರಾನ್ನ ಆಗಿಬಿಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ಸಿದ್ದರಾಮಯ್ಯ, ‌ರೈತರು ಕಣ್ಣೀರಿನಲ್ಲಿ ಕೈ ತೊಳೆಯೋ ಪರಿಸ್ಥಿತಿ ಬಂದು ಬಿಟ್ಟಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಆರು ಲಕ್ಷ ಎಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ವರ್ಷ ಒಟ್ಟು 12.5 ಲಕ್ಷ ಎಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ದಕ್ಷಿಣ ಒಳನಾಡಿನಲ್ಲಿ ಏಳು ಲಕ್ಷ ಎಕ್ಟೇರ್‌ನಲ್ಲಿ ರಾಗಿ ಬೆಳೆ ಹಾಕಿದ್ರು. 75% ರಾಗಿ, ಭತ್ತ, ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ಬಿಜೆಪಿ ಸರ್ಕಾರ ಬಂದ ಮೇಲೆ ಕಳೆದ ಮೂರು ವರ್ಷಗಳಿಂದ ಪ್ರವಾಹ ಅತಿವೃಷ್ಠಿ ಆಗಿದೆ. ಈ ವರ್ಷ ಮೂರು ಬಾರಿ ಪ್ರವಾಹ ಬಂದಿದೆ. ಅಕ್ಟೋಬರ್ ನವೆಂಬರ್‌ನಲ್ಲಿ ಅತಿವೃಷ್ಠಿ ಆಯಿತು. ಕಳೆದ 60 ವರ್ಷಗಳಲ್ಲಿ ಇಷ್ಟು ಮಳೆ ಆಗಿರಲಿಲ್ಲ. ಅಕ್ಟೋಬರ್‌ ನಲ್ಲಿ ‌166 ಮಿ ಮೀ ವಾಡಿಕೆ ಮಳೆ ಆದರೆ 307 ವಿ. ಮೀಟರ್ ವಾಸ್ತವವಾಗಿ ಬಿದ್ದಿದೆ.‌ ನವೆಂಬರ್ ನಲ್ಲಿ ಇದಕ್ಕೂ ದುಪ್ಪಟ್ಟು ಮಳೆ ಆಗಿದೆ ಎಂದು ಮಾಹಿತಿ ನೀಡಿದರು.

ಸಮಸ್ಯೆಗಳಿಗೆ ಉತ್ತರವಾಗಲಿ ಅಧಿವೇಶನ; ಮುಂದಿನ ಸಾಲಿನ ನಾಯಕರೆಲ್ಲರೂ ಕಿತ್ತೂರು-ಕಲ್ಯಾಣ ಕರ್ನಾಟಕದವರೇ!
ಮಳೆಯಿಂದಾಗಿ ರಾಜ್ಯಾದ್ಯಂತ 75 ಶೇ ಬೆಳೆ ನಾಶವಾಗಿದೆ. ಭತ್ತ, ರಾಗಿ, ಕಾಫಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ನಾಶವಾಗಿವೆ. ರೈತರ ಬದುಕು ಚಿತ್ರಾನ್ನವಾಗಿದೆ. ಕಳೆದು ಮೂರು ತಿಂಗಳಲ್ಲಿ 6 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ವರ್ಷದಲ್ಲಿ ಒಟ್ಟು 12.30 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಈ ವರ್ಷ ಒಂದರಲ್ಲಿ 11,916 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಇಂದಿನಿಂದ ಬೆಳಗಾವಿ ಅಧಿವೇಶನ: ಬೊಮ್ಮಾಯಿ ಸರಕಾರಕ್ಕೆ ಸವಾಲು; ಕಾದಾಟಕ್ಕೆ ಕಾಂಗ್ರೆಸ್‌ ಸಜ್ಜು!
ರೈತರ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅಂತಾಗಿದೆ. ರಾಜ್ಯದಿಂದ ಪೆಟ್ರೋಲ್ ಉತ್ಪನ್ನಗಳಿಂದ 36,000 ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿದೆ. ಆದರೆ ಚಂಡಮಾರುತ, ಪ್ರವಾಹ, ಅತಿವೃಷ್ಠಿ ಹಾನಿಗೆ ಒಂದು ರೂಪಾಯಿ ಹಣ ಈ ಬಾರಿ ನೀಡಿಲ್ಲ ಎಂದು ಆರೋಪಿಸಿದರು. ಬಳಿಕ ‌ಪ್ರವಾಹ, ಮಳೆ ಹಾನಿಯ ವಿಚಾರವಾಗಿ ನಿಯಮ 69 ಅಡಿಯಲ್ಲಿ ಚರ್ಚೆಗೆ ಸ್ಪೀಕರ್ ಕಾಗೇರಿ ಅವಕಾಶ ನೀಡಿದರು.
ಬೆಳಗಾವಿ ಅಧಿವೇಶನಕ್ಕೆ ಶಾಸಕರ ನಿರಾಸಕ್ತಿ, ಮೊದಲ ದಿನ ಕೇವಲ 80 ಶಾಸಕರಷ್ಟೇ ಹಾಜರ್!



Read more