Karnataka news paper

ಲಾಕ್‌ಡೌನ್‌ ಅವಧಿಯಲ್ಲಿ ಕಾಂಡೋಮ್‌ ಮರೆತ ಜನ; ಸಹಜವಾಗಿ ಗರ್ಭ ಧರಿಸಿದವರ ಸಂಖ್ಯೆ ಹೆಚ್ಚಳ


ಹೊಸದಿಲ್ಲಿ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಕಾಂಡೋಮ್‌ ಬಳಸುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದೆಡೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಜವಾಗಿಯೇ ಗರ್ಭ ಧರಿಸಿದವರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಕೃತಕ ಗರ್ಭಧಾರಣೆಯ ಮೊರೆ ಹೋಗುವವರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಮತ್ತೊಂದು ವರದಿ ತಿಳಿಸಿದೆ.

ಕಳೆದ ಎರಡು ವರ್ಷದಲ್ಲಿ ಲಾಕ್‌ಡೌನ್‌, ಕರ್ಫ್ಯೂ, ಹಲವು ಕಠಿಣ ನಿಯಮಗಳಿಂದ ಜನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್‌ ಬಳಕೆ ಕಡಿಮೆಯಾಗಿದೆ. ಹೋಟೆಲ್‌ ಸೇರಿ ಅವಶ್ಯವಲ್ಲದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರುವುದು, ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳ ಸ್ಥಗಿತ, ಕಾಂಡೋಮ್‌ ಬಳಕೆ ಕುರಿತು ಸರಕಾರಗಳ ಜಾಗೃತಿ ಅಭಿಯಾನಗಳ ರದ್ದು ಸೇರಿ ಹಲವು ಕಾರಣಗಳಿಂದಾಗಿ ಕಾಂಡೋಮ್‌ ಬಳಕೆ ಇಳಿಕೆಯಾಗಿದೆ. ಕಾಂಡೋಮ್‌ ಉತ್ಪಾದನೆಯ ಜಾಗತಿಕ ದೈತ್ಯ ಕಂಪನಿಯಾದ ಮಲೇಷ್ಯಾ ಮೂಲದ ಕರೆಕ್ಸ್‌ ಉತ್ಪನ್ನಗಳ ಬೇಡಿಕೆ ಎರಡು ವರ್ಷಗಳಲ್ಲಿ ಶೇ.40ರಷ್ಟು ಕುಸಿದಿರುವುದೇ ಜನ ಕಾಂಡೋಮ್‌ ಬಳಕೆಯಿಂದ ವಿಮುಖರಾಗುತ್ತಿರುವುದಕ್ಕೆ ಸಾಕ್ಷಿ ಎಂದು ವರದಿ ಹೇಳಿದೆ.
ನಿಮ್ಮ ಪ್ರೀತಿ ಪಾತ್ರರಿಗೆ ಚಿನ್ನ ಖರೀದಿಸಲು ಸೂಕ್ತ ಸಮಯ ಯಾವುದು? ಇಂದಿನ ದರ ಹೇಗಿದೆ? ಇಲ್ಲಿದೆ ವಿವರ
ಕರೆಕ್ಸ್‌ ಕಂಪನಿಯು ಕಾಂಡೋಮ್‌ ಉತ್ಪಾದನೆಯಲ್ಲಿ ಜಾಗತಿಕವಾಗಿ ಹೆಸರು ಮಾಡಿದೆ. ವಿಶ್ವದಲ್ಲಿ ಉತ್ಪಾದನೆಯಾಗುವ ಐದು ಕಾಂಡೋಮ್‌ಗಳಲ್ಲಿ ಒಂದು ಕಾಂಡೋಮ್‌ ಇದೇ ಕಂಪನಿಯದ್ದಾಗಿರುತ್ತದೆ. ವಾರ್ಷಿಕವಾಗಿ 140ಕ್ಕೂ ಅಧಿಕ ದೇಶಗಳಿಗೆ 500 ಕೋಟಿ ಕಾಂಡೋಮ್‌ ರಫ್ತು ಮಾಡುತ್ತಿದೆ. ಕಳೆದ ಎರಡು ವರ್ಷದಲ್ಲಿ ಕರೆಕ್ಸ್‌ ಷೇರು ಶೇ.18ರಷ್ಟು ಕುಸಿದಿವೆ. ಮಲೇಷ್ಯಾ ಷೇರು ಮಾರುಕಟ್ಟೆಯಲ್ಲಿ ಶೇ.3.1ರಷ್ಟು ನಷ್ಟವಾಗಿದೆ. ಕೊರೊನಾ ಪ್ರಸರಣ ತಡೆಯಲು ಹಾಗೂ ಲಾಕ್‌ಡೌನ್‌ ಘೋಷಣೆಯಾದ ಕಾರಣದ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್‌) ಮಾಡುವ ಅವಕಾಶ ನೀಡಿದ ಕಾರಣ ಕಾಂಡೋಮ್‌ ಬಳಕೆ ಹೆಚ್ಚುತ್ತದೆ ಎಂಬುದು ಕಾಂಡೋಮ್‌ ಉತ್ಪಾದಕ ಕಂಪನಿಗಳ ನಿರೀಕ್ಷೆಯಾಗಿತ್ತು. ಅವುಗಳ ನಿರೀಕ್ಷೆ ಹುಸಿಯಾಗಿದೆ.



Read more

[wpas_products keywords=”deal of the day sale today offer all”]