Karnataka news paper

ಪರಿಷತ್‌ ಎಲೆಕ್ಷನ್‌ ರಿಸಲ್ಟ್‌ಗೆ ಕೌಂಟ್‌ಡೌನ್‌! ಬೆಂ. ಗ್ರಾಮಾಂತರ, ರಾಮನಗರದಲ್ಲಿ ಬೆಟ್ಟಿಂಗ್‌ ಜೋರು


ಹೈಲೈಟ್ಸ್‌:

  • ವಿಧಾನ ಪರಿಷತ್‌ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ, ಮಂಗಳವಾರ ರಿಸಲ್ಟ್‌
  • ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಬೆಟ್ಟಿಂಗ್‌ ಜೋರು
  • ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳೇ ಬಾಜಿದಾರರ ಹಾಟ್‌ ಫೇವರಿಟ್‌

* ಟಿ. ಶಿವರಾಜ್‌ ರಾಮನಗರ ಗ್ರಾ.
‘ಮಳೆ ನಿಂತರೂ ಮರದ ಹನಿ ನಿಲ್ಲದು’ ಎನ್ನುವ ಮಾತಿನಂತೆ ವಿಧಾನ ಪರಿಷತ್‌ ಚುನಾವಣೆ ಮುಗಿದರೂ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ, ಫಲಿತಾಂಶ ವಿಶ್ಲೇಷಣೆಗಳು ನಿಂತಿಲ್ಲ. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ಈ ಬಾರಿ ನಡೆದ ಚುನಾವಣೆ ಹಲವಾರು ಕಾರಣಗಳಿಂದ ಮಹತ್ವ ಪಡೆದುಕೊಂಡಿದ್ದು, ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಹಿಂದಿನ ಅಭ್ಯರ್ಥಿಗಳು ಈಗಿನಷ್ಟು ಪ್ರಯಾಸ ಪಟ್ಟಿರಲಿಲ್ಲ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು. ಅಂತೆಯೇ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು.

ಡಿ.10ರಂದು ಜರುಗಿದ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.14ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಖಾಸಗಿ ಕಾಲೇಜಿನಲ್ಲಿ ನಡೆಯಲಿದೆ. ಈಗಾಗಲೇ ಮಸ್ಟರಿಂಗ್‌ ಮಾಡಿರುವ ಮತಪೆಟ್ಟಿಗೆಗಳನ್ನು ಸುರಕ್ಷಿತ ಕೊಠಡಿಗಳಲ್ಲಿಇಡಲಾಗಿದೆ. ಮತದಾರರು ಬರೆದಿರುವ ಅಭ್ಯರ್ಥಿಗಳ ಹಣೆಬರಹವನ್ನು ಮಂಗಳವಾರ ಮತಪೆಟ್ಟಿಗೆಗಳು ಬಯಲು ಮಾಡಲಿವೆ.

ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ
ಮತ ಎಣಿಕೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಹೃದಯ ಬಡಿತ ಹೆಚ್ಚಾಗಿದೆ. ಫಲಿತಾಂಶದ ಆತಂಕದಲ್ಲೇ ಮುಳುಗಿ ಹೋಗಿರುವ ಅಭ್ಯರ್ಥಿಗಳು ಒಂದೇ ಸಮನೇ ಚಡಪಡಿಕೆ ವ್ಯಕ್ತಪಡಿಸುವಂತಾಗಿದೆ. ಚುನಾವಣೆಗೆ ಮುನ್ನ ಮತದಾರ ಪ್ರಭುವಿನ ಕೃಪೆಗೆ ಮುಗಿಬಿದ್ದಿದ್ದ ಸ್ಪರ್ಧಾ ಕಲಿಗಳು, ಈಗ ಮತ ಎಣಿಕೆಗೆ ಕ್ಷಣಗಣನೆ ನಡುವೆಯೇ ಹೆಚ್ಚಿನ ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

ಉತ್ತರ ಕನ್ನಡದಲ್ಲಿ ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ..? ಡಿಸೆಂಬರ್ 14ರತ್ತ ಎಲ್ಲರ ಚಿತ್ತ..!
ಜಿದ್ದಾಜಿದ್ದಿಯಿಂದ ಕೂಡಿದ್ದ ಎಂಎಲ್‌ಸಿ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬೀಳಲಿದೆ. ಚುನಾವಣೆಯಲ್ಲಿ ಕಳೆದ ಒಂದು ತಿಂಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌ ರವಿ, ಜೆಡಿಎಸ್‌ ಅಭ್ಯರ್ಥಿ ರಮೇಶ್‌ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಿಸಿ ನಾರಾಯಣಸ್ವಾಮಿ ಅವರು ಪಕ್ಷದ ನಾಯಕರು ಹಾಗೂ ಬೆಂಬಲಿಗರ ಜತೆಗೂಡಿ ಕ್ಷೇತ್ರದಾದ್ಯಂತ ಗೆಲುವಿಗಾಗಿ ಮತ ಬೇಟೆ ನಡೆಸಿದ್ದರು.

ಈಗ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ನಾಯಕರು ಮಾತ್ರವಲ್ಲದೆ ಮತದಾನ ಮಾಡಿದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೂ ಕೂಡ ಫಲಿತಾಂಶ ಏನಾಗುತ್ತದೊ ಎಂಬ ಆತಂಕದಲ್ಲಿ ಮುಳುಗಿದ್ದಾರೆ.

ರಂಗೇರಿದ ಒಕ್ಕಲಿಗರ ಸಂಘದ ಚುನಾವಣೆ; ಬಾಡೂಟ, ಹಣ, ಗಿಫ್ಟ್‌ ಹಂಚಿಕೆಗೆ ಪೈಪೋಟಿ!
ಸೋಲು ಗೆಲುವಿನ ಲೆಕ್ಕಾಚಾರ?
ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಕ್ಷೇತ್ರದಲ್ಲಿಸ್ಥಾಪನೆಯಾಗಿದ್ದ ಬೂತ್‌ಗಳಲ್ಲಿ ನಡೆದಿರುವ ಶೇಕಡವಾರು ಮತದಾನ ಪ್ರಮಾಣ, ನಗರಸಭೆ ಮತ್ತು ಯಾವ್ಯಾವ ಪಂಚಾಯಿತಿಗಳಲ್ಲಿಎಷ್ಟು ಮತದಾನವಾಗಿದೆ ಎಂಬ ಪಟ್ಟಿ ಹಿಡಿದು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮತದಾನದ ಮುನ್ನಾ ದಿನ ನಗದು ಮತ್ತು ಬೆಳ್ಳಿ ನಾಣ್ಯ, ದೇವರ ಫೋಟೊ, ಅರಿಶಿನ ಕುಂಕುಮದ ಪ್ಯಾಕೆಟ್‌, ಎಲೆ ಅಡಿಕೆ ಇರಿಸಿ ಮತದಾರನ ಕೈಗಿಟ್ಟು ಆಣೆ ಪ್ರಮಾಣ ಮಾಡಿಸಿಕೊಂಡಿರುವ ಬಗ್ಗೆ ಮಾತುಗಳು ಕೇಳಿಬಂದಿವೆ. ಮತದಾರನಿಗೆ ನೀಡಿದ ಉಡುಗೊರೆ ತಲುಪಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು. ತಲುಪದಿದ್ದರೆ ಅದಕ್ಕೆ ಕಾರಣ ಗಳೇನು? ಯಾವ್ಯಾವ ಗ್ರಾಪಂಗಳಲ್ಲಿಯಾವ ಪಕ್ಷದ ಬೆಂಬಲಿತರು ಆಡಳಿತ ನಡೆಸುತ್ತಿದ್ದಾರೆ? ಎಷ್ಟು ಮಂದಿ ಮತ ಚಲಾಯಿಸಿದ್ದಾರೆ? ನಮಗೇ ವೋಟು ಹಾಕಿರಬಹುದೇ ಎಂದು ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.

ವಿಧಾನಪರಿಷತ್‌ನ 25 ಸ್ಥಾನಗಳಿಗೆ ಇಂದು ಚುನಾವಣೆ : ಬಲಾಬಲ ಹೆಚ್ಚಿಸಲು ಮೆಗಾಫೈಟ್‌
ಮತದಾನ ಪ್ರಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಮತಗಟ್ಟೆಯಲ್ಲಿಆಗಿರುವ ಮತದಾನ ವಿವರಗಳನ್ನು ಕಲೆ ಹಾಕಿ ತಮ್ಮ ಆಪ್ತರೇಷ್ಟರ ಜತೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಮತದಾರರು ತಮ್ಮ ಹಕ್ಕು ಚಲಾಯಿಸಿ ತಮ್ಮ ನಾಯಕನ ಆಯ್ಕೆಗೆ ಮುದ್ರೆಯೊತ್ತಿದ್ದಾರೆ. ಮತಗಳ ಎಣಿಕೆ ಕಾರ್ಯಕ್ಕೆ ಒಂದು ದಿನ ಮಾತ್ರ ಬಾಕಿಯಿದೆ. ಸದ್ಯಕ್ಕೆ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ 3 ಪಕ್ಷಗಳ ಅಭ್ಯರ್ಥಿಗಳಲ್ಲಿ ದುಗುಡ ಹೆಚ್ಚಿದ್ದರೂ, ಮತ ಎಣಿಕೆ ಮುಗಿಯುವವರೆಗೆ ಆತಂಕದ ಕ್ಷಣಗಳನ್ನು ಕಳೆಯುವಂತಾಗಿದೆ.

ಬೆಟ್ಟಿಂಗ್‌ ಭರಾಟೆ ಜೋರು
ವಿಧಾನ ಪರಿಷತ್‌ ಚುನಾವಣೆ ಸಂಬಂಧ ಸೋಲು ಗೆಲುವಿನ ಚರ್ಚೆಗಳು ನಡೆದಿರುವ ಬೆನ್ನಲ್ಲೇ, ರಾಜ್ಯದಲ್ಲಿ25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಗೆ ಎಷ್ಟು ಸ್ಥಾನಗಳು ಲಭಿಸಲಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಈ ಅಭ್ಯರ್ಥಿಯೇ ಗೆಲ್ಲುತ್ತಾರೆ, ಬೇರೆ ಇಷ್ಟೇ ಮತಗಳ ಅಂತರದಲ್ಲಿ ಪರಾಭವಗೊಳ್ಳುತ್ತಾರೆ ಎಂಬ ಇತ್ಯಾದಿ ವಿಚಾರಗಳ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್‌ ಜೋರಾಗಿಯೇ ನಡೆದಿದೆ.

ಪ್ರಮುಖವಾಗಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರವಿ ಮತ್ತು ಜೆಡಿಎಸ್‌ ಅಭ್ಯರ್ಥಿ ರಮೇಶ್‌ಗೌಡ ಅವರು ಬೆಟ್ಟಿಂಗ್‌ ಆಡುವವರ ಪಾಲಿಗೆ ಫೇವರೆಟ್‌ ಅಭ್ಯರ್ಥಿಗಳಾಗಿದ್ದಾರೆ. ಫಲಿತಾಂಶ ಹೊರಬಿದ್ದಾಗ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಈಗ ಬೆಟ್ಟಿಂಗ್‌ ಕಟ್ಟುವವರ ಪಾಲಿಗಂತೂ ಇವರು ಗೆಲ್ಲುವ ರೇಸ್‌ ಕುದುರೆಯಾಗಿದ್ದಾರೆ. ಮತ ಪೆಟ್ಟಿಗೆಯಲ್ಲಿಅಡಗಿರುವ ಫಲಿತಾಂಶ ಹೊರಬೀಳುವ ಮುನ್ನ ಎಲ್ಲೆಡೆ ಬೆಟ್ಟಿಂಗ್‌ ಭರಾಟೆ ಭಾರಿ ಸದ್ದು ಮಾಡುತ್ತಿದೆ.



Read more