Classroom
ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಕೊನೆಯ ದಿನಾಂಕ ಡಿಸೆಂಬರ್ 31, 2021 ಆಗಿದೆ. ನೀವು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ, ತೆರಿಗೆದಾರರು ದಾಖಲೆಗಳನ್ನು ಒದಗಿಸುವ ಮೊದಲು ಕೆಲವು ವಿವರಗಳನ್ನು ತಿಳಿದಿರುವುದು ಮುಖ್ಯವಾಗಿದೆ.
ಈ ಬಗ್ಗೆ ಆದಾಯ ತೆರಿಗೆ ಇಂಡಿಯಾ ಟ್ವೀಟ್ ಮಾಡಿದೆ. “ಆತ್ಮೀಯ ತೆರಿಗೆದಾರರೇ! ಈ ವಾರಾಂತ್ಯದಲ್ಲಿ ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡುವ ಮೊದಲು ನೀವು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. 2021-22 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಡಿಸೆಂಬರ್ 31, 2021 ಆಗಿದೆ,” ಎಂದು ತೆರಿಗೆದಾರರಿಗೆ ಮತ್ತೆ ಎಚ್ಚರಿಕೆ ನೀಡಿದೆ.
2021 ನೇ ಹಣಕಾಸು ವರ್ಷದಲ್ಲಿ 3 ಕೋಟಿಗೂ ಅಧಿಕ ಐಟಿ ರಿಟರ್ನ್ ಸಲ್ಲಿಕೆ: ಸಚಿವಾಲಯ
ತೆರಿಗೆದಾರರು ITR 1 ಮತ್ತು ITR 2 ರ ವಿವರಗಳ ಬಗ್ಗೆ ತಿಳಿದಿರಬೇಕು ಎಂದು ಆದಾಯ ತೆರಿಗೆ ಇಂಡಿಯಾ ಹೇಳಿದೆ. “ದಾಖಲೆಗಳು ಸಿದ್ಧವೇ? ಈಗ ನಾವು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಅನ್ನು ಪೂರ್ಣಗೊಳಿಸೋಣ. ಈ ವಾರಾಂತ್ಯದಲ್ಲಿ ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡುವ ಮೊದಲು ನೀವು ಕೆಲವು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು,” ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಐಟಿಆರ್ 1, ಐಟಿಆರ್ 2 ಯಾರು ಸಲ್ಲಿಸಬೇಕು?
ಸಂಬಳ ಮತ್ತು ಬಡ್ಡಿ ಆದಾಯ ಮತ್ತು ಒಂದು ಮನೆ ಆಸ್ತಿಯಿಂದ ಆದಾಯ ಹೊಂದಿರುವವರು ITR1 ಅನ್ನು ಸಲ್ಲಿಸಬೇಕು ಎಂದು ಆದಾಯ ತೆರಿಗೆ ಇಂಡಿಯಾ ಟ್ವೀಟ್ ಮಾಡಿದೆ. ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಅಥವಾ ಕ್ಯಾಪಿಟಲ್ ಲಾಭದಿಂದ ಆದಾಯ ಹೊಂದಿರುವವರು ITR2 ಅನ್ನು ಸಲ್ಲಿಸಬೇಕು ಎಂದು ಆದಾಯ ತೆರಿಗೆ ಹೇಳಿದೆ.
ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಸಹಾಯವಾಣಿ ಇಲ್ಲಿದೆ..
ತೆರಿಗೆದಾರರು ಆದಾಯ ತೆರಿಗೆ ಸಹಾಯವಾಣಿ 1800 103 0025 ಮತ್ತು 1800 419 0025 ಅನ್ನು ಸಂಪರ್ಕಿಸಬಹುದು.
ಇನ್ನು ಈ ವೇಳೆಯೇ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ಶೀಘ್ರವೇ ಐಟಿಆರ್ ಸಲ್ಲಿಕೆ ಮಾಡುವಂತೆ ತಿಳಿಸಿದೆ. “ಆತ್ಮೀಯ ತೆರಿಗೆದಾರರೇ, ನಿಮ್ಮ ITR ಅನ್ನು ನೀವು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ನಿಮಗೆ ವಿರಾಳ. 2021-2022 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಡಿಸೆಂಬರ್ 31, 2021 ಆಗಿದೆ. ಈಗಲೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿಬಿಡಿ.” ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.
“ನೀವು ಎಷ್ಟು ಬೇಗ ಫೈಲ್ ಮಾಡುತ್ತೀರೋ ಅಷ್ಟು ಉತ್ತಮವಾಗಿದೆ. 2021-22 ಗಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿ, ಅದನ್ನು ಇ-ವೇರಿಫಿಕೇಶ್‌ಮಾಡಿದ ಮೇಲೆ, ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾಗಲಿದೆ. ಮರುಪಾವತಿಯನ್ನು ಬ್ಯಾಂಕ್‌ಗೆ ಜಮಾ ಮಾಡಲಾಗುತ್ತದೆ,” ಎಂದು ಕೂಡಾ ಆದಾಯ ತೆರಿಗೆ ಇಲಾಖೆಯು ಹೇಳಿದೆ.
1,19,093 ಕೋಟಿಗಿಂತ ಅಧಿಕ ರೂ. ಮರುಪಾವತಿ ಮಾಡಿದ ಸಿಬಿಡಿಟಿ: ಪರಿಶೀಲಿಸುವುದು ಹೇಗೆ?
2020-21ರ ಹಣಕಾಸು ವರ್ಷಕ್ಕೆ ಇಲ್ಲಿಯವರೆಗೆ ಮೂರು ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ತಿಳಿಸಿದೆ. ಇನ್ನೂ ರಿಟರ್ನ್ ಸಲ್ಲಿಸದ ತೆರಿಗೆದಾರರು ಬೇಗನೆ ರಿಟರ್ನ್ ಸಲ್ಲಿಸಲು ಹಣಕಾಸು ಸಚಿವಾಲಯ ಸೂಚಿಸಿದೆ. ಪ್ರತಿದಿನವು ನಾಲ್ಕು ಲಕ್ಷಕ್ಕಿಂತ ಅಧಿಕ ಐಟಿ ರಿಟರ್ನ್ ಸಲ್ಲಿಕೆ ಆಗುತ್ತಿದೆ. ಈ ವರ್ಷ ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕವು ಡಿಸೆಂಬರ್ 31 ಸಮೀಪ ಬರುತ್ತಿರುವ ಹಿನ್ನೆಲೆಯಿಂದಾಗಿ ಪ್ರತಿದಿನ ಐಟಿ ರಿಟರ್ನ್ ಸಲ್ಲಿಕೆ ಅಧಿಕ ಆಗುತ್ತಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಐಟಿ ಇಲಾಖೆಯು ಇ-ಮೇಲ್‌ಗಳು, ಎಸ್‌ಎಂಎಸ್ ಮತ್ತು ಇತರೆ ಮೂಲಗಳ ಮೂಲಕವಾಗಿ ತೆರಿಗೆದಾರರಿಗೆ ಐಟಿ ರಿಟರ್ನ್ ಸಲ್ಲಿಕೆ ಮಾಡುವಂತೆ ತಿಳಿಸುತ್ತಿದೆ. ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮತ್ತಷ್ಟು ವಿಳಂಬವಿಲ್ಲದೆ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ. 2021-22 ರ ಮೌಲ್ಯಮಾಪನ ವರ್ಷಕ್ಕೆ ಇನ್ನೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಎಲ್ಲಾ ತೆರಿಗೆದಾರರು ಕೊನೆಯ ಕ್ಷಣದಲ್ಲಿ ಗಡಿ ಬಿಡಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಐಟಿ ರಿಟರ್ನ್ ಸಲ್ಲಿಕೆ ಮಾಡುವಂತೆ ವಿನಂತಿ ಮಾಡಲಾಗಿದೆ.
English summary
Income Tax Return Filing: ITR 1, ITR 2 Details Explained In Kannada
Income Tax Return Filing: ITR 1, ITR 2 Details Explained In Kannada.
Story first published: Monday, December 13, 2021, 17:23 [IST]