Karnataka news paper

ಪೂರ್ವ ಅಫ್ಗಾನಿಸ್ತಾನದಲ್ಲಿ ಸ್ಫೋಟ, 9 ಮಕ್ಕಳ ಸಾವು: ತಾಲಿಬಾನ್


ಕಾಬೂಲ್: ಪೂರ್ವ ಅಫ್ಗಾನಿಸ್ತಾನದ, ಪಾಕಿಸ್ತಾನ ಗಡಿ ಸಮೀಪದ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತ ನೇಮಿಸಿರುವ ಗವರ್ನರ್‌ ಕಚೇರಿ ತಿಳಿಸಿದೆ.

ಪೂರ್ವ ಅಫ್ಗಾನಿಸ್ತಾನದ ನಗರ್‌ಹಾರ್ ಪ್ರಾಂತ್ಯದ ಲಾಲೊಪರ್‌ ಎಂಬಲ್ಲಿ ಸ್ಫೋಟ ಸಂಭವಿಸಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಸ್ಫೋಟ ಸಂಭವಿಸಿದ ಪ್ರಾಂತ್ಯವು ಇಸ್ಲಾಮಿಕ್ ಸ್ಟೇಟ್ (ಐಎಸ್) ಗ್ರೂಪ್ ಹಿಡಿತದಲ್ಲಿರುವ ಪ್ರದೇಶವಾಗಿದೆ. ಐಎಸ್ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಬಳಿಕ ಹಲವು ದಾಳಿಗಳನ್ನು ನಡೆಸಿದೆ.



Read more from source

[wpas_products keywords=”deals of the day offer today electronic”]