The New Indian Express
ಅಹಮದಾಬಾದ್: ಗುಜರಾತಿನಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಸ್ಮುಖ್ ಪಟೇಲ್ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬುದರ ಕುರಿತಾಗಿ ವಿಶೇಷ ತರಬೇತಿಯನ್ನು ಪೋಷಕರಿಗಾಗಿ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ದೇಹದ ಅತಿ ಹೆಚ್ಚು ಅಂಗಗಳನ್ನು ದಾನ ಮಾಡಿದ ದಾಖಲೆ: ಕೇರಳ ಕುಟುಂಬಕ್ಕೆ ಪ್ರಶಂಸೆಯ ಮಹಾಪೂರ
‘ಪೇರೆಂಟಿಂಗ್ ಫಾರ್ ಪೀಸ್’ ಎನ್ನುವ ಹೆಸರಿನ ಈ ತರಬೇತಿಯನ್ನು ಅವರು 2014ರಿಂದಲೇ ನಡೆಸಿಕೊಂಡುಬರುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಇದನ್ನೂ ಓದಿ: ಕೇರಳ ಮೂಲದ ಟ್ಯಾಕ್ಸಿ ಚಾಲಕನಿಗೆ 50 ಕೋಟಿ ರೂ. ಅಬು ಧಾಬಿ ಬಂಪರ್ ಲಾಟರಿ
ಈ ತರಬೇತಿ ಉಚಿತವಾಗಿದ್ದು, ಮೂರು ತಿಂಗಳ ಅವಧಿಯದ್ದಾಗಿದೆ. ತರಬೇತಿಗಾಗಿ ವಿಶೇಷ ಪಠ್ಯಪುಸ್ತಕವೂ ಇದೆ ಎನ್ನುವುದು ಸೋಜಿಗದ ಸಂಗತಿ. ಮಕ್ಕಳು ಶಾಲೆಯಲ್ಲಿ ಯಾವ ರೀತಿ ಪಾಠಗಳನ್ನು ಕ್ರಮಬದ್ಧವಾಗಿ ಕಲಿಯುತ್ತಾರೋ ಅದೇ ರೀತಿ ಪೋಷಕರು ಮಕ್ಕಳ ಪಾಲನೆ ಕುರಿತಾಗಿ ಈ ತರಬೇತಿ ಶಾಲೆಯಲ್ಲಿ ಕಲಿಯುತ್ತಾರೆ.
ಇದನ್ನೂ ಓದಿ: ಬೆಕ್ಕಿಗೆ ಸೀಮಂತ: ಹೊಸ ಬಟ್ಟೆ, ಕಾಲ್ಗಳಿಗೆ ಬಳೆ: ಕೊಯಮತ್ತೂರಿನಲ್ಲಿ ನಡೆದ ಅಚ್ಚರಿಯ ಘಟನೆ
ತರಬೇತಿ ಶಾಲೆಯಲ್ಲಿ ಮನೋವೈದ್ಯರು ಮಾಗೂ ತಜ್ಞರು ಪೋಷಕರಿಗೆ ತಿಳಿಹೇಳಿಕೊಡುತ್ತಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆತರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು, ವಿದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುವಿಕೆ ಸಂಭವಿಸುವುದಿಲ್ಲ ಎನ್ನುವುದು ಪಟೇಲ್ ಅವರ ನಂಬಿಕೆ.
ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ
Read more
[wpas_products keywords=”deal of the day”]