Karnataka news paper

ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ


ಬೆಂಗಳೂರು: ನಟಿ ನಯನತಾರಾ ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ಈಗಾಗಲೇ ಬಾಲಿವುಡ್ ನಟಿಯರಾದ ಕತ್ರೀನಾ ಕೈಫ್, ಆಲಿಯಾ ಭಟ್ ಸಿನಿಮಾ ರಂಗದ ಜತೆಗೇ ಉದ್ಯಮದಲ್ಲೂ ಛಾಪು ಮೂಡಿಸಿದ್ದಾರೆ.

ನಯನತಾರಾ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ಚರ್ಮರೋಗ ತಜ್ಞರ ಸಹಯೋಗದಲ್ಲಿ ಉದ್ಯಮ ಆರಂಭಿಸುತ್ತಿದ್ದಾರೆ.

ಲಿಪ್‌ಸ್ಟಿಕ್‌ಗಳು ನಯನತಾರಾ ಅವರ ಕಂಪನಿಯ ಪ್ರಮುಖ ಉತ್ಪನ್ನಗಳಾಗಿರಲಿವೆ. ವಿವಿಧ ರೀತಿಯ ಆಯ್ಕೆಗಳು ಒಂದೇ ಬ್ರ್ಯಾಂಡ್ ಅಡಿಯಲ್ಲಿ ದೊರೆಯುವಂತೆ ಮಾಡುವುದು ಅವರ ಉದ್ದೇಶವಾಗಿದೆ.

ಕಡಿಮೆ ಬೆಲೆಗೆ ಉತ್ತಮ ಉತ್ಪನ್ನ ಒದಗಿಸುವುದು ಮತ್ತು ಗುಣಮಟ್ಟ ಹಾಗೂ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರುವುದಾಗಿ ನಯನತಾರಾ ಹೇಳಿದ್ದಾರೆ.



Read More…Source link