The New Indian Express
ಬೆಂಗಳೂರು: ಬೆಂಗಳೂರಿನ ಉಷಾರಾಣಿ ವಿನಯ್ ಎಂಬುವವರು ಐಟಿ ಕ್ಷೇತ್ರದಲ್ಲಿ ಹಲವಾರು ವರ್ಷ ದುಡಿದವರು. ಕೊರೊನಾ ಕಾಲದಲ್ಲಿ ಅವರು ತಮ್ಮ ವೃತ್ತಿ ಕ್ಷೇತ್ರವನ್ನು ಬದಲಾಯಿಸಿದ್ದರು. ಈಗ ಅವರು ಐಟಿ ಉದ್ಯೋಗಿಯಲ್ಲ ಸ್ಕಯೊ ಫಾರ್ಮ್ಸ್ ಹೆಸರಿನ ಸಂಸ್ಥೆಯ ಸ್ಥಾಪಕರಾಗಿದ್ದಾರೆ.
ಇದನ್ನೂ ಓದಿ: ಮಕ್ಕಳ ಪಾಲನೆ ಬಗ್ಗೆ ಗುಜರಾತ್ ಐಪಿಎಸ್ ಅಧಿಕಾರಿಯಿಂದ ಪೋಷಕರಿಗೆ ‘ಪೇರೆಂಟಿಂಗ್ ಫಾರ್ ಪೀಸ್’ ಉಚಿತ ತರಬೇತಿ
ಕುಣಿಗಲ್ ತಾಲ್ಲೂಕಿನ ಯೆಲಗಲವಾಡಿ ಎಂಬ ಗ್ರಾಮದಲ್ಲಿ ಅವರು ಕೃಷಿ ಭೂಮಿ ಖರೀದಿಸಿದ್ದರು. ಅಲ್ಲದೆ ನಗರವನ್ನು ತ್ಯಜಿಸಿ ಗ್ರಾಮದಲ್ಲೇ ವಾಸ ಮಾಡಲು ಶುರುಮಾಡಿದರು.
ಇದನ್ನೂ ಓದಿ: ದೇಹದ ಅತಿ ಹೆಚ್ಚು ಅಂಗಗಳನ್ನು ದಾನ ಮಾಡಿದ ದಾಖಲೆ: ಕೇರಳ ಕುಟುಂಬಕ್ಕೆ ಪ್ರಶಂಸೆಯ ಮಹಾಪೂರ
ಕಳೆದ ಒಂದೂವರೆ ವರ್ಷದಿಂದ ಉಷಾರಾಣಿಯವರು 15 ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ಕುರಿ ಸಾಕಣೆಯಲ್ಲೂ ನಿರತರಾಗಿದ್ದಾರೆ. ವಿಶೇಷ ಎಂದರೆ ಅವರು ಸಾವಯವ ವಿಧಾನದ ಕೃಷಿಯನ್ನು ಅಳವಡಿಸಿಕೊಂಡಿರುವುದು.
ಇದನ್ನೂ ಓದಿ: ಒಡಿಶಾ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿ ಪತ್ತೆ: ಶ್ವೇತಾ ಎಂದು ನಾಮಕರಣ
ತಾವು ಬೆಳೆದ ಉತ್ಪನ್ನವನ್ನು ಕಾರ್ಪೊರೆಟ್ ಸಂಸ್ಥೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ತಮ್ಮ ಸಾವಯವ ಹಣ್ಣುಗಳ ಪ್ರತಿ ಬುಟ್ಟಿಗೆ 500 ರೂ. ಬೆಲೆ ನಿಗದಿ ಪಡಿಸಿದ್ದಾರೆ.
ಇದನ್ನೂ ಓದಿ: ಬೆಕ್ಕಿಗೆ ಸೀಮಂತ: ಹೊಸ ಬಟ್ಟೆ, ಕಾಲ್ಗಳಿಗೆ ಬಳೆ: ಕೊಯಮತ್ತೂರಿನಲ್ಲಿ ನಡೆದ ಅಚ್ಚರಿಯ ಘಟನೆ
ಅಲ್ಲದೆ ಅವರು ವಾರಾಂತ್ಯದ ಸಮಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ(ವೀಕೆಂಡ್ ಫಾರ್ಮಿಂಗ್) ತೊಡಗಿಕೊಳ್ಳಲು ಉತ್ತೇಜನ ನೀಡುತ್ತಿದ್ದಾರೆ. 3.16 ಎಕರೆ ಭೂಮಿಯಲ್ಲಿ ಉಷಾರಾಅಣಿಯವರು ಗಂಧದ ಮರ, ನುಗ್ಗೇ ಕಾಯಿ, ಹುರುಳಿ ಜೋಳವನ್ನೂ ಬೆಳೆಯುತ್ತಿದ್ದಾರೆ.
ಇದನ್ನೂ ಓದಿ: ಪುಡಿಗಾಸು ಕಡಲೆಕಾಯಿ ಸಾಲ ಹಿಂದಿರುಗಿಸಲು ಅಮೆರಿಕದಿಂದ ಭಾರತಕ್ಕೆ ಹಾರಿಬಂದ ಅಣ್ಣ ತಂಗಿ
Read more
[wpas_products keywords=”deal of the day”]