Personal Finance
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ರೂ 1.5 ಲಕ್ಷ ಕೋಟಿ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ಬಹಿರಂಗಪಡಿಸಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2021ರ ಡಿಸೆಂಬರ್ ಕೊನೆಯಲ್ಲಿ ಸುಮಾರು 44.23 ಕೋಟಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳಲ್ಲಿನ ಒಟ್ಟು ಮೊತ್ತವು 1,50,939.36 ಕೋಟಿ ರೂಪಾಯಿ ಆಗಿದೆ.
ದೇಶದ ಆರ್ಥಿಕತೆಯಲ್ಲಿ ಜನರು ಅಧಿಕ ಪ್ರಮಾಣದಲ್ಲಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಾರಂಭ ಮಾಡಿದ ಈ ಪಿಎಂಜಿಡಿವೈ ಯೋಜನೆಗೆ ಕಳೆದ ವರ್ಷ ಆಗಸ್ಟ್‌ಗೆ ಏಳು ವರ್ಷಗಳು ಆಗಿದೆ. 2014ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಜ.10: ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?
ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೋವಿಡ್ ಪರಿಹಾರ ನಿಧಿಗಳಂತಹ ಹಣವನ್ನು ನೇರ ಲಾಭ ವರ್ಗಾವಣೆ ಅಥವಾ ಡಿಬಿಟಿ ಮೂಲಕ ನೇರವಾಗಿ ಜನ್ ಧನ್ ಯೋಜನೆಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಜನರು ಕೈಗೆಟುಕುವ ರೀತಿಯಲ್ಲಿ ಬ್ಯಾಂಕಿಂಗ್, ರವಾನೆ, ಕ್ರೆಡಿಟ್, ವಿಮೆ, ಪಿಂಚಣಿಗಳಂತಹ ಹಣಕಾಸು ಸೇವೆಗಳನ್ನು ಪಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭ ಮಾಡಲಾಗಿದೆ.

ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಜನ್ ಧನ್ ಖಾತೆಗಳಿವೆ?
ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಟ್ಟು 44.23 ಕೋಟಿ ಜನ್ ಧನ್ ಖಾತೆಗಳಲ್ಲಿ 34.9 ಕೋಟಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ, 8.05 ಕೋಟಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಮತ್ತು ಉಳಿದ 1.28 ಕೋಟಿ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿವೆ. ಅಲ್ಲದೆ, 31.28 ಕೋಟಿ ಪಿಎಂಜೆಡಿವೈ ಫಲಾನುಭವಿಗಳಿಗೆ ರುಪೇ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗಿದೆ. ರುಪೇ ಕಾರ್ಡ್‌ಗಳ ಸಂಖ್ಯೆ ಮತ್ತು ಅವುಗಳ ಬಳಕೆಯು ಕಾಲಾನಂತರದಲ್ಲಿ ಹೆಚ್ಚಿರುವುದನ್ನು ನಾವು ಗಮನಿಸಬಹುದು. ಅಂಕಿಅಂಶಗಳ ಪ್ರಕಾರ, 29.54 ಕೋಟಿ ಜನ್ ಧನ್ ಖಾತೆಗಳು ಗ್ರಾಮೀಣ ಮತ್ತು ಸೆಮಿ ಅರ್ಬನ್ ಬ್ಯಾಂಕ್ ಶಾಖೆಗಳಲ್ಲಿವೆ. ಸಡಿಸೆಂಬರ್ 29, 2021ರವರೆಗಿನ ಅಂಕಿ ಅಂಶಗಳ ಪ್ರಕಾರ ಸುಮಾರು 24.61 ಕೋಟಿ ಖಾತೆದಾರರು ಮಹಿಳೆಯರಾಗಿದ್ದಾರೆ. ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಪಿಎಂಜೆಡಿವೈ ಖಾತೆಗಳನ್ನು ತೆರೆಯಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ, ಜನ್ ಧನ್ ಖಾತೆಗಳು ಸೇರಿದಂತೆ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವುದು ಮುಖ್ಯವಾಗಿದೆ. ಜನ್ ಧನ್ ಖಾತೆದಾರರು ನಡೆಸುವ ವಹಿವಾಟುಗಳನ್ನು ಅವಲಂಬಿಸಿ, ಯಾವುದೇ ಜನ್ ಧನ್ ಖಾತೆಗಳಲ್ಲಿನ ಬ್ಯಾಲೆನ್ಸ್ ದಿನದಿಂದ ದಿನಕ್ಕೆ ಬದಲಾಗಬಹುದು. ಇನ್ನು ಬ್ಯಾಲೆನ್ಸ್ ಶೂನ್ಯ ಕೂಡಾ ಆಗಬಹುದು. ಡಿಸೆಂಬರ್ 8, 2021 ರ ಹೊತ್ತಿಗೆ, ಶೂನ್ಯ ಬ್ಯಾಲೆನ್ಸ್ ಖಾತೆಗಳ ಒಟ್ಟು ಸಂಖ್ಯೆ 3.65 ಕೋಟಿ ಆಗಿತ್ತು, ಇದು ಒಟ್ಟು ಜನ್ ಧನ್ ಖಾತೆಗಳ ಶೇಕಡಾ 8.3 ರಷ್ಟಿದೆ ಎಂದು ಸರ್ಕಾರ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿತ್ತು.
ಜನ್ ಧನ್ ಖಾತೆಯಿಂದ ಓವರ್ ಡ್ರಾಫ್ಟ್ (OD) ಸೌಲಭ್ಯವನ್ನು ಕೂಡ ಪಡೆಯಬಹುದು. ನಿಮ್ಮ ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ (zero balance)ಇದ್ದರೂ ನೀವು 10 ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಸರ್ಕಾರ ಈಗ ಅವಕಾಶ ಕಲ್ಪಿಸಿದೆ. ಈ ಹಿಂದೆ 5,000ರೂ. ತನಕ ಮಾತ್ರ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಅವಕಾಶವಿತ್ತು.
English summary
PM Jan Dhan Yojna: Deposits in Jan Dhan accounts cross Rs 1.5 lakh crore
PM Jan Dhan Yojna: Deposits in Jan Dhan accounts cross Rs 1.5 lakh crore.
Story first published: Monday, January 10, 2022, 16:10 [IST]
Read more…
[wpas_products keywords=”deal of the day”]