Karnataka news paper

‘ಪಾರು’ ಧಾರಾವಾಹಿಯಲ್ಲಿ ಆದಿ ನಿಶ್ಚಿತಾರ್ಥ ಯಾರ ಜೊತೆ? ರೋಚಕ ತಿರುವಿನಲ್ಲಿದೆ ಈ ಸೀರಿಯಲ್


ಹೈಲೈಟ್ಸ್‌:

  • ‘ಪಾರು’ ಧಾರಾವಾಹಿಯಲ್ಲಿ ಶರತ್ ಪದ್ಮನಾಭ್, ಮೋಕ್ಷಿತಾ ಪೈ ನಟನೆ
  • ‘ಪಾರು’ ಧಾರಾವಾಹಿಯಲ್ಲಿ ಆದಿತ್ಯ ನಿಶ್ಚಿತಾರ್ಥ ಯಾರ ಜೊತೆ ನಡೆಯಲಿದೆ?
  • ‘ಪಾರು’ ಧಾರಾವಾಹಿಯಲ್ಲಿ ಮುಂಬರುವ ಟ್ವಿಸ್ಟ್ ಏನು?

ಆರಂಭದಿಂದಲೂ ‘ಪಾರು’ ಧಾರಾವಾಹಿ ಅತ್ಯುತ್ತಮ ತಾರಾಗಣ ,ರೋಚಕ ತಿರುವು, ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಿದೆ. ಟಿಆರ್‌ಪಿಯಲ್ಲಿ ಟಾಪ್ 5 ಸ್ಥಾನದಲ್ಲಿರುವ ‘ಪಾರು’ ಧಾರಾವಾಹಿಯಲ್ಲಿ ಆದಿ ನಿಶ್ಚಿತಾರ್ಥ ಯಾರ ಜೊತೆ ನಡೆಯತ್ತೆ ಎಂದು ಕಾದು ನೋಡಬೇಕಿದೆ.

ವಿನಯಾ ಪ್ರಸಾದ್, ಎಸ್ ನಾರಾಯಣ್ ನಟನೆ ( vinaya prasad, s narayan )
ನಟಿ ವಿನಯಾ ಪ್ರಸಾದ್ ಅವರು ಅಖಿಲಾಂಡೇಶ್ವರಿ ಮತ್ತು ಎಸ್ ನಾರಾಯಣ್ ಅವರು ವೀರಯ್ಯದೇವ ಎಂಬ ಗತ್ತಿನ ಪಾತ್ರಗಳಲ್ಲಿ ಕಿರುತೆರೆ ಮಂದಿ ಮುಂದೆ ಬರುತ್ತಿದ್ದಾರೆ. ಇದೀಗ ಇವರಿಬ್ಬರೂ ಮುಖಾಮುಖಿಯಾಗುವ ಸನ್ನಿವೇಶಗಳು, ಇಬ್ಬರೂ ಅವರವರ ಪಾತ್ರಗಳನ್ನು ನಿರ್ವಹಿಸುತ್ತಿರುವ ರೀತಿ ಈಗಾಗಲೇ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ.

‘ಪಾರು’ ಧಾರಾವಾಹಿ ಕಥೆಯೇನು? ಮುಂಬರುವ ಟ್ವಿಸ್ಟ್ ಏನು?
( paaru serial )
ಅರಸನಕೋಟೆಯ ಆಳುವ ಅರಸಿಯಷ್ಟೇ ಅಲ್ಲದೆ ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ , ತಾಯಿ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು , ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ ,ಒಳ್ಳೆಯ ಗುಣಗಳೊಂದಿಗೆ ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಆದಿ ಮತ್ತು ಪಾರು ಇವರೆಲ್ಲರೂ ಮೆಚ್ಚುವ ಪ್ರೀತು , ಜನನಿ ಹೀಗೆ ವಿಭಿನ್ನ ಬಗೆಯ ಎಲ್ಲಾ ಪಾತ್ರಗಳೂ ತನ್ನದೇ ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ. ಶ್ರೀಮಂತವಾದ ಸೆಟ್, ಭವ್ಯ ಬಂಗಲೆ, ಪ್ರತಿದೃಶ್ಯದ ಸಿರಿವಂತಿಕೆ ವೀಕ್ಷಕರಿಗೆ ಸಿನಿಮಾದ ಅನುಭವ ನೀಡಬೇಕು ಎನ್ನುವ ಆಶಯದಲ್ಲಿ ಧಾರಾವಾಹಿ ತಂಡವಿದೆ.

ಮೊದಲ ಧಾರಾವಾಹಿ ಬೇಗ ಮುಗಿದಿದ್ದು ಬೇಜಾರಾಗಿತ್ತು: ‘ಪಾರು’ ಧಾರಾವಾಹಿ ನಟಿ ಪವಿತ್ರಾ ಬಿ ನಾಯ್ಕ್!

ಅಖಿಲಾಂಡೇಶ್ವರಿ, ವೀರಯ್ಯದೇವನ ಕಾಳಗದಲ್ಲಿ ಗೆಲುವು ಯಾರಿಗೆ?
ಪ್ರೀತಿ, ಸ್ನೇಹ, ಕಾಳಜಿ, ಆದರ್ಶ, ವಾತ್ಸಲ್ಯ, ಮನರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 800 ಸಂಚಿಕೆಗಳ ಸನಿಹದಲ್ಲಿರುವ ಈ ಧಾರಾವಾಹಿಯಲ್ಲಿ ಅರಸನಕೋಟೆಯ ಹಿರಿ ಮಗ ಆದಿತ್ಯ ಅವರ ನಿಶ್ಚಿತಾರ್ಥದ ಹಂತದಲ್ಲಿದ್ದು ಅಖಿಲಾಂಡೇಶ್ವರಿಯ ಪ್ರತಿಷ್ಠೆ ಮತ್ತು ಬಡವರ ಧ್ವನಿಯಾಗಿರುವ ವೀರಯ್ಯದೇವನ ಹಠದಲ್ಲಿ ಗೆಲುವು ಯಾರಿಗೆ ಎನ್ನುವುದು ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಆದಿ-ಪಾರು ಪ್ರೀತಿಗೆ ವಿರೋಧ ವ್ಯಕಪಡಿಸುತ್ತಿರುವ ಅರಸನಕೋಟೆ ಅಖಿಲಾಂಡೇಶ್ವರಿ ಮತ್ತು ಪರವಾಗಿ ನಿಂತಿರುವ ವೀರಯ್ಯದೇವ ಇವರಿಬ್ಬರ ಪ್ರತಿನಡೆಯು ಬಹಳ ರೋಚಕವಾಗಿದೆ.

ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ( Dileep Raj ) ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲೀಪ್‌ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಗುರುಪ್ರಸಾದ್ ಮೂಡೇನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಬದಲಾದ ಸಮಯದಲ್ಲಿ ‘ಪಾರು’ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

‘ಪಾರು’ ನಟಿ ಮೋಕ್ಷಿತಾ ಪೈ 9 ಸಿನಿಮಾ ರಿಜೆಕ್ಟ್‌ ಮಾಡಿ, ‘ದುನಿಯಾ’ ವಿಜಯ್‌ ಕೊಟ್ಟ ಆಫರ್‌ ಒಪ್ಪಿಕೊಂಡಿದ್ದೇಕೆ?

ನಟಿ ಮೋಕ್ಷಿತಾ ಪೈ ಅವರು ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಪಾರು ಆಗಿ, ಆದಿಯಾಗಿ ಶರತ್ ಪದ್ಮನಾಭ್, ಪವಿತ್ರಾ ನಾಯ್ಕ್ ಅವರು ಜನನಿಯಾಗಿ, ಸಿದ್ದು ಮೂಲಿಮನಿ ಅವರು ಪ್ರೀತಂ ಆಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಪಾರು ಧಾರಾವಾಹಿ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ತುಂಬ ಖುಷಿ ಇದೆ’- ನಟಿ ಮೋಕ್ಷಿತಾ ಪೈ



Read more