Karnataka news paper

Rashmika Mandanna : ಇದೇನಿದು ರಶ್ಮಿಕಾ.. ನಿಮ್ಮ ಹೆಸರು ರಶ್ಮಿಕಾ ಮಡೋನಾ ನಾ?


ಹೈಲೈಟ್ಸ್‌:

  • ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹೆಸರು ಚೇಂಜ್..!
  • ರಶ್ಮಿಕಾ ಮಂದಣ್ಣ ಅಲ್ಲ.. ರಶ್ಮಿಕಾ ಮಡೋನಾ..!
  • ಇದೇನು.. ರಶ್ಮಿಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಬಿಟ್ರಾ..?

ಕನ್ನಡ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ. ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಸಾನ್ವಿ ಜೋಸೆಫ್ ಪಾತ್ರ ನಿಭಾಯಿಸಿದ್ದ ರಶ್ಮಿಕಾ ಮಂದಣ್ಣ ‘ಕರ್ನಾಟಕದ ಕ್ರಶ್’ ಎಂದೇ ಜನಪ್ರಿಯತೆ ಪಡೆದರು. ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಪಡೆದ ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ಟಾಲಿವುಡ್‌ನಲ್ಲಿ ಸದ್ಯ ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ‘ಗೀತ ಗೋವಿಂದಂ’, ‘ದೇವದಾಸ್, ‘ಡಿಯರ್ ಕಾಮ್ರೇಡ್’, ‘ಸರಿಲೇರು ನೀಕೆವ್ವರು’ ಹಿಟ್ ಆದ ಬಳಿಕ ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ’ ಸಿನಿಮಾದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ಲಭಿಸಿತು.

5 ವರ್ಷಗಳ ಸಿನಿ ಜರ್ನಿಯಲ್ಲಿ ರಶ್ಮಿಕಾ ಮಂದಣ್ಣ ಕಲಿತ 9 ಮುಖ್ಯ ಪಾಠ..!
‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯ ಪಾತ್ರ ನಿಭಾಯಿಸಿದ್ದಾರೆ. ಅಂದ್ಹಾಗೆ, ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಏನಂತ ಇದೆ ಗೊತ್ತಾ? ‘ಪುಷ್ಪ: ದಿ ರೈಸ್’ ಚಿತ್ರ ಮುಗಿದ ಬಳಿಕ ಬರುವ ಟೈಟಲ್ ಕಾರ್ಡ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ‘ರಶ್ಮಿಕಾ ಮಡೋನಾ’ ಆಗಿದೆ..!!

‘ಪುಷ್ಪ’ ಹಿಟ್ ಆಗುತ್ತಿದ್ದಂತೆಯೇ ರಶ್ಮಿಕಾ ಸಂಭಾವನೆ ಏರಿಕೆ! ಒಂದು ಸಿನಿಮಾಗೆ ಎಷ್ಟು ಚಾರ್ಜ್‌ ಮಾಡ್ತಾರೆ ‘ಕಿರಿಕ್‌’ ಬೆಡಗಿ?
ಇತ್ತೀಚೆಗಷ್ಟೇ ‘ಪುಷ್ಪ: ದಿ ರೈಸ್’ ಸಿನಿಮಾ ಒಟಿಟಿಯಲ್ಲೂ ಬಿಡುಗಡೆಯಾಯ್ತು. ಒಟಿಟಿಯಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ನೋಡಿ ರಶ್ಮಿಕಾ ಮಂದಣ್ಣ ಹೆಸರು ‘ರಶ್ಮಿಕಾ ಮಡೋನಾ’ ಆಗಿರೋದನ್ನ ಕಂಡ ಕನ್ನಡ ವೀಕ್ಷಕರು ಸ್ಕ್ರೀನ್‌ಶಾಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

‘’ರಶ್ಮಿಕಾ ತಮ್ಮ ಹೆಸರನ್ನ ಬದಲಾಯಿಸಿಕೊಂಡುಬಿಟ್ರಾ?’’, ‘’ಚಿತ್ರತಂಡದವರೇ ರಶ್ಮಿಕಾ ಅವರ ಹೆಸರನ್ನು ಬದಲಾಯಿಸಿಬಿಟ್ಟಿತಾ?’’, ‘’ಯಾರಿದು ಮಡೋನಾ?’’ ಅಂತೆಲ್ಲಾ ಸಿನಿಪ್ರಿಯರು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಹೊಸ ಇತಿಹಾಸ ಸೃಷ್ಟಿಸಿದ ‘ಪುಷ್ಪ’: 5 ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್!
ತುಂಬಾ ಕನ್‌ಫ್ಯೂಶನ್
ತೆಲುಗಿನ ಹಿಟ್ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರೂ, ತೆಲುಗು ಸಿನಿ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಕೆಲವರಿಗೆ ಸರಿಯಾಗಿ ಗೊತ್ತೇ ಇಲ್ಲ. ರಶ್ಮಿಕಾ ಮಂದಣ್ಣ ಹೆಸರಿನ ಬಗ್ಗೆ ಅನೇಕ ಬಾರಿ ಕನ್‌ಫ್ಯೂಶನ್ ಆಗಿದೆ. ಮೆಗಾ ಸ್ಟಾರ್ ಚಿರಂಜೀವಿ ಕೂಡ ಒಮ್ಮೆ ರಶ್ಮಿಕಾ ಮಂದಣ್ಣ ಅವರನ್ನ ‘ರಶ್ಮಿ ಮಂಡುಕ’ ಅಂತ ಹೇಳಿದ್ದರು ಅನ್ನೋದು ನಿಮಗೆ ಗೊತ್ತಾ..?

ಹೌದು.. ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರನ್ನ ‘ರಶ್ಮಿ ಮಂಡುಕ’ ಅಂತ ಚಿರಂಜೀವಿ ಕರೆದಿದ್ದರು. ಆಗಲೂ ಸೋಷಿಯಲ್ ಮೀಡಿಯಾದಲ್ಲಿ ‘ರಶ್ಮಿ ಮಂಡುಕ’ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

‘ಪುಷ್ಪ’ ಪಾರ್ಟ್‌ 2ರಲ್ಲಿ ‘ಡಾಲಿ’ ಧನಂಜಯ್ ನಟಿಸುತ್ತಾರೋ, ಇಲ್ಲವೋ? ಸುಕುಮಾರ್‌ ನೀಡಿದ್ರು ಸ್ಪಷ್ಟನೆ
ಸರ್‌ನೇಮ್
ಅಸಲಿಗೆ, ರಶ್ಮಿಕಾ ಅವರ ಸರ್‌ನೇಮ್ ‘ಮಂದಣ್ಣ’. ರಶ್ಮಿಕಾ ಅವರ ತಂದೆಯ ಹೆಸರು ಮದನ್ ಮಂದಣ್ಣ. ಹೀಗಾಗಿ, ರಶ್ಮಿಕಾ ಅವರ ಲಾಸ್ಟ್ ನೇಮ್ ‘ಮಂದಣ್ಣ’ ಅಂತಲೇ ಇದೆ. ಹೆಸರಿನ ವಿಚಾರವಾಗಿ ಆಗುತ್ತಿರುವ ಕನ್‌ಫ್ಯೂಶನ್ಅನ್ನು ಸರಿಪಡಿಸಲು ರಶ್ಮಿಕಾ ಮಂದಣ್ಣ ಕೊಂಚ ಆಸಕ್ತಿ ವಹಿಸಿದರೆ, ಅಭಿಮಾನಿಗಳಿಗೆ ಬೇಸರವಾಗುವುದು ತಪ್ಪುತ್ತದೆ.



Read more

[wpas_products keywords=”deal of the day sale today offer all”]