Karnataka news paper

ಹುಡುಗ ಕೈಕೊಟ್ಟ ಮೇಲೆ ನಾನು ಬೋಲ್ಡ್‌ ಆದೆ: ನಿಯಾ ಶರ್ಮಾ


ಮುಂಬೈ: ಕಿರುತೆರೆಯ ಬೋಲ್ಡ್‌ ಬೆಡಗಿ ಎಂದೇ ಖ್ಯಾತಿಯಾಗಿರುವ ನಿಯಾ ಶರ್ಮಾ ಮೊದಲ ಸಲ ತಮ್ಮ ತುಂಡು ಬಟ್ಟೆಯ ಬಗ್ಗೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೋಲ್ಡ್‌ ಫೋಟೊಗಳನ್ನು ಹಂಚಿಕೊಳ್ಳುವ, ಸಿನಿಮಾ ಅಥವಾ ಕಿರುತೆರೆ ಸಮಾರಂಭಗಳಲ್ಲಿ ಸಖತ್‌ ಹಾಟ್‌ ಆಗಿ ಕಾಣುವ ನಿಯಾ ಶರ್ಮಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ನಿಯಾ ಯಾವಾಗಲು ಬೋಲ್ಡ್‌ ಆಗಿ, ಅರೆ ನಗ್ನವಾಗಿ ಕಾಣಿಸಿಕೊಳ್ಳುವುದು ಮಾಮೂಲಿ? ಇದು ಹೇಗೆ ಎಂಬುದು ಆಪ್ತರ ಪ್ರಶ್ನೆಯಾಗಿತ್ತು. ಇದಕ್ಕೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.

ನಾನು ಸಮಾರಂಭಗಳಲ್ಲಿ ಅರೆ ಬೆತ್ತೆಲೆಯಾಗಿ ಕಾಣಿಸಿಕೊಳ್ಳಲು ಒಂದು ಕಾರಣ ಇದೆ, ನನ್ನ ಬಾಯ್‌ ಫ್ರೆಂಡ್‌ ಕೈಕೊಟ್ಟು ಹೋಗಿದ್ದರಿಂದ ನಾನು ಅರೆ ನಗ್ನಳಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಉತ್ತರ ಕೊಟ್ಟಿದ್ದಾರೆ.

ಆದರೆ ಆ ಬಾಯ್‌ ಫ್ರೆಂಡ್‌ ಹೆಸರನ್ನು ಹೇಳಿಲ್ಲ! ಅವನು ನನ್ನ ಉಡುಪು ಮತ್ತು ಅರೆ ನಗ್ನತೆಯ ಬಗ್ಗೆ ಮಾತನಾಡುತ್ತಿದ್ದ, ಇದು ನನಗೆ ಕಸಿವಿಸಿಯಾಗುತ್ತಿತ್ತು. ಕೊನೆಗೆ ಅವನು ನನ್ನಿಂದ ದೂರವಾದ, ಆಗಿನಿಂದ ನಾನು ತುಂಡು ಬಟ್ಟೆ ಹಾಕುತ್ತಿರುವೆ ಎಂದು ಹೇಳಿದ್ದಾರೆ.

ಓದಿ: 

ನಿಯಾ ಶರ್ಮಾ ವೆಬ್‌ಸಿರೀಸ್‌ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ವಿಡಿಯೊ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನೋಡಿದರೆ ನಿಯಾ ಶರ್ಮಾ ಅವರ ಉಡುಪಿನ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ.

ಓದಿ:  



Read More…Source link