Karnataka news paper

ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್; ಯಾವುದೇ ಒತ್ತಡಕ್ಕೂ ಮಣಿಯಲ್ಲ; ಆರಗ ಜ್ಞಾನೇಂದ್ರ


ಹೈಲೈಟ್ಸ್‌:

  • ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್‌ ವಿಚಾರವಾಗಿ ಯಾವುದೇ ಒತ್ತಡಕ್ಕೂ ಮಣಿಯಲ್ಲ
  • ಈಗಾಗಲೇ ಒಬ್ಬರನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ
  • ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಬೆಂಗಳೂರು: ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡಕ್ಕೆ ಮಣಿಯಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ನಮ್ಮ ಮಂತ್ರಿ ಸೋಮಶೇಖರ್ ಮಗನ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ರು. ಈಗಾಗಲೇ ಒಬ್ಬರನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಯಾವ ಒತ್ತಡಕ್ಕೂ ಮಣಿಯಲ್ಲ.
ಯಾರೇ ಪ್ರಭಾವಿಗಳಿದ್ರೂ, ಅವರನ್ನು ಬಿಡೋ ಕೆಲಸ ಆಗಲ್ಲ.ನಮ್ಮ ಪೊಲೀಸರು ಬಂಧಿಸೋ ಕೆಲಸ ಮಾಡ್ತಾರೆ ಎಂದರು.

ಎಸ್‌ಟಿ ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್! ಓರ್ವ ಆರೋಪಿ ಬಂಧನ

ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಕೆ ಶಿವಕುಮಾರ್ ಹೇಳಿದ್ರು ನಮಗೆ ಅನುಮತಿ ಬೇಕಿಲ್ಲ ಅಂತ. ಅವರು ಹೀಗೆ ಮಾಡಬಾರದಿತ್ತು.ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಒಂದು ರಾಜಕೀಯ ಪಕ್ಷ, ಮಾಡಬೇಕಾದ್ದು ಮಾಡ್ತೀವಿ ಅಂತ ಹೊರಟ್ರು. ಪೊಲೀಸ್ ಫೋರ್ಸ್ ಇದೆ, ಆಗೋದೇ ಇಲ್ಲ ಅಂತಲ್ಲ ಎಂದು ಎಚ್ಚರಿಕೆ ನೀಡಿದರು.

ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು. ಜನರು ಕೂಡ ಕರೆ ಮಾಡ್ತಿದ್ದಾರೆ, ಹೀಗೇ ಮಾಡಬಾರದು ಅಂತ ಎಂದ ಅವರು,ಬೆಂಗಳೂರು ಬರುವಾಗ ತಡೆಯೋ ವಿಚಾರವಾಗಿ, ಬೆಂಗಳೂರಿನಲ್ಲಿ ಈಗಾಗಲೇ ಹತ್ತು ಸಾವಿರ ಕೇಸ್ ಬರ್ತಿದೆ.ಶ್ರಮಿಕ ವರ್ಗ ಬಹಳಷ್ಟು ಕಷ್ಟ ಪಡ್ತಿದ್ದಾರೆ.ಅವರನ್ನ ತಡೆಯೋ ನಿಟ್ಟಿನಲ್ಲಿ ಕ್ರಮ ಕೈಗೊಳ್ತಿದ್ದಾರೆ. ಬರ್ತಿರೋದು ಫೇಕ್ ಅಂತ ಹೇಳಿಕೊಂಡು ಓಡಾಡ್ತಿದ್ದಾರೆ, ಹೇಳಲಿ. ಸೋಂಕು ಮತ್ತೆ ಉಲ್ಬಣ ಆದ್ರೆ ಕಾಂಗ್ರೆಸ್ ಪಕ್ಷದವರೇ ಕಾರಣ ಎಂದರು.

ಬೆಂಗಳೂರಿನಲ್ಲಿ ಏನು ಮಾಡಬೇಕು ಅನ್ನೋದು ನೋಡ್ತೀವಿ. ಶಿವಕುಮಾರ್ ಮಾಸ್ಕ್ ಧರಿಸದೇ ಓಡಾಡ್ತಿದ್ದಾರೆ. ಇವರ ಜೀವ ಮುಖ್ಯ, ಆರೋಗ್ಯ ಮುಖ್ಯ. ಟೆಸ್ಟ್ ಮಾಡಲು ಹೋದ್ರೆ, ಗದರಿಸಿ ಕಳಿಸಿದ್ದಾರೆ.ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ. ಯಾವ ರೀತಿಯ ಜ್ವರ ಅಂತ ಗೊತ್ತಿಲ್ಲ. ಆರೋಗ್ಯವಾಗಿ ಇರಲಿ ಅನ್ನೋದೇ ನಮ್ಮ ಉದ್ದೇಶ ಎಂದರು.



Read more

[wpas_products keywords=”deal of the day sale today offer all”]