Karnataka news paper

ಸಿದ್ದರಾಮಯ್ಯನವ್ರಿಗೆ ಜ್ವರ ಬಂತು ಅಂದಾಗ ನನಗೆ ಬಹಳ ಆತಂಕವಾಯ್ತು; ಗೋವಿಂದ ಕಾರಜೋಳ


ಬಾಗಲಕೋಟೆ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ವೇಳೆ ಈ ವಿಚಾರ ಪ್ರಸ್ತಾಪಿಸಿದ ಸಚಿವ ಗೋವಿಂದ ಕಾರಜೋಳ, ನಿನ್ನೆ ನನಗೆ ಬಹಳ ಆತಂಕವಾಯ್ತು. ಮಾಜಿ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಹಿಂದುಳಿದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ತೀವ್ರ ಜ್ವರ ಕಾಣಿಸಿಕೊಂಡು ವಾಪಸ್ಸಾದರು. ನಾನು ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ. ಅವರು ಆರೋಗ್ಯದ ಕಡೆ ಗಮನ ಕೊಡಬೇಕು. ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದರು.
2013ರಲ್ಲೂ ಪಾದಯಾತ್ರೆ ಮಾಡಿದ್ರಿ, ಈಗ ಮೇಕೆದಾಟು ಗಿಮಿಕ್ ಮಾಡ್ತಿದ್ದೀರಿ; ಕಾಂಗ್ರೆಸ್‌ಗೆ ಕಾರಜೋಳ ಟಾಂಗ್‌
ಇನ್ನು ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಹನ್ನೆರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ರಾಜಕೀಯ ಹೋರಾಟಕ್ಕಾಗಿ, ತಮ್ಮೊಳಗಿನ ನಾಯಕತ್ವದ ಪೈಪೋಟಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಮಾಡುವ ಪ್ರಾಮಾಣಿಕ ಪಾದಯಾತ್ರೆ ಅಲ್ಲ ಎಂದು ಹೇಳಿದರು. ಅಲ್ಲದೆ, ನಾನು ಇವತ್ತು ಕೂಡ ಕಾಂಗ್ರೆಸ್‌ನ ಪ್ರತಿಪಕ್ಷದ ನಾಯಕರಿಗೆ ವಿನಂತಿ ಮಾಡುತ್ತೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೆಚ್ಚು ಜನ ಸೇರಬಾರದು, ಎಲ್ಲರೂ ಮಾಸ್ಕ್ ಧರಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ನಮ್ಮ ಸರ್ಕಾರ ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಹೇಳಿದರು.

ಇನ್ನು ಮೇಕೆದಾಟು ಮಾದರಿಯಲ್ಲೇ 2013ರಲ್ಲಿ ಪಾದಯಾತ್ರೆ ಮಾಡಿದ್ರಿ. ಕೂಡಲಸಂಗಮನಾಥನ ಸಾಕ್ಷಿಯಾಗಿ ಕಾಯಿಕಟ್ಟಿ ಪ್ರತಿವಷ೯ 10 ಸಾವಿರ ಕೋಟಿ ಕೊಡ್ತಿವಿ ಅಂದ್ರಿ. ಪಾದಯಾತ್ರೆ ಮಾಡಿ ಬಂದು 5 ವಷ೯ ಅಧಿಕಾರ ಇದ್ರೂ ಏನೂ ಮಾಡಲಿಲ್ಲ. ಅನುದಾನ ಕೊಡಲಿಲ್ಲ. ಹೀಗಾಗಿ 2018ರಲ್ಲಿ ಜನ ನಿಮಗೆ ಬುದ್ಧಿ ಸಹ ಕಲಿಸಿದ್ದಾರೆ. ಅಂದಿನ ನಿಮ್ಮ ಸಕಾ೯ರಕ್ಕೆ ನಾಚಿಕೆ ಆಗಬೇಕು. ಈಗ ಮೇಕೆದಾಟು ಗಿಮಿಕ್ ಮಾಡ್ತಿದಿರಿ. ವೀರಾವೇಶದಿಂದ ಮಾತನಾಡುವ ಎಂ.ಬಿ.ಪಾಟೀಲರೇ ಈಗ ಉತ್ತರ ಕೊಡಿ. ಈಗಲೂ ಸಹ ಮೇಕೆದಾಟು ಬಗ್ಗೆ ದಾಖಲೆ ಸಮೇತ ಉತ್ತರ ಕೊಟ್ಟಿದ್ದೀನಿ ಎಂದು ಕಾರಜೋಳ ಹೇಳಿದರು.



Read more

[wpas_products keywords=”deal of the day sale today offer all”]