Karnataka news paper

ಚಿಕ್ಕಮಗಳೂರು ಜಿಲ್ಲೆಯಲ್ಲಿ ಏರುಗತಿಯಲ್ಲಿ ಕೊರೊನಾ; 150ರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ!


ಹೈಲೈಟ್ಸ್‌:

  • ಚಿಕ್ಕಮಗಳೂರಿನಲ್ಲಿ ಒಂದಂಕಿಯಲ್ಲೇ ಗಿರಕಿ ಹೊಡೆಯುತ್ತಿದ್ದ ಪ್ರಕರಣಗಳು ಈಗ ಎರಡು ಅಂಕಿಗೆ ಬಂದಿವೆ
  • ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು ಅದರ ಬಿಸಿ ಜಿಲ್ಲೆಗೂ ತಟ್ಟಿದೆ
  • ಶಾಲಾ ಕಾಲೇಜು, ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಸೋಂಕು ಕಾಣಿಸಿಕೊಂಡಿದೆ

ಕೆ.ಎಚ್‌.ರುದ್ರಯ್ಯ,ಚಿಕ್ಕಮಗಳೂರು
ಚಿಕ್ಕಮಗಳೂರು:
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ -19 ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಒಂದಂಕಿಯಲ್ಲೇ ಗಿರಕಿ ಹೊಡೆಯುತ್ತಿದ್ದ ಪ್ರಕರಣಗಳು ಈಗ ಎರಡು ಅಂಕಿಗೆ ಬಂದಿವೆ. ಈ ಮಧ್ಯೆ ಕ್ವಾರಂಟೈನ್‌ ಕೇಂದ್ರಗಳ ಮರು ಆರಂಭವಾಗದಿರವುದು ಮತ್ತಷ್ಟು ಕಳವಳ ಹುಟ್ಟಿಸಿದೆ.

ಕಳೆದ 2021 ಆಗಸ್ಟ್‌ ನಿಂದ ಡಿಸೆಂಬರ್‌ವರೆಗೆ ನಿತ್ಯ 2,3,4 ಹೆಚ್ಚೆಂದರೆ 8 ಪ್ರಕರಣಗಳ ಆಸು ಪಾಸಿನಲ್ಲೆ ಕೋವಿಡ್‌ ಸಂಖ್ಯೆ ಇತ್ತು. ಇದು ಜನ ಸಾಮಾನ್ಯರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಕೊರೊನಾ ಹೋಗೇ ಬಿಟ್ಟಿದೆ ಎಂದು ಭಾವಿಸಿದ ಬಹುತೇಕರು ಮಾಸ್ಕ್‌ ಮೂಲೆಗೆ ಸರಿಸಿ ಸಾಮಾಜಿಕ ಅಂತರವಿಲ್ಲದೆ ಮೈಮರೆತಿದ್ದರು. ಈ ನಡುವೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು ಅದರ ಬಿಸಿ ಜಿಲ್ಲೆಗೂ ತಟ್ಟಿದೆ. ಜನವರಿ 6ರವರೆಗೆ ಒಂದಂಕಿಯಲ್ಲೇ ಇದ್ದ ಪ್ರಕರಣಗಳು ಜ.7 ರಂದು 24, ಜ.8 ರಂದು 22 ಜಿಲ್ಲೆಯಲ್ಲಿ ದಾಖಲಾಗಿವೆ.

ಒಂದೇ ದಿನ 80 ಪ್ರಕರಣ
ಜ.9 ರಂದು 24 ಗಂಟೆ ಅವಧಿಯಲ್ಲಿ ಒಟ್ಟು 80ಕ್ಕೂ ಹೆಚ್ಚು ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ 16 ಪಾಸಿಟಿವ್‌, ಮೂಡಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿಗಳಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ. ಎಲ್ಲ ವಿದ್ಯಾರ್ಥಿಗಳು ಎ ಸಿಮ್ಟಾಮಾಟಿಕ್‌ ಗುಣ ಲಕ್ಷಣಗಳನ್ನು ಹೊಂದಿದ್ದು ಎಲ್ಲರಿಗೂ ಹೋಂ ಐಸೋಲೇಶನ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂರನೇ ಅಲೆಗೆ ಮನೆ ಕ್ವಾರಂಟೈನ್‌ನಲ್ಲೇ ಔಷಧ ಪಡೆಯುವವರ ಸಂಖ್ಯೆ ಹೆಚ್ಚು!
ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ 51545 ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೆ 397 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 165 ಸಕ್ರಿಯ ಪ್ರಕರಣಗಳಿದ್ದು 15 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರೆಲ್ಲಾ ಹೋಂ ಐಸೋಲೇಶನ್‌ನಲ್ಲಿದ್ದಾರೆ.

ಎಲ್ಲಿ ಹೋದವು ಕ್ವಾರಂಟೈನ್‌ ಕೇಂದ್ರ
ಕಳೆದ ವರ್ಷ ಕೊರೊನಾ ಪ್ರಕರಣಗಳು ಹೆಚ್ಚಾದ ಬೆನ್ನಿಗೆ ಜಿಲ್ಲಾಕೇಂದ್ರ ಸೇರಿದಂತೆ ಆಯಾ ತಾಲೂಕು ಮಟ್ಟದಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಾಗಿತ್ತು. ಲಾಕ್‌ಡೌನ್‌ನಿಂದ ಶಾಲಾ ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ. ಮೊರಾರ್ಜಿ, ಅಂಬೇಡ್ಕರ್‌ ವಸತಿ ಶಾಲೆ,ಸಮಾಜ ಕಲ್ಯಾಣ, ಗಿರಿಜನ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು ಕ್ವಾರಂಟೈನ್‌ ಕೇಂದ್ರಗಳಾಗಿದ್ದವು. ಕುಟುಂಬದ ಒಬ್ಬರಲ್ಲಿ ಸೋಂಕು ಪತ್ತೆ ಆದ ಕೂಡಲೆ ಮನೆಯವ ರನ್ನೆಲ್ಲಾ ಕ್ವಾರಂಟೈನ್‌ ಮಾಡುವ ವ್ಯವಸ್ಥೆ ಇತ್ತು. ಇದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಬಿದ್ದಿತ್ತು. ಕ್ರಮೇಣ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ ಕ್ವಾರಂಟೈನ್‌ ಕೇಂದ್ರಗಳು ಸ್ಥಗಿತಗೊಂಡವು.
ಬೆಂಗಳೂರಿನಲ್ಲೇ ಇದೆ ರಾಜ್ಯದ 92% ಓಮಿಕ್ರಾಸ್‌ ಕೇಸ್‌ : ಸಕ್ರೀಯ ಸೋಂಕಿನಲ್ಲೂ ರಾಜಧಾನಿಯ ಪಾಲು 84%
ನಂತರ ಬಂದ ಎಲ್ಲ ಕೇಸುಗಳನ್ನು ಹೋಂಐ ಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಲಾಯಿತು. ಇಂದು ಜಿಲ್ಲೆಯಲ್ಲಿ ಕೋವಿಡ್‌ -19 ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಶಾಲಾ ಕಾಲೇಜು, ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಸಾಮೂಹಿಕವಾಗಿ ಸೋಂಕು ಕಾಣಿಸಿಕೊಂಡಿದೆ ಎಂದರೆ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.



Read more

[wpas_products keywords=”deal of the day sale today offer all”]