ಅಂದಹಾಗೆ. ತನ್ನ ಮೋಹಕ ಚಿತ್ರಗಳ ಮೂಲಕ ದಿಶಾ ಪಟಾನಿ ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತಿರುವುದು ಇದೇ ಮೊದಲಲ್ಲ. ಎರಡು ದಿನಗಳ ಹಿಂದಷ್ಟೇ ಆಕರ್ಷಕ ಬಿಕಿನಿಯ ಟಾಪ್ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಮತ್ತೊಮ್ಮೆ ಈಗ ಫ್ಯಾಶನ್ ಪ್ರಿಯರ ನೆಚ್ಚಿನ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ದಿಶಾ ಪಟಾನಿ ಇತ್ತೀಚೆಗೆ ಯೋಧಾ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ರಾಶಿ ಖನ್ನಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಹ ಇದರಲ್ಲಿ ನಟಿಸಿದ್ದು, ಧರ್ಮ ಪ್ರೊಡಕ್ಷನ್ಸ್‌ನ ಮೊದಲ ಆಕ್ಷನ್ ಚಿತ್ರವಾಗಿದೆ. ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ತಂಡದೊಂದಿಗೆ ಒಂದೆರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಅವರು, ‘ಇಂತಹ ಅದ್ಭುತ ಅನುಭವಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದಗಳು’ಎಂದು ಬರೆದುಕೊಂಡಿದ್ದರು.
ದಿಶಾ ಪಟಾನಿ ಕಟ್ಟು ನಿಟ್ಟಾದ ಫಿಟ್‌ನೆಸ್ ನಿಯಮವನ್ನು ಅನುಸರಿಸುತ್ತಾರೆ ಎಂಬುದು ಈ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ಈ ಹಿಂದೆ ಅವರು ಜಿಮ್ ಉಡುಗೆಯಲ್ಲಿ ಕನ್ನಡಿಯ ಮುಂದೆ ಸ್ಟಂಟ್ ಮಾಡುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಯೂ ಟೈಗರ್ ಶ್ರಾಫ್, ಬೆಂಕಿ ಮತ್ತು ಚಪ್ಪಾಳೆ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದರು.
Read More…Source link
[wpas_products keywords=”deal of the day party wear for men wedding shirt”]