ಹೈಲೈಟ್ಸ್:
- ಕೊರೊನಾ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ
- ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ 35 ಜನರ ವಿರುದ್ಧ ಕೇಸ್
- ವಾರಾಂತ್ಯ ಕರ್ಫ್ಯೂ ವೇಳೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್
ಕನಕಪುರ ತಾಲೂಕಿನ ಸಂಗಮ ಪ್ರದೇಶದ ಸುತ್ತಮುತ್ತ ವಾರಾಂತ್ಯದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿತ್ತು. ಇದನ್ನು ಉಲ್ಲಂಘಿಸಿ, ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸಾತನೂರು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲ ನಾಯಕರ ಮೇಲೆ ಮಾತ್ರ ಏಕೆ ಪ್ರಕರಣ ದಾಖಲಿಸಬೇಕು. ಎಲ್ಲರ ಮೇಲೂ ಪ್ರಕರಣ ದಾಖಲಿಸಬೇಕು. ನಾನೇ ಎಲ್ಲರ ಹೆಸರನ್ನು ಕೊಡುತ್ತೆನೆ . ತಾಕತ್ತಿದ್ದರೆ ಪ್ರಕರಣ ದಾಖಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಮೇಕೆದಾಟು ಹೋರಟಕ್ಕೆ ಆಗ್ರಹಿಸಿ ನಡೆಯುತ್ತಿರುವ ಎರಡನೇ ದಿನದ ಪಾದಯಾತ್ರೆಗೆ ಸೋಮವಾರ ಡಿಕೆಶಿ ತವರೂರಾದ ದೊಡ್ಡ ಆಲನಹಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಎರಡನೇ ದಿನ ಚಾಮರಾಜನಗರ ಹಾಗೂ ಮಡಿಕೇರಿ ಜಿಲ್ಲೆಗಳಿಂದ ಕಾರ್ಯಕರ್ತರು ಭಾಗವಹಿಸಿದ್ದರು. ಮಳ್ಳವಳಿ ಶಾಸಕ ನರೇಂದ್ರ ಸ್ವಾಮಿ ಅವರೆ ಕಲಾತಂಡಗಳ ಉಸ್ತುವಾರಿ ಹೊತ್ತಿದ್ದರು.
ಕಾಂಗ್ರೆಸ್ ಪಾದಯಾತ್ರೆ ಎರಡನೇ ದಿನ: ಉತ್ಸಾಹದಿಂದ ಕೈ ಮುಖಂಡರ ಹೆಜ್ಜೆ, ಭಾಗಿಯಾಗ್ತಾರಾ ಸಿದ್ದರಾಮಯ್ಯ?
ಈ ವೇಳೆ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರು ತಳ್ಳಾಡಬೇಡಿ. ತಳ್ಳಿದರೆ ಡಿಕೆ ಕುಡಿದು ಪಾದಯಾತ್ರೆ ಮಾಡುತ್ತಾರೆ ಎನ್ನುತ್ತಾರೆ. ಹೀಗಾಗಿ ಯಾರು ತಳ್ಳಾಡಬೇಡಿ ಎಂದು ಭಾನುವಾರ ರಾತ್ರಿ ದೊಡ್ಡ ಅಲನಹಳ್ಳಿ ಡಿಕೆಶಿ ತೂರಾಡಿದ ವಿಡಿಯೋ ವೈರಲ್ ಆಗಿರುವುದಕ್ಕೆ ಸ್ಪಷ್ಟನೆ ನೀಡಿದರು.
Read more
[wpas_products keywords=”deal of the day sale today offer all”]