
ಹೌದು, ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಫೋನ್ ಅನ್ನು ಇಂದು(ಜ.10) ಲಾಂಚ್ ಮಾಡಲಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್ ಫ್ರಿ ಬುಕ್ಕಿಂಗ್ ಆರ್ಡರ್ ಲೈವ್ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್ ಹೆಚ್‌ಡಿ+ ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ 2340×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಅಂಡರ್ ಡಿಸ್‌ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ. ಇದು ಪ್ರೀಮಿಯಂ ಡಿಸ್‌ಪ್ಲೇ ಆಗಿದ್ದು, ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಗೇಮ್‌ಗಳನ್ನು ಆಡಲು ಯೋಗ್ಯವಾದ ಮಾದರಿಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ 8GB RAM ವರೆಗೆ Exynos 2100 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಒನ್ ಯುಐ 4.0 ಆಧಾರಿತ ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB ಮತ್ತು 128GB, 8GB ಮತ್ತು 128GB, ಹಾಗೂ 8GB ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 8MP 3x ಟೆಲಿಫೋಟೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಬಂಪ್ ಅನ್ನು ಮ್ಯಾಟ್-ಫಿನಿಶ್ ಬ್ಯಾಕ್ ಪ್ಯಾನೆಲ್‌ಗೆ ಸಂಯೋಜಿಸಲಾಗಿದೆ. ಫ್ಲ್ಯಾಶ್ ಮಾಡ್ಯೂಲ್ ಅನ್ನು ಕ್ಯಾಮರಾ ಲೈಟ್ ಹೊರಗೆ ಇರಿಸಲಾಗಿದೆ.

ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಹಲವಾರು ಶೂಟಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಇದು ಮಲ್ಟಿ-ಕ್ಯಾಮೆರಾ ರೆಕಾರ್ಡಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಒಂದೇ ಸಮಯದಲ್ಲಿ ಸೆಲ್ಫಿ ಮತ್ತು ರಿಯರ್ ಕ್ಯಾಮೆರಾಗಳಿಂದ ವೀಡಿಯೊವನ್ನು ಸೆರೆಹಿಡಿಯಲು ನಿಮಗೆ ಅನುಮತಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಬೆಲೆ ಇಂದು ನಡೆಯುವ ಈವೆಂಟ್‌ನಲ್ಲಿ ಬಹಿರಂಗವಾಗಲಿದೆ. ಆದರೂ ಈ ಸ್ಮಾರ್ಟ್‌ಫೋನ್ 52,000ರೂ ಬೆಲೆಯಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಇದಲ್ಲದೆ ಲಾಂಚ್ ಆಫರ್‌ನಲ್ಲಿ ಈ ಸ್ಮಾರ್ಟ್‌ಫೋನ್ 48,000ರೂ ಗಳಿಂದ 49,000ರೂ. ಒಳಗೆ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಈಗಾಗಲೇ ಭಾರತದಲ್ಲಿ ಫ್ರೀ ಆರ್ಡರ್ ಲೈವ್ ಆಗಿದೆ. ನೀವು ಫೋನ್ ಅನ್ನು ಬುಕ್ ಮಾಡಲು ಬಯಸಿದರೆ 999ರೂ.ಗಳನ್ನು ಪಾವತಿಸಬೇಕಾಗುತ್ತದೆ. ಫ್ರೀ ಆರ್ಡರ್ ಮಾಡಿದರೆ ನೀವು ಉಚಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ ಮತ್ತು 100% ಕ್ಯಾನ್ಸಲೇಶನ್ ರಿಫಂಡ್ ಅನ್ನು ಪಡೆಯಬಹುದಾಗಿದೆ.
Read more…
[wpas_products keywords=”smartphones under 15000 6gb ram”]