ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಮಂಗಳವಾರ ಕೇಪ್ ಟೌನ್‌ನಲ್ಲಿ ಮೂರನೇ ಟೆಸ್ಟ್ ಆಡಲಿರುವ ಉಭಯ ತಂಡಗಳು.
- ಕೇಪ್ ಟೌನ್‌ನಿಂದ ಭಾವುಕ ಸಂದೇಶ ಕಳುಹಿಸಿದ ಟೀಮ್ ಇಂಡಿಯಾ ವೇಗಿ ಬುಮ್ರಾ.
ಅದ್ಭುತ ನೆನಪುಗಳೊಂದಿಗೆ ಇಲ್ಲಿಗೆ ಮರಳುತ್ತಿದ್ದೇನೆ ಹಾಗೂ ಒಬ್ಬ ವ್ಯಕ್ತಿಯಾಗಿ ಹಾಗೂ ಕ್ರಿಕೆಟಿಗನಾಗಿ ಇಲ್ಲಿಯವರೆಗೂ ಸಾಕಷ್ಟು ಪರಿಪಕ್ವತೆಯನ್ನು ಸಾಧಿಸಿದ್ದೇನೆಂಬ ಶೀರ್ಷಿಕೆಯೊಂದಿಗೆ ಮುಂಬೈ ಇಂಡಿಯನ್ಸ್ ವೇಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
“ಕೇಪ್ ಟೌನ್ 2018-ಇಲ್ಲಿನಿಂದ ನನ್ನ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಶುರುವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಒಬ್ಬ ವ್ಯಕ್ತಿಯಾಗಿ ಹಾಗೂ ಆಟಗಾರನಾಗಿ ಬೆಳೆದಿದ್ದೇನೆ. ಆ ಮೂಲಕ ವಿಶೇಷ ನೆನಪುಗಳೊಂದಿಗೆ ಇಲ್ಲಿಗೆ ಮರಳಿದ್ದೇನೆ,” ಎಂದು ಜಸ್‌ಪ್ರಿತ್ ಬುಮ್ರಾ ತಮ್ಮ ಫೋಟೋಗೆ ಈ ರೀತಿಯ ಶೀರ್ಷಿಕೆ ಬರೆದಿದ್ದಾರೆ.
ಕೇಪ್ ಟೌನ್ ಟೆಸ್ಟ್‌ಗೆ ಟೀಮ್ ಇಂಡಿಯಾ XIನಲ್ಲಿ 2 ಬದಲಾವಣೆ ಸಾಧ್ಯತೆ!
ಕಳೆದ ನಾಲ್ಕು ವರ್ಷಗಳಿಂದ ಜಸ್‌ಪ್ರಿತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಅಂಗಣದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದರಂತೆ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅವರ ವಿಕೆಟ್ ಅನ್ನು ಪಡೆಯುವ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವೇಗಿ ಎಲ್ಲರ ಗಮನ ಸೆಳೆದಿದ್ದರು.
ಪದಾರ್ಪಣೆ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 39 ರನ್ ನೀಡಿ 3 ವಿಕೆಟ್ ಕಿತ್ತಿದ್ದ ಬುಮ್ರಾ ವಿದೇಶಿ ಪರಿಸ್ಥಿತಿಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಬೌಲರ್‌ಗಳ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಅಂದಿನ ಪಂದ್ಯದಲ್ಲಿ 72 ರನ್‌ಗಳಿಂದ ಸೋಲು ಅನುಭವಿಸಿತ್ತು.
‘ಪಂತ್ ಈಗ ಸೂಪರ್ ಸ್ಟಾರ್ ಅಲ್ಲ, 3ನೇ ಟೆಸ್ಟ್ ಆಡಿಸಬೇಡಿ’ : ಸೋಢಿ!
ಇತಿಹಾಸದ ಹೊಸ್ತಿಲಲ್ಲಿ ಟೀಮ್ ಇಂಡಿಯಾ: ಟೀಮ್ ಇಂಡಿಯಾ ಇತಿಹಾಸದ ಹೊಸ್ತಿಲಲ್ಲಿದೆ. 1992ರಿಂದ ಹರಿಣಗಳ ನಾಡಿಗೆ ದಂಡೆತ್ತಿ ಹೊರಟಿರುವ ಭಾರತ ತಂಡಕ್ಕೆ ಇದೀಗ ಮೊತ್ತ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲುವ ಸುವರ್ಣಾವಕಾಶ ಕೈಲಿದೆ.
ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 112 ರನ್‌ಗಳಿಂದ ಗೆದ್ದು 1-0 ಅಂತರದಲ್ಲಿ ಮುನ್ನಡೆ ಗಳಿದ್ದ ಟೀಮ್ ಇಂಡಿಯಾ, ಬಳಿಕ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಗೆದ್ದು ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದು ಕೊಳ್ಳುವ ಅವಕಾಶ ಹೊಂದಿತ್ತು. ಆದರೆ, ಅಚ್ಚರಿಯ ಆಟವಾಡಿ ತಿರುಗೇಟು ಕೊಟ್ಟ ಹರಿಣ ಪಡೆ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ 7 ವಿಕೆಟ್‌ಗಳ ಜಯ ದಾಖಲಿಸಿ 1-1 ಅಂತರದ ಸಮಬಲ ತಂದುಕೊಂಡಿದೆ.
ನಾಯಕತ್ವದಲ್ಲಿ ಕೆಎಲ್ ರಾಹುಲ್ ಇನ್ನೂ ಪಳಗಬೇಕು ಎಂದ ಗಂಭೀರ್!
ಹೀಗಾಗಿ ಸರಣಿಯ ಕ್ಲೈಮ್ಯಾಕ್ಸ್ ಆಗಿ 3ನೇ ಹಾಗೂ ಅಂತಿಮ ಟೆಸ್ಟ್ ಕೇಪ್ ಟೌನ್ ಕ್ರೀಡಾಂಗಣದಲ್ಲಿ ಜನವರಿ 11ರಿಂದ 15ರವರೆಗೆ ನಡೆಯಲಿದ್ದು, ಎಲ್ಲರ ಗಮನ ಈ ಟೆಸ್ಟ್ ಕಡೆಗೆ ನೆಲೆಸಿದೆ. ಭಾರತ ತಂಡದ ಪಾಲಿಗೆ ಅತ್ಯಂತ ಮಹತ್ವದ ಟೆಸ್ಟ್ ಪಂದ್ಯ ಇದಾಗಿದ್ದು, ಈ ಸಲುವಾಗಿ ತನ್ನ ಆಡುವ ಹನ್ನೊಂದರ ಬಳಗದಲ್ಲಿ 2 ಮುಖ್ಯ ಬದಲಾವಣೆ ತಂದುಕೊಳ್ಳುವ ಸಾಧ್ಯತೆ ಇದೆ.
3ನೇ ಟೆಸ್ಟ್‌ಗೆ ಭಾರತ ತಂಡದ ಸಂಭಾವ್ಯ ಇಲೆವೆನ್: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್ ಅಶ್ವಿನ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ/ ಉಮೇಶ್ ಯಾದವ್.
Read more
[wpas_products keywords=”deal of the day gym”]