Karnataka news paper

ಉ.ಪ್ರ ಚುನಾವಣೆ: ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸುವ ವದಂತಿಯ ನಡುವೆ ನಿವೃತ್ತಿ ಬಯಸಿದ ಹಿರಿಯ ಐಪಿಎಸ್ ಅಧಿಕಾರಿ


Online Desk

ಕಾನ್ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ವದಂತಿಯ ನಡುವೆ ಐಪಿಎಸ್ ಅಧಿಕಾರಿಯೊಬ್ಬರು ಸ್ವಯಂ ನಿವೃತ್ತಿ ಬಯಸಿದ್ದಾರೆ.

ಕಾನ್ಪುರ ಪೊಲೀಸ್ ಆಯುಕ್ತ ಅಸೀಮ್ ಕುಮಾರ್ ಅರುಣ್ ಸ್ವಯಂ ನಿವೃತ್ತಿ ಬಯಸಿರುವ ಅಧಿಕಾರಿಯಾಗಿದ್ದು, ಹೆಚ್ಚುವರಿ ಡಿಜಿ ಶ್ರೇಣಿಯ ಅಧಿಕಾರಿ ಇವರಾಗಿದ್ದು, ಉತ್ತರ ಪ್ರದೆಶ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ತಾವು ಸ್ವಯಂ ನಿವೃತ್ತಿ ಬಯಸುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1994 ಬ್ಯಾಚ್ ನ ಐಪಿಎಸ್ ಅಧಿಕಾರಿಗೆ ಇನ್ನೂ 9 ವರ್ಷಗಳ ಸೇವಾ ಅವಧಿ ಇದ್ದು, ಅವಧಿಗೂ ಮುನ್ನವೇ ಸ್ವಯಂ ನಿವೃತ್ತಿ ಬಯಸಿ ಉತ್ತರ ಪ್ರದೇಶ ಡಿಜಿಪಿ ಮುಕುಲ್ ಗೋಯಲ್ ಹಾಗೂ ಮುಖ್ಯಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರಿಗೆ ವಿಆರ್ ಎಸ್ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪಿಟಿಐನೊಂದಿಗೆ ಮಾತನಾಡಿರುವ ಡಿಜಿಪಿ ಗೋಯಲ್, ಎಡಿಜಿಪಿ ಅರುಣ್ ವಿಆರ್ ಎಸ್ ಗೆ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದ್ದು ತಮಗೆ ಬಂದಿರುವ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಕಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಸೀಮ್ ಕುಮಾರ್ ಅರುಣ್ ಸ್ವಯಂ ನಿವೃತ್ತಿ ಬಯಸಿರುವ ಕಾರಣಗಳನ್ನು ವಿವರಿಸಲು ಗೋಯಲ್ ನಿರಾಕರಿಸಿದ್ದಾರೆ. ಅರುಣ್ ಅವರು ತಮ್ಮ ತವರು ಕನ್ನೌಜ್ ನ  ಸರ್ದಾರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಮ್ಮನ್ನು ಬಿಜೆಪಿ ಸದಸ್ಯತ್ವಕ್ಕಾಗಿ ಪರಿಗಣಿಸಿದ್ದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅರುಣ್ ಫೇಸ್ ಬುಕ್ ಸಂದೇಶದ ಮೂಲಕ ಧನ್ಯವಾದ ತಿಳಿಸಿದ್ದಾರೆ.



Read more

[wpas_products keywords=”deal of the day”]