Karnataka news paper

ಎಸ್‌ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್; ಕುತೂಹಲ ಕೆರಳಿಸಿದ ಯಶವಂತರಾಯಗೌಡ ಪಾಟೀಲ್ ಪತ್ರಿಕಾಗೋಷ್ಠಿ


ಹೈಲೈಟ್ಸ್‌:

  • ಎಸ್‌ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್ ಪ್ರಕರಣ
  • ಕುತೂಹಲ ಕೆರಳಿಸಿದ ಯಶವಂತರಾಯಗೌಡ ಪಾಟೀಲ್ ಪತ್ರಿಕಾಗೋಷ್ಠಿ
  • ಶಾಸಕರ ಭವನದಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿ

ಬೆಂಗಳೂರು: ಸಚಿವ ಎಸ್‌ಟಿ ಸೋಮಶೇಖರ್‌ ಪುತ್ರ ನಿಶಾಂತ್ ಗೆ ಬ್ಲ್ಯಾಕ್‌ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಪತ್ರಿಕಾಗೋಷ್ಠಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಬೆಳಗ್ಗೆ ಶಾಸಕರ ಭವನದಲ್ಲಿ ಯಶವಂತರಾಯಗೌಡ ಪಾಟೀಲ್ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಎಸ್‌ಟಿ ಸೋಮಶೇಖರ್ ಪುತ್ರ ನಿಶಾಂತ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಶಾಸಕರ ಪುತ್ರಿಯ ಹೆಸರು ತಳುಕು ಹಾಕಿಕೊಂಡಿದೆ. ಆದರೆ ಈ ಪ್ರಕರಣದಲ್ಲಿ ಶಾಸಕರ ಪುತ್ರಿಯ ಪಾತ್ರ ಏನು ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಆಕೆಯ ಸಿಮ್‌ ಕಾರ್ಡ್‌ ಬಳಸಿಕೊಂಡು ಈ ಸಿಮ್‌ ನಂಬರ್‌ ಮೂಲಕ ವಿಡಿಯೋ ಕಳಿಸಲಾಗಿದೆ ಎಂಬ ಆರೋಪ ಇದೆ. ಈ ನಿಟ್ಟಿನಲ್ಲಿ ಶಾಸಕರ ಸುದ್ದಿಗೋಷ್ಠಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಎಸ್‌ಟಿ ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್! ಓರ್ವ ಆರೋಪಿ ಬಂಧನ

ಸಿಬ್ಬಂದಿಯನ್ನು ರಜೆಯಲ್ಲಿ ಕಳಿಸಿದ ಎಸ್‌ಟಿಎಸ್‌!

ಬ್ಲ್ಯಾಕ್‌ ಮೇಲ್ ಪ್ರಕರಣದ ಹಿನ್ನೆಲೆಯಲ್ಲಿತಮ್ಮ ಸಿಬ್ಬಂದಿಯನ್ನು ರಜೆ ಮೇಲೆ ಸಚಿವ ಎಸ್ ಟಿ ಸೋಮಶೇಖರ್ ಕಳಿಸಿದ್ದಾರೆ. ಸಚಿವರ ಇಬ್ಬರು ಪಿಎಗಳಿಗೆ ನಕಲಿ ಎನ್ನಲಾದ ವಿಡಿಯೋವನ್ನು ಆರೋಪಿಗಳು ಕಳಿಸಿದ್ದರು. ಈ ನಡುವೆ ಪಿಎ ಹಾಗೂ ಪಿಎಸ್‌ ಶ್ರೀನಿವಾಸಗೌಡ, ಭಾನುಪ್ರಕಾಶ್ ಗೆ ಸಚಿವರು ರಜೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಒಬ್ಬರು ಗನ್ ಮ್ಯಾನ್ ಹೊರತು ಉಳಿದ ಗನ್ ಮ್ಯಾನ್ ಗಳಿಗೂ ರಜೆ ನೀಡಲಾಗಿದೆ.

ವಿಚಾರಣೆಗೆ ಸಹಕರಿಸಲಿ ಎಂಬ ಉದ್ದೇಶದಿಂದ ರಜೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಒಬ್ಬ ಗನ್‌ಮ್ಯಾನ್ ಜತೆ ಸರ್ಕಾರಿ ಕಾರಿನಲ್ಲಿ‌ ಸಚಿವರ ಓಡಾಟ ಮಾಡುತ್ತಿದ್ದಾರೆ. ತಮ್ಮ ಓಡಾಟ ಬಗ್ಗೆ ಯಾರಿಗೂ ಮಾಹಿತಿಯನ್ನು ನೀಡುತ್ತಿಲ್ಲ.



Read more

[wpas_products keywords=”deal of the day sale today offer all”]