Karnataka news paper

ಕಾಂಗ್ರೆಸ್ ಪಾದಯಾತ್ರೆ ಎರಡನೇ ದಿನ: ಉತ್ಸಾಹದಿಂದ ಕೈ ಮುಖಂಡರ ಹೆಜ್ಜೆ, ಭಾಗಿಯಾಗ್ತಾರಾ ಸಿದ್ದರಾಮಯ್ಯ?


ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಶುರುಮಾಡಿರುವ ಪಾದಯಾತ್ರೆಗೆ ಸೋಮವಾರ ಎರಡನೇ ದಿನ. ಭಾನುವಾರ ಕಾವೇರಿ ಸಂಗಮದಿಂದ ಆರಂಭಗೊಂಡ ಪಾದಯಾತ್ರೆ ಹದಿನೈದು ಕಿಲೋ ಮೀಟರ್ ಪೂರೈಸಿದೆ. ಭಾನುವಾರ ರಾತ್ರಿ ದೊಡ್ಡ ಅಲಹಳ್ಳಯಲ್ಲಿ ಕಾರ್ಯಕರ್ತರು ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಸೋಮವಾರ ಬೆಳಗ್ಗೆಯಿಂದ ದೊಡ್ಡ ಅಲಹಳ್ಳಿಯಿಂದ ಉಪಹಾರದ ಬಳಿಕ ಪಾದಯಾತ್ರೆ ಮತ್ತೆ ಆರಂಭಗೊಂಡಿದೆ.

ಮಧ್ಯಾಹ್ಮ 1 ಗಂಟೆಗೆ ಮಾದಪ್ಪನದೊಡ್ಡಿಯಲ್ಲಿ ವಿಶ್ರಾಂತಿ ಹಾಗೂ ಭೋಜನದ ವಿರಾಮ ಇದಲಿದೆ. ಬಳಿಕ ಸಂಜೆ ಕನಕಪುರ ನಗರದಲ್ಲಿ ಸಭೆ ಹಾಗೂ ವಾಸ್ತವ್ಯ ಇರಲಿದೆ. ಮೊದಲ ದಿನ ಸಾಕಷ್ಟು ಉತ್ಸಾಹದಿಂದಲೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು. ಸಂಜೆಯಾಗುತ್ತಿದ್ದಂತೆ ಮುಖಂಡರು ಸುಸ್ತಾಗಿ ಬಿಟ್ಟರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾದಯಾತ್ರೆ ಸಂದರ್ಭದಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದುಕೊಂಡು ಬೆಂಗಳೂರಿಗೆ ವಾಪಸಾದರು.

ಮೇಕೆದಾಟು ಡ್ಯಾಂ ವಿವಾದ..! ಕರ್ನಾಟಕದ ವಾದವೇನು..? ತಮಿಳುನಾಡಿನ ವಿರೋಧವೇನು..?

ಆದರೆ ಸೋಮವಾರ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗುತ್ತರಾ? ಎಂಬುವುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಬೂಸ್ಟರ್ ಡೋಸ್ ವ್ಯಾಕ್ಸಿನ್ ಪಡೆದಿದ್ದ ಕಾರಣ ಜ್ವರ ಕಾಣಿಸಿಕೊಂಡಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ವಾಪಸ್‌ ಆದರು. ಆದರೆ ಸೋಮವಾರ ಮತ್ತೆ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರಾ? ಎಂಬುವುದು ಇನ್ನು ಸ್ಪಷ್ಟಗೊಂಡಿಲ್ಲ.

ಜಮೀರ್ ಗೈರು

ಇನ್ನು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೈರಾಗಿದ್ದಾರೆ. ಭಾನುವಾರ ಕಾವೇರಿ ಸಂಗಮದಲ್ಲಿ ನಡೆದ ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲೂ ಜಮೀರ್ ಅಹ್ಮದ್ ಖಾನ್ ಭಾಗಿಯಾಗಿರಲಿಲ್ಲ. ಜಮೀರ್ ಖಾನ್ ಗೈರು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಸೋಮವಾರದ ಪಾದಯಾತ್ರೆಯಲ್ಲೂ ಹಲವು ಮುಖಂಡರು ಭಾಗಿಯಾಗಿದ್ದಾರೆ. ಶಾಸಕರಾದ ಪ್ರಿಯಾಂಕ್‌ ಖರ್ಗೆ ಒಳಗೊಂಡು ಹಲವು ಶಾಸಕರು ಭಾಗಿಯಾಗಿದ್ದಾರೆ. ಕಾರ್ಯಕರ್ತರಂತೂ ಉತ್ಸಾಹದಿಂದ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.



Read more

[wpas_products keywords=”deal of the day sale today offer all”]