ಹೈಲೈಟ್ಸ್:
- ಈ ಹಿಂದೆ ಹಣಕಾಸು ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಿದ್ದ ಆರ್‌ಬಿಐ
- ಇದೀಗ ಶೀಘ್ರದಲ್ಲೇ ಫಿನ್‌ಟೆಕ್ ವಿಭಾಗ ಪ್ರಾರಂಭಿಸುವ ಕುರಿತು ನಿರ್ಧಾರ
- ಭಾರತದ ಫಿನ್‌ಟೆಕ್ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶ
RBI ಸುತ್ತೋಲೆಯಲ್ಲಿ ಏನಿದೆ?
ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿರುವಂತೆ, ಫಿನ್‌ಟೆಕ್ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ 2022ರ ಜನವರಿ 4 ರಂದು ಹೊಸ ಇಲಾಖೆ ರಚಿಸಲಾಗಿದೆ. ಈ ಇಲಾಖೆಯು ನಾವೀನ್ಯತೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಈ ವಲಯದಲ್ಲಿನ ಸವಾಲುಗಳು ಮತ್ತು ಅವಕಾಶಗಳನ್ನು ಸರಿಯಾದ ಸಮಯದಲ್ಲಿ ಗುರುತಿಸುತ್ತದೆ.
ಫಿನ್‌ಟೆಕ್ ಇಲಾಖೆಯು ಈ ವಿಷಯದಲ್ಲಿ ಗರಿಷ್ಠ ಸಂಶೋಧನೆಗಾಗಿ ರಚನಾತ್ಮಕ ನೀತಿಯನ್ನು ಸಿದ್ಧಪಡಿಸುತ್ತದೆ ಎಂದು ಎಕನಾಮಿಕ್ ಟೈಮ್ಸ್ ಸುತ್ತೋಲೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಅದರ ಮೂಲಕ ಮುಂದಿನ ಸಿದ್ಧತೆಗಳಲ್ಲಿ ಕೇಂದ್ರ ಬ್ಯಾಂಕ್‌ಗೆ ಸಹಾಯ ಮಾಡಬಹುದು. ಆರ್‌ಬಿಐ ಪ್ರಕಾರ, ಫಿನ್‌ಟೆಕ್ ಇಲಾಖೆಯು ಈಗ ಆಡಳಿತಾತ್ಮಕ ಮಟ್ಟದಲ್ಲಿ ಕೇಂದ್ರೀಕೃತ ಆಡಳಿತ ವಿಭಾಗ (ಸಿಎಡಿ) ನೊಂದಿಗೆ ಸಂಬಂಧ ಹೊಂದಿದೆ.
ಫಿನ್ಟೆಕ್ ಎಂದರೇನು?
ಫಿನ್‌ಟೆಕ್ ಎನ್ನುವುದು ಫೈನಾನ್ಶಿಯಲ್ ಟೆಕ್ನಾಲಜಿಯ ಸಂಕ್ಷಿಪ್ತ ರೂಪವಾಗಿದೆ. ಫಿನ್ಟೆಕ್ ಎನ್ನುವುದು ಹಣಕಾಸಿನ ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನದ ಬಳಕೆಯಾಗಿದೆ. ಕನ್ನಡದಲ್ಲಿ ಇದನ್ನು ಹಣಕಾಸು ತಂತ್ರಜ್ಞಾನ ಎಂದು ಕರೆಯಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ವಿವಿಧ ಕಂಪನಿಗಳು ಮತ್ತು ವ್ಯವಹಾರಗಳಲ್ಲಿ ಹಣಕಾಸಿನ ಅಂಶಗಳ ನಿರ್ವಹಣೆಯಲ್ಲಿ ಸಾಂಪ್ರದಾಯಿಕ ಹಣಕಾಸು ಸೇವೆಗಳು ಮತ್ತು ಆಧುನಿಕ ತಂತ್ರಜ್ಞಾನದ ಅನುಷ್ಠಾನವಾಗಿದೆ. ಇದು ಆಪ್ ಮೂಲಕ ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ವಿವಿಧ ರೀತಿಯ ಆರ್ಥಿಕ ತಾಂತ್ರಿಕ ಸೌಲಭ್ಯಗಳನ್ನೂ ಪಡೆಯಬಹುದು.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್‘ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
Read more…
[wpas_products keywords=”deal of the day”]