Karnataka news paper

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ‘ಹರ ಹರ ಮಹಾದೇವ’ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕಾ


ಹೈಲೈಟ್ಸ್‌:

  • ವೈವಾಹಿಕ ಬದುಕಿಗೆ ನಾಂದಿ ಹಾಡಿದ ನಟಿ ಪ್ರಿಯಾಂಕಾ ಚಿಂಚೋಳಿ
  • ರಾಕೇಶ್ ಎಂಬುವರನ್ನು ಮದುವೆಯಾದ ಪ್ರಿಯಾಂಕಾ ಚಿಂಚೋಳಿ
  • ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ, ಅದ್ಧೂರಿಯಾಗಿ ನಡೆದ ಪ್ರಿಯಾಂಕಾ ಚಿಂಚೋಳಿ-ರಾಕೇಶ್ ಮದುವೆ

ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ನಟಿ ಪ್ರಿಯಾಂಕಾ ಚಿಂಚೋಳಿ (Priyanka Chincholi) ಇದೀಗ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ ಇದೀಗ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ರಾಕೇಶ್ (Rakesh) ಎಂಬುವರೊಂದಿಗೆ ಪ್ರಿಯಾಂಕಾ ಚಿಂಚೋಳಿ ಅವರ ಮದುವೆ ಸಮಾರಂಭ ಡಿಸೆಂಬರ್ 10 ರಂದು ಜರುಗಿದೆ.

ಪಕ್ಕಾ ಅರೇಂಜ್ಡ್ ಮ್ಯಾರೇಜ್
ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕುಟುಂಬಸ್ಥರ ಆಸೆ, ಇಚ್ಛೆಯಂತೆ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರ ವಿವಾಹ ಮಹೋತ್ಸವ ನೆರವೇರಿದೆ. ಅಂದ್ಹಾಗೆ, ಪ್ರಿಯಾಂಕಾ ಚಿಂಚೋಳಿ ಮದುವೆಯಾಗಿರುವ ರಾಕೇಶ್ ಎಂಬುವರು ಅಮೇರಿಕಾದ ಬ್ಯಾಂಕ್‌ವೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಅಂದು ರಿಜಿಸ್ಟರ್ ಮ್ಯಾರೇಜ್, ಈಗ ಟ್ರೆಡಿಷನಲ್; ಕನ್ನಡ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ ಮೆಹೆಂದಿ ಸಂಭ್ರಮ
ಕಳೆದ ಫೆಬ್ರವರಿ ತಿಂಗಳಿನಲ್ಲಿ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರ ನಿಶ್ಚಿತಾರ್ಥ ಸಮಾರಂಭ ಗ್ರ್ಯಾಂಡ್ ಆಗಿ ನಡೆದಿತ್ತು. ಪ್ರೇಮಿಗಳ ದಿನದಂದೇ ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಆಗಸ್ಟ್ ತಿಂಗಳಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಇವರಿಬ್ಬರು ಡಿಸೆಂಬರ್ 10 ರಂದು ಸಂಪ್ರದಾಯ ಬದ್ಧವಾಗಿ ಸಪ್ತಪದಿ ತುಳಿದಿದ್ದಾರೆ.

ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರ ವಿವಾಹ ಮಹೋತ್ಸವ ನಾಲ್ಕು ದಿನಗಳ ಕಾಲ ನಡೆಯಿತು. ಮೆಹೆಂದಿ, ಸಂಗೀತ ಸಮಾರಂಭ, ಅರಿಶಿನ ಶಾಸ್ತ್ರ, ಕಾಶೀ ಯಾತ್ರೆ, ಆರತಕ್ಷತೆ ಅದ್ಧೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ನೆರವೇರಿತು.

ಡಿಸೆಂಬರ್‌ನಲ್ಲಿಯೇ ಕನ್ನಡ ಧಾರಾವಾಹಿ ನಟಿಯರ ರಿಯಲ್ ಕಲ್ಯಾಣ; ಯಾವ ದಿನಾಂಕ? ಎಲ್ಲೆಲ್ಲಿ?
ಪ್ರಿಯಾಂಕಾ ಚಿಂಚೋಳಿ
‘ಮನಸಾರೆ’, ‘ಮನಸೆಲ್ಲಾ ನೀನೆ’, ‘ಹರ ಹರ ಮಹಾದೇವ’ (Hara Hara Mahadev) ಮುಂತಾದ ಧಾರಾವಾಹಿಗಳಲ್ಲಿ ಪ್ರಿಯಾಂಕಾ ಚಿಂಚೋಳಿ ಅಭಿನಯಿಸಿದ್ದಾರೆ.

ಮದುವೆ ದಿನವೇ ‘ಮನಸಾರೆ’ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ ‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಸಿನಿಮಾ ರಿಲೀಸ್!
ಮದುವೆ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಚಿಂಚೋಳಿ
‘’ಪರಿಚಯಸ್ಥರ ಮುಖಾಂತರ ನನಗೆ ರಾಕೇಶ್ ಅವರ ಕುಟುಂಬಸ್ಥರ ಪರಿಚಯವಾಯಿತು. ಅವರೂ ಕೂಡ ಹುಡುಗಿಯನ್ನ ಹುಡುಕುತ್ತಿದ್ದರು. ನನ್ನ ತಾಯಿ ಕೂಡ ನನಗೆ ಹುಡುಗನನ್ನು ಹುಡುಕುತ್ತಿದ್ದರು. ಈ ವೇಳೆ ಪರಿಚಯವಾದವರು ರಾಕೇಶ್. ನಾವು ಫೋನ್ ನಂಬರ್‌ಗಳನ್ನು ಎಕ್ಸ್‌ಚೇಂಜ್ ಮಾಡಿಕೊಂಡ್ವಿ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡ್ವಿ. 2021 ಹೊಸ ವರ್ಷದ ಸಂದರ್ಭದಲ್ಲಿ ರಾಕೇಶ್ ನನಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದರು. ನಾನು ಕೂಡ ಖುಷಿಯಿಂದಲೇ ಒಪ್ಪಿಕೊಂಡೆ’’ ಎಂದು ಈ ಹಿಂದೆ ನೀಡಿದ್ದ ಸಂದರ್ಶದಲ್ಲಿ ಪ್ರಿಯಾಂಕಾ ಚಿಂಚೋಳಿ ಹೇಳಿದ್ದರು.

ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ‘ಮನಸಾರೆ’ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ
‘’ರಾಕೇಶ್ ತುಂಬಾ ಒಳ್ಳೆಯ ಮನಸ್ಸಿರುವ ವ್ಯಕ್ತಿ. ನನಗೆ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಮದುವೆಯಾದ್ಮೇಲೂ ನಾನು ನಟಿಸುವುದನ್ನು ಮುಂದುವರೆಸುತ್ತೇನೆ’’ಎಂದಿದ್ದರು ಪ್ರಿಯಾಂಕಾ ಚಿಂಚೋಳಿ.

‘ಪ್ರೇಮಿಗಳ ದಿನ’ದಂದೇ ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ!
ಮದುವೆ ದಿನವೇ ಸಿನಿಮಾ ರಿಲೀಸ್
ಡಿಸೆಂಬರ್ 10 ರಂದು ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಅವರ ಮದುವೆ ನಡೆದಿತ್ತು. ಮದುವೆಯ ದಿನವೇ ಪ್ರಿಯಾಂಕಾ ಚಿಂಚೋಳಿ ನಟನೆಯ ‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಡಿಸೆಂಬರ್ 10 ಪ್ರಿಯಾಂಕಾ ಚಿಂಚೋಳಿ ಪಾಲಿಗೆ ತುಂಬಾನೇ ಸ್ಪೆಷಲ್.



Read more