ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಜಯಮಹಲ್‌ನಲ್ಲಿ ನೆಲೆಸಿರುವ ಅರ್ಜಿದಾರ ಮಹಿಳೆ ಮತ್ತು ಅಜಯ್(ಹೆಸರು ಬದಲಿಸಲಾಗಿದೆ) ನಡುವೆ 2008ರ ನ.30ರಂದು ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ವಿವಾಹ ನಡೆದಿತ್ತು. ದಂಪತಿ ನಂತರ ಕೆನಡಾಗೆ ತೆರಳಿದ್ದರು. ಪತಿ ಕೆನಡಾದಲ್ಲಿ ಉದ್ಯೋಗದಲ್ಲಿದ್ದರು. ಆರಂಭದಿಂದಲೂ ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ನಿತ್ಯವೂ ಜಗಳವಾಗುತ್ತಿತ್ತು ಎಂದು ಇಬ್ಬರೂ ಹೇಳಿಕೊಂಡಿದ್ದರು. ಅವರಿಗೆ ಹೆಣ್ಣು ಮಗು ಜನಿಸಿತು. ನಂತರ ಪರಿಸ್ಥಿತಿ ಸುಧಾರಿಸಬಹುದೆಂದುಕೊಂಡರೆ ಏನೂ ಆಗಲಿಲ್ಲ. ಇಬ್ಬರ ನಡುವಿನ ಮನಸ್ತಾಪ ಮೊದಲಿಗಿಂತಲೂ ಹೆಚ್ಚಾಗಿ ಪತಿ ಮೇಲೆ ಪತ್ನಿ, ಪತ್ನಿ ಮೇಲೆ ಪತಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು, ಕೆನಡಾದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮಟ್ಟಕ್ಕೆ ಹೋಗಿದೆ. ಮಗುವನ್ನು ಸುಪರ್ದಿಗೆ ಕೊಡುವ ವಿಷಯದಲ್ಲಿ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದೆ.
ಪತ್ನಿಗೆ 50 ಸಾವಿರ ರೂ. ದಂಡ
ಕೆನಡಾದ ಕೋರ್ಟ್‌ನಲ್ಲಿ ನಡೆದ ವಿವಾಹ ವಿಚ್ಛೇದನ ಪ್ರಕರಣ ಮತ್ತು ಮಗುವಿನ ಸುಪರ್ದಿ ಪ್ರಕರಣದ ಮಾಹಿತಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಅರ್ಜಿದಾರ ಮಹಿಳೆಯು ಮುಚ್ಚಿಟ್ಟಿದ್ದರು. ವಿಷಯವನ್ನು ಮುಚ್ಚಿಟ್ಟು ಮಗುವಿನ ಸುಪರ್ದಿಗಾಗಿ ಅರ್ಜಿ ಹೂಡಿದ್ದ ಪತ್ನಿಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ. ‘ಕೋರ್ಟ್‌ಗಳನ್ನು ಜನರು ನ್ಯಾಯದೇಗುಲವೆಂದು ಪರಿಗಣಿಸಿದ್ದು, ಅವುಗಳ ಮೇಲೆ ನಂಬಿಕೆ ಇನ್ನೂ ಉಳಿದಿದೆ. ಆದರೆ ಕೆನಡಾದ ನ್ಯಾಯಾಲಯದಲ್ಲಿ ನಡೆದ ಸಂಗತಿಗಳನ್ನು ಅರ್ಜಿದಾರ ಮಹಿಳೆ ಮುಚ್ಚಿರುವುದು ಸರಿಯಲ್ಲ. ಆ ಮೂಲಕ ಸಾರ್ವಜನಿಕ ಸಮಯವನ್ನು ವ್ಯಯ ಮಾಡಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
ಮಕ್ಕಳ ಹಿತವನ್ನು ದಂಪತಿಗಳು ಹೇಗೆ ಕಡೆಗಣಿಸುತ್ತಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಭಾರತದಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿವೆ. ಇಲ್ಲಿ ಮಕ್ಕಳ ಭೇಟಿ ಹಕ್ಕುಗಳ ಪರಿಕಲ್ಪನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿಲ್ಲ. ಹೀಗಾಗಿ ಮಕ್ಕಳ ಸುಪರ್ದಿ ವಿಚಾರ ಬಂದಾಗ, ಮಕ್ಕಳ ಹಿತಕ್ಕೆ ಕೌಟುಂಬಿಕ ನ್ಯಾಯಾಲಯಗಳು ಮೊದಲ ಆದ್ಯತೆ ನೀಡಬೇಕು.
ಬಿ.ವೀರಪ್ಪ , ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ
Read more
[wpas_products keywords=”deal of the day sale today offer all”]