Karnataka news paper

ಗೋವಾ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲ- ಸಂಜಯ್ ರಾವತ್


PTI

ಮುಂಬೈ: ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರೋಧಿ ನಿಲುವು ತಾಳಿರುವ ತೃಣಮೂಲ ಕಾಂಗ್ರೆಸ್ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸ್ಪರ್ಧೆಯಿಂದ ಗೋವಾದಲ್ಲಿ ಆಡಳಿತಾರೂಢ ಬಿಜೆಪಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಟಿಎಂಸಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ವಿಶ್ವಾಸಾರ್ಹವಲ್ಲದ ನಾಯಕರನ್ನು ಆಯ್ಕೆ ಮಾಡಿಕೊಂಡಿದೆ ಮತ್ತು ಅಂತಹ ವರ್ತನೆಯು ಸ್ವತಃ ಬಿಜೆಪಿ ವಿರುದ್ಧ ಹೋರಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸರಿಹೊಂದುವುದಿಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ರಾವತ್ ಕಿಡಿಕಾರಿದ್ದಾರೆ.

ಬೇರೆ ಎಲ್ಲಿಂದಲೂ ಬಂದ ಹಣವನ್ನು ಪಕ್ಷ ಖರ್ಚು ಮಾಡುತ್ತಿದೆ ಎಂದು ಹಲವು ಮಂದಿ ಹೇಳುತ್ತಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಬೆಲೆ ತೆರಬೇಕಾಗುತ್ತದೆ. ಗೋವಾದ ಪ್ರಸ್ತುತ ಸ್ಥಿತಿಯನ್ನು ಉಲ್ಲೇಖಿಸಿರುವ ರಾವತ್, ಎಲ್ಲಾ ಪಕ್ಷಗಳು ರಾಜ್ಯವನ್ನು ರಾಜಕೀಯ ಪ್ರಯೋಗಾಲಯ ವನ್ನಾಗಿ ಮಾಡಿಕೊಂಡಿವೆ ಎಂದು ರಾವತ್  ಹೇಳಿದ್ದಾರೆ. 



Read more

[wpas_products keywords=”deal of the day”]