Karnataka news paper

ಬುಲ್ಲಿ ಬಾಯ್ ಆಪ್ ಬಳಿಕ, ಈಗ ಸುಲ್ಲಿ ಡೀಲ್ಸ್ ಆಪ್ ಸೃಷ್ಟಿಕರ್ತನ ಬಂಧನ


Online Desk

ನವದೆಹಲಿ: ಬುಲ್ಲಿ ಬಾಯ್ ಆಪ್ ಬಳಿಕ ಈಗ ಸುಲ್ಲಿ ಡೀಲ್ಸ್ ಆಪ್ ಸುದ್ದಿಯಲ್ಲಿದ್ದು, ಮೊಬೈಲ್ ಅಪ್ಲಿಕೇಷನ್ ನ ಸೃಷ್ಟಿಕರ್ತನನ್ನು ದೆಹಲಿ ಪೊಲೀಸರು ಮಧ್ಯಪ್ರದೇಶದ ಇಂದೋರ್ ನಿಂದ ಬಂಧಿಸಿದ್ದಾರೆ.

ಸುಲ್ಲಿ ಡೀಲ್ಸ್ ಆಪ್ ಗೆ ಸಂಬಂಧಿಸಿದಂತೆ ಪೊಲೀಸರು ಇದೇ ಮೊದಲ ಬಾರಿಗೆ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಸುಲ್ಲಿ ಡೀಲ್ಸ್ ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು ಅಪ್ಲಿಕೇಷನ್ ನ  ಹರಾಜು ಪಟ್ಟಿಯಲ್ಲಿ ಫೋಟೋ ಸಹಿತ ದಾಖಲಿಸಿ, ತಿರುಚಿ ಪ್ರಕಟಿಸಲಾಗಿತ್ತು. ಆರೋಪಿ ಓಂಕಾರೇಶ್ವರ್ ಠಾಕೂರ್ (26) ಇಂದೋರ್ ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ಪೂರ್ಣಗೊಳಿಸಿದ್ದು, ನ್ಯೂಯಾರ್ಕ್ ಸಿಟಿ ಟೌನ್ಶಿಪ್ ನ ನಿವಾಸಿಯಾಗಿದ್ದಾನೆ.

ವಿಚಾರಣೆ ವೇಳೆ ಆರೋಪಿ ತಾನು ಟ್ವಿಟರ್ ನ ಗುಂಪೊಂದರ ಸದಸ್ಯನಾಗಿದ್ದು, ಮುಸ್ಲಿಂ ಮಹಿಳೆಯರನ್ನು ಅವಮಾನ ಮಾಡುವುದು ಹಾಗೂ ಟ್ರೋಲ್ ಮಾಡುವ ಆಲೋಚನೆಗಳನ್ನು ಆ ಗುಂಪಿನಲ್ಲಿ ಹಂಚಿಕೊಳ್ಳಲಾಗುತ್ತಿತ್ತು ಎಂಬುದನ್ನು ಒಪ್ಪಿಕೊಂಡಿರುವುದಾಗಿ ಐಎಫ್ಎಸ್ಒ ವಿಭಾಗದ ಡಿಸಿಪಿ ಕೆಪಿಎಸ್ ಮಲ್ಹೋತ್ರ ಹೇಳಿದ್ದಾರೆ.

ಗಿಟ್ ಹಬ್ ನಲ್ಲಿ ತಾನು ಕೋಡ್ ನ್ನು ಅಭಿವೃದ್ಧಿಪಾಡಿಸಿದ್ದು, ಗಿಟ್ ಹಬ್ ಗೆ ಗುಂಪಿನ ಎಲ್ಲಾ ಸದಸ್ಯರಿಗೂ ಪ್ರವೇಶವಿತ್ತು. ಟ್ವಿಟರ್ ನಲ್ಲಿ ಈ ಆಪ್ ನ್ನು ಹಂಚಿಕೊಂಡಿದ್ದ. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಗುಂಪಿನ ಸದಸ್ಯರು ಹಂಚುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



Read more

[wpas_products keywords=”deal of the day”]