೧ ಈ ಸಂಗತಿ ನೆನಪಿಡಿ

ವಾಸ್ತು ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಮಂದಿರ ಅಥವಾ ದೇವಸ್ಥಾನದ ಬಳಿ ಮನೆ ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ದೇವಸ್ಥಾನ ಅಥವಾ ಮಂದಿರಗಳ ಬಳಿ ಮನೆ ಇರುವುದು ಶುಭವಲ್ಲ, ಅದರಲ್ಲೂ ಎಂದಿಗೂ ದುರ್ಗಾ ಅಥವಾ ಚಂಡಿ ದೇವಿ ದೇವಸ್ಥಾನದ ಬಳಿ ಮನೆ ತೆಗೆದುಕೊಳ್ಳಬೇಡಿ. ಇದಲ್ಲದೇ ಇನ್ನೂ ಕೆಲವು ದೇವಸ್ಥಾನಗಳು ಮನೆಯ ಸುತ್ತಮುತ್ತ ಇರುವುದು ಶುಭವಲ್ಲ.
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಎಂದಿಗೂ ಈ ಗಿಡಗಳನ್ನು ತಪ್ಪಿಯೂ ನೆಡಬಾರದು..! ಯಾಕೆ ಗೊತ್ತಾ?
೨ ಇದರ ಬಳಿ ಮನೆ ಖರೀದಿಸಬೇಡಿ

ವಾಸ್ತುಶಾಸ್ತ್ರದ ಪ್ರಕಾರ ಮುಖ್ಯವಾಗಿ ಮನೆಯ ಮುಖ್ಯ ಬಾಗಿಲು ತೆರೆಯುವ ದಿಕ್ಕಿನ ಕಡೆ ಗಮನ ವಹಿಸಬೇಕು. ಮನೆಯ ಮುಖ್ಯ ದ್ವಾರದ ಮುಂದೆ ಎಂದಿಗೂ ಸೂರ್ಯ, ಬ್ರಹ್ಮ, ವಿಷ್ಣು ಅಥವಾ ಶಿವನ ದೇವಾಲಯ ಇರಬಾರದು. ಇದಲ್ಲದೇ, ಅಂತಹ ಯಾವುದೇ ದೇವಾಲಯವು ಹತ್ತಿರದಲ್ಲಿದ್ದರೆ, ದೇವಾಲಯದ ನೆರಳು ಮನೆಯ ಮೇಲೆ ಬೀಳದಂತೆ ವ್ಯವಸ್ಥೆ ಮಾಡಿ.
೩ ಈ ಸಂಗತಿಯನ್ನೂ ಪರಿಗಣಿಸಿ

ದೇವಾಲಯದ ಎರಡು ಪಟ್ಟು ಎತ್ತರದವರೆಗೆ ಮನೆ ಅಥವಾ ಮನೆಯ ಮುಂದೆ ಮಂದಿರ ಅಥವಾ ದೇವಸ್ಥಾನ ಇರಬಾರದು. ಇದರ ಹೊರತಾಗಿ ಪೂರ್ವ, ಉತ್ತರ ಮತ್ತು ಈಶಾನ್ಯದಲ್ಲಿ ದೊಡ್ಡ ಬಂಡೆ, ದೊಡ್ಡ ಕಲ್ಲು, ಕಂಬ ಇರಬಾರದು. ಒಂದು ವೇಳೆ ಮನೆ ಅಥವಾ ಪ್ಲಾಟ್ ದೇವಾಲಯದ ಪಕ್ಕ ಇದ್ದೆಎ ದೇವಾಲಯದ ಪ್ರವೇಶದ್ವಾರದಿಂದ ಕನಿಷ್ಠ 25 ಮೀಟರ್ ಅಥವಾ 80 ಅಡಿ ದೂರದಲ್ಲಿರಬೇಕು. ನಮೂದಿಸಿದ ದೂರಕ್ಕಿಂತ ಕಡಿಮೆಯಿರುವುದು ಮನೆಯ ಸದಸ್ಯರಿಗೆ ಋಣಾತ್ಮಕವೆಂದು ಪರಿಗಣಿಸಲಾಗುತ್ತದೆ.
೪ ಈ ವಿಷಯದ ಬಗ್ಗೆಯೂ ಮುಖ್ಯವಾಗಿ ನೆನಪಿಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಕೆಸರು ಇರಬಾರದು. ಇದರ ಹೊರತಾಗಿ ಮರ, ಗೋಡೆ, ಮೂಲೆ, ಹಳ್ಳ, ಬಾವಿ ಹಾಗೂ ದೇವಸ್ಥಾನದ ನೆರಳು ಮನೆಯ ಮುಖ್ಯದ್ವಾರದ ಮುಂದೆ ಬೀಳಬಾರದು. ಇದರ ಹೊರತಾಗಿ, ಯಾವುದೇ ಸಮಾಧಿ, ಉದ್ದದ ಲೇನ್ ಅಥವಾ ಯಾವುದೇ ಅಡೆತಡೆಗಳು ಇರಬಾರದು. ಅಂತಹ ಅಡೆತಡೆಗಳು ಇದ್ದಲ್ಲಿ, ಅಂತಹ ಸ್ಥಳದಲ್ಲಿ ನಿವಾಸವನ್ನು ನಿರ್ಮಿಸುವುದು ಅಥವಾ ಖರೀದಿಸುವುದನ್ನು ತಪ್ಪಿಸಬೇಕು. ಅಂತಹ ಅಡೆತಡೆಗಳು ಅಶುಭ ಮತ್ತು ಜೀವನದಲ್ಲಿ ವಿನಾಶವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ.
ಮನೆಯಲ್ಲಿ ನೀವು ನೆಡುವ ಈ ಗಿಡಗಳ ದಿಕ್ಕು ಸರಿಯಾಗಿಲ್ಲದಿದ್ದರೆ, ನೆಮ್ಮದಿ ಕೆಡುವುದು..!
೫ ಯಾಕೆ ದೇವಾಲಯದ ಪಕ್ಕ ಮನೆ ಇರಬಾರದು

ಸಾಮಾನ್ಯವಾಗಿ ದೇವಾಲಯಗಳನ್ನು ನಿರ್ಮಿಸುವಾಗ ಸೂರ್ಯನ ಶಕ್ತಿಯನ್ನು ಸಂಪೂರ್ಣವಾಗಿ ಸ್ವೀಕರಿಸುವ ರೀತಿಯಲ್ಲಿ ಕಟ್ಟಿರುತ್ತಾರೆ ಮತ್ತು ನಂತರ ಆ ಶಕ್ತಿಯು ಸುತ್ತಮುತ್ತಲಿನ ಸಮುದಾಯದ ಕಲ್ಯಾಣಕ್ಕಾಗಿ ಹರಡುತ್ತವೆ. ಧ್ವಜಸ್ತಂಭ, ಗುಮ್ಮಟ ಮತ್ತು ಮುಂತಾದವು ದೇವಾಲಯದ ಭಾಗವಾಗಿದ್ದು, ಇದು ಪರಿಪೂರ್ಣತೆಯ ರೂಪವಾಗಿರುತ್ತದೆ. ಆದರೆ, ದೇವಾಲಯಕ್ಕಿಂತ ಎತ್ತರದ ಭೂಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿದರೆ, ಅದು ಸಂಪೂರ್ಣವಾಗಿ ದೇವಾಲಯಕ್ಕೆ ಅಡ್ಡವಾಗುವುದರಿಂದ ಸೂರ್ಯನ ಶಕ್ತಿಗೆ ಅಡಚಣೆಯನ್ನು ಉಂಟುಮಾಡಬಹುದು.