Karnataka news paper

ಬೆಂಗಳೂರನ್ನು ಕೋವಿಡ್ ಪ್ರಕರಣಗಳ ಕೇಂದ್ರಬಿಂದುವಾಗಿ ಪರಿವರ್ತಿಸಿದ 10 ವಾರ್ಡ್ ಗಳು!


The New Indian Express

ಬೆಂಗಳೂರು: ಕಳೆದ ಏಳು ದಿನಗಳಲ್ಲಿ ಹತ್ತು ವಾರ್ಡ್‌ಗಳು ಬೆಂಗಳೂರನ್ನು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಕೇಂದ್ರಬಿಂದುವಾಗಿ ಪರಿವರ್ತಿಸಿವೆ. ಶನಿವಾರ ರಾಜ್ಯದಲ್ಲಿ ಶೇ. 83. 5 ರಷ್ಟು ಸಕ್ರಿಯ ಪ್ರಕರಣಗಳೊಂದಿಗೆ ನಗರದಲ್ಲಿನ ಪಾಸಿಟಿವಿಟಿ ದರ ಶೇ. 10.53ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು 38,507 ಸಕ್ರಿಯ ಪ್ರಕರಣಗಳಲ್ಲಿ, ನಗರದಲ್ಲಿ 32,157 ಇದೆ. ರಾಜ್ಯದಲ್ಲಿ ಭಾನುವಾರ 8,906 ಪ್ರಕರಣಗಳು ಸೇರ್ಪಡೆಯಾಗಿದ್ದು, ಬೆಂಗಳೂರಿನಲ್ಲಿ 7,113 ಪ್ರಕರಣಗಳು ದಾಖಲಾಗಿವೆ.

ಬೆಳ್ಳಂದೂರು, ವರ್ತೂರು, ಬೇಗೂರು, ಹೆಚ್‌ಎಸ್‌ಆರ್ ಲೇಔಟ್, ಹಗದೂರು, ದೊಡ್ಡನೆಕ್ಕುಂದಿ, ಹೊಸ ತಿಪ್ಪಸಂದ್ರ, ಕೋರಮಂಗಲ, ಹೊರಮಾವು ಮತ್ತು ಶಾಂತಲಾ ನಗರ ವಾರ್ಡ್‌ಗಳಲ್ಲಿ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಇದು  ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ರಾಜ್ಯ ಕೋವಿಡ್ -19 ವಾರ್ ರೂಮ್‌ನ ಡೇಟಾ ಹೇಳುತ್ತಿದೆ. 

ಡಿಸೆಂಬರ್ 25 ರಿಂದ 31 ರವರೆಗೆ ನಗರದಲ್ಲಿ ಕೇವಲ 1,396 ಪ್ರಕರಣಗಳು ವರದಿಯಾಗಿವೆ ಎಂದು ಡೇಟಾ ತೋರಿಸಿದೆ. ಆದರೆ ಜನವರಿ 1 ಮತ್ತು 7 ರ ನಡುವೆ 24,281 ಪ್ರಕರಣಗಳನ್ನು ಸೇರಿಸಲಾಗಿದೆ. 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಟ್ಟು ಸಕ್ರಿಯವಾಗಿರುವವರ ಸಂಖ್ಯೆಯನ್ನು ಆಧರಿಸಿ ಆರು ಹಂತಗಳಾಗಿ ವಾರ್ಡ್‌ಗಳನ್ನು ಗುರುತಿಸಿದೆ.  

0-10 ಪ್ರಕರಣಗಳನ್ನು ಮೊದಲ ಮಟ್ಟದಲ್ಲಿ ಗುರುತಿಸಿದರೆ, 10-25 ಪ್ರಕರಣಗಳೊಂದಿಗೆ ಎರಡನೇ ಮಟ್ಟ, 25-50 ಕೇಸ್ ಗಳೊಂದಿಗೆ ಮೂರನೇ ಮಟ್ಟ,, 50-100 ಕೇಸ್ ಗಳೊಂದಿಗೆ 4ನೇ ಮಟ್ಟ 100-300 ಕೇಸ್ ಗಳೊಂದಿಗೆ ಐದನೇ ಹಾಗೂ ಸುಮಾರು 300 ಕೇಸ್ ಗಳೊಂದಿಗೆ  ಆರನೇ ಮಟ್ಟವನ್ನು ಸೂಚಿಸುತ್ತದೆ. ಬೆಳ್ಳಂದೂರು 300ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳೊಂದಿಗೆ ಆರನೇ ಮಟ್ಟದಲ್ಲಿದೆ. ವರ್ತೂರು, ಹಗದೂರು, ದೊಡ್ಡನೆಕ್ಕುಂದಿ, ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ರಾಜರಾಜೇಶ್ವರಿ ನಗರ, ಹೊರಮಾವು, ಶಾಂತಲಾ ನಗರ, ಬೇಗೂರು ನಂತರದ ಸ್ಥಾನದಲ್ಲಿವೆ. 

ಸೂಕ್ಷ್ಮ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 346 ಆಗಿದೆ. ಕಳೆದ ಹತ್ತು ದಿನಗಳಿಂದ ಕೂಡ ಹೆಚ್ಚಾಗಿದೆ. ಮಹದೇವಪುರ ವಲಯವು 116 ವಲಯಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬೊಮ್ಮನಹಳ್ಳಿ (90), ದಕ್ಷಿಣ (37), ಪಶ್ಚಿಮ (33), ಪೂರ್ವ (29), ದಾಸರಹಳ್ಳಿ (5) ಮತ್ತು ಆರ್‌ಆರ್ ನಗರ (3) ನಂತರದ ಸ್ಥಾನದಲ್ಲಿದೆ.

ಈಗಾಗಲೇ ಮಂಡ್ಯ, ಮೈಸೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಏರುಗತಿ ದಾಖಲಾಗಿದೆ. ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಈ ದರ ಹೆಚ್ಚಾಗುವುದನ್ನು ತಡೆಯುತ್ತದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. 

ನಗರದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ದಿನಕ್ಕೆ ಸುಮಾರು 70,000 ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇದರಿಂದಾಗಿ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ.  ಕೆಲವು ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿನ ಕ್ಲಸ್ಟರ್‌ಗಳಿಂದಾಗಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲಾ ಸಭೆ, ಸಮಾರಂಭಗಳನ್ನು ನಿಲ್ಲಿಸುವಂತೆ ನಾವು ಅಪಾರ್ಟ್‌ಮೆಂಟ್ ಸಂಘಗಳಿಗೆ ತಿಳಿಸಿದ್ದೇವೆ. ಜನರ ಪ್ರಯಾಣದ ಇತಿಹಾಸವನ್ನು ಪರಿಶೀಲಿಸಲು ನಾವು ಅವರನ್ನು ಕೇಳಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

 ಈ ಮಧ್ಯೆ ಇತ್ತೀಚಿನ ಉಲ್ಬಣ ಪ್ರಾರಂಭವಾದಾಗಿನಿಂದ  ರಾಜ್ಯ ಕೋವಿಡ್ ಪರೀಕ್ಷೆಯನ್ನು ಅತ್ಯುನ್ನತ ಮಟ್ಟಕ್ಕೆ ಹೆಚ್ಚಿಸಿದೆ ಎಂದು ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ. “ನಿನ್ನೆ ನಾವು 2 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದೇವೆ. ರಾಜ್ಯ ಇಲ್ಲಿಯವರೆಗೆ 5.73 ಕೋಟಿ ಪರೀಕ್ಷೆಗಳನ್ನು ನಡೆಸಿದೆ, ಇದು ದೇಶದಲ್ಲಿಯೇ ಮೂರನೇ ಸ್ಥಾನ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.



Read more

[wpas_products keywords=”deal of the day”]