Karnataka news paper

ಟೆಸ್ಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ನ್ಯೂಜಿಲೆಂಡ್ ಆಟಗಾರ ಡೆವೂನ್ ಕಾನ್ವೇ


Online Desk

ಕ್ರಿಸ್ಟರ್ಚ್: ನ್ಯೂಜಿಲೆಂಡ್ ನ ಸ್ಟಾರ್ ಬ್ಯಾಟ್ಸ್ ಮನ್ ಡೆವೂನ್ ಕಾನ್ವೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆಡಿದ ಮೊದಲ ಐದು ಟೆಸ್ಟ್ ಗಳಲ್ಲಿ ಸತತ 50 ಪ್ಲಸ್ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಬಾಂಗ್ಲಾ ದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ  ಕಾನ್ವೆ ಅರ್ಧ ಶತಕ ಗಳಿಸಿ ಈ ಗೌರವಕ್ಕೆ ಪಾತ್ರರಾದರು.

ಕಾನ್ವೆ ಈವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಐದರಲ್ಲಿಯೂ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ , ಮೂರು ಅರ್ಧ ಶತಕಗಳು ಸೇರಿವೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ  122 ರನ್ ಗಳಿಸಿದರು. 

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದ ಕಾನ್ವೆ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ವಿರುದ್ಧ 54 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು.



Read more…

[wpas_products keywords=”deal of the day sports items”]