Karnataka news paper

ಜ.12ರಿಂದ ನೀಟ್-ಪಿಜಿ(NEET-PG)ಕೌನ್ಸೆಲಿಂಗ್ ಆರಂಭ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ


ANI

ನವದೆಹಲಿ: ನೀಟ್-ಪಿಜಿ(NEET-PG) ಕೌನ್ಸೆಲಿಂಗ್ ಜನವರಿ 12ರಂದು ಬುಧವಾರ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಕೋವಿಡ್-19ನ ಮೂರನೇ ಅಲೆ ಉಲ್ಭಣವಾಗುತ್ತಿರುವ ಈ ಸಮಯದಲ್ಲಿ ನಾಲ್ಕು ಸುತ್ತಿನ ಆನ್ ಲೈನ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ವರ್ಷ ಆನ್ ಲೈನ್ ನಲ್ಲಿ ನೀಟ್ ಕೌನ್ಸೆಲಿಂಗ್-2021ನ್ನು ನಡೆಸಲಾಗುವುದು ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(MCC) ಈ ಹಿಂದೆಯೇ ತಿಳಿಸಿತ್ತು. 

ಇದನ್ನೂ ಓದಿ: ಈಗಿರುವ EWS ಮತ್ತು OBC ಮೀಸಲಾತಿ ಮಾದರಿಯಲ್ಲಿಯೇ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸಿ: ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ಅನುಮತಿ 

“ಆರೋಗ್ಯ ಸಚಿವಾಲಯವು ನಿವಾಸಿ ವೈದ್ಯರಿಗೆ ಭರವಸೆ ನೀಡಿದಂತೆ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಜನವರಿ 12 ರಿಂದ MCC ಯಿಂದ NEET-PG ಕೌನ್ಸೆಲಿಂಗ್ ಅನ್ನು ಪ್ರಾರಂಭಿಸಲಾಗುತ್ತಿದೆ. ಇದು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು” ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನಾಲ್ಕು ಸುತ್ತಿನ ಕೌನ್ಸೆಲಿಂಗ್ ಮೊದಲ ಸುತ್ತು, ಎರಡನೇ ಸುತ್ತು, ಮಾಪ್-ಅಪ್ ಸುತ್ತು ಮತ್ತು ಖಾಲಿ ಸುತ್ತು ಒಳಗೊಂಡಿರುತ್ತದೆ(stray vacancy round).

ನೀಟ್-ಪಿಜಿ ಮತ್ತು ನೀಟ್-ಯುಜಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಈ ವಾರದ ಆರಂಭದಲ್ಲಿ ಕೇಂದ್ರ ಸರ್ಕಾರಕ್ಕೆ ಹಸಿರು ನಿಶಾನೆ ತೋರಿಸಿತ್ತು. 





Read more

[wpas_products keywords=”deal of the day”]