Karnataka news paper

ಭಾರತದಿಂದ ಅಮೆರಿಕಾಗೆ ಮುಂದಿನ ತಿಂಗಳಿನಿಂದ ಮಾವು, ದಾಳಿಂಬೆ ರಫ್ತು ಪ್ರಾರಂಭ


Online Desk

ನವದೆಹಲಿ: ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಭಾರತದಿಂದ ಅಮೆರಿಕಾಗೆ ಮಾವು ಮತ್ತು ದಾಳಿಂಬೆ ರಫ್ತಾಗಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ದಾಳಿಂಬೆ ಆರಿಲ್ ನ್ನು ಅಮೆರಿಕಾಗೆ ರಫ್ತು ಮಾಡುವುದರ ಜೊತೆಗೆ ಅಮೆರಿಕಾದಿಂದ ಅಲ್ಫಾಲ್ಫಾ ಹೇ ಮತ್ತು ಚೆರ್ರಿಗಳ ಆಮದು ಏಪ್ರಿಲ್ ನಿಂದ ಪ್ರಾರಂಭವಾಗಲಿದೆ. 2021 ರ ನ.23 ರಂದು ನಡೆದ 12 ನೇ ಭಾರತ- ಅಮೆರಿಕ ವ್ಯಾಪಾರ ನೀತಿ ವೇದಿಕೆ ಸಭೆಯಲ್ಲಿ ಉಭಯ ರಾಷ್ಟ್ರಗಳನಡುವೆ 2 Vs 2 ಕೃಷಿ ಮಾರುಕಟ್ಟೆ ಪ್ರವೇಶ ಅಂಶಗಳಿಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.  

ಈ ಒಪ್ಪಂದದ ಪ್ರಕಾರ, ಭಾರತದ ಮಾವು, ದಾಳಿಂಬೆ, ದಾಳಿಂಬೆ ಆರಿಲ್ ನ್ನು ಅಮೆರಿಕಾದ ಮಾರುಕಟ್ಟೆಗೆ ರಫ್ತು ಮಾಡುವುದು, ಅಮೆರಿಕಾದ ಚೆರ್ರಿ, ಅಲ್ಫಾಲ್ಫಾ ಹೇ ಗಳನ್ನು ಭಾರತದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಫೆಬ್ರವರಿಯಿಂದ ಪ್ರಾರಂಭವಾಗಲಿದೆ.

ದಾಳಿಂಬೆ ಆರಿಲ್ ನ ರಫ್ತು2022 ರ ಏಪ್ರಿಲ್ ನಿಂದ ಪ್ರಾರಂಭವಾಗಲಿದ್ದು, ಈ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಭಾರತದ ಮಾರುಕಟ್ಟೆಯಲ್ಲಿ ಅಮೆರಿಕಾದ ಪೋರ್ಕ್ ಗೆ ಪ್ರವೇಶ ಕಲ್ಪಿಸುವುದಕ್ಕೆ ಸಿದ್ಧವೆ ಎಂದೂ ತಿಳಿಸಿದೆ.  ಕಳೆದ 2 ವರ್ಷಗಳಿಂದ ಭಾರತ ಅಮೆರಿಕಾಗೆ ಮಾವನ್ನು ರಫ್ತು ಮಾಡಿರಲಿಲ್ಲ.



Read more…

[wpas_products keywords=”deal of the day”]