Karnataka news paper

ಮೇಕೆದಾಟು ನೀರಿಗಾಗಿ ನಡೆದ ಪಾದಯಾತ್ರೆ ವೇಳೆ ನಿಯಮಗಳೆಲ್ಲ ನೀರುಪಾಲು; ಕರ್ಫ್ಯೂ ಬೆಲೆಯೇ ಇಲ್ಲ


ಕನಕಪುರ: ಕೊರೊನಾ ನಂತರ ಚೇತರಿಸಿಕೊಳ್ಳುತ್ತಿದ್ದ ಜೀವನ ಈಗ ಮತ್ತೆ ಓಮಿಕ್ರಾನ್‌ ಕಂಟಕದಿಂದ ಸುಳಿಗೆ ಸಿಲುಕಿದೆ. ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರಾಜ್ಯ ಬಿಜೆಪಿ ಸರಕಾರ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್‌ ಕರ್ಫ್ಯೂ ಜಾರಿಗೆ ತಂದಿದೆ.

ಜನಸಾಮಾನ್ಯರು, ವ್ಯಾಪಾರಿ ವಲಯದವರು ಮಾತ್ರ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ಕ್ಯಾರೇ ಎನ್ನದೇ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ. ಜನಸಾಮಾನ್ಯರಿಗೆ ಹೇರಿರುವ ನಿಯಮಗಳು ರಾಜಕಾರಣಿಗಳಿಗೆ ಅನ್ವಯವಾಗುವ ದಿಲ್ಲವಾ ಎಂದು ಎಲ್ಲರೂ ಪ್ರಶ್ನಿಸುವಂತಾಗಿದೆ. ಇದಕ್ಕೆ ಕಾರಣ ಕನಕಪುರದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ.

ಮೇಕೆದಾಟು ಪಾದಯಾತ್ರೆಯಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರು!

ಮೇಕೆದಾಟು ಪಾದಯಾತ್ರೆ ಮತ್ತು ಅದರ ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್‌ ನಿಯಮಾವಳಿ ಮತ್ತು ವೀಕೆಂಡ್‌ ಕರ್ಫ್ಯೂ ಬೆಲೆಯೇ ಇರಲಿಲ್ಲ. ಕಾಂಗ್ರೆಸ್‌ ನಾಯಕರು ಕೋವಿಡ್‌ ನಿಯಮ ಪಾಲಿಸಿಯೇ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು. ಸಮಾರಂಭದಲ್ಲೂಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಗಣ್ಯರು ಆಗಾಗ ನಿಯಮಾವಳಿಗಳನ್ನು ನೆನಪಿಸುತ್ತಿದ್ದರು. ಆದರೆ, 10 ಸಾವಿರದಷ್ಟು ಮಂದಿ ಭಾಗವಹಿಸಿದ್ದ ಪಾದಯಾತ್ರೆಯಲ್ಲಿಸಾಮಾಜಿಕ ಅಂತರ ಮರೆತೇ ಹೋಗಿತ್ತು. ವೇದಿಕೆಯಲ್ಲಿದ್ದ ಕೆಲವು ನಾಯಕರೇ ಮಾಸ್ಕ್‌ ಹಾಕಿರಲಿಲ್ಲ.

ರಾಜ್ಯದಲ್ಲಿ ಮದುವೆ, ಜಾತ್ರೆಗಳಿಗೆ ನಿರ್ಬಂಧವಿದೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದರೂ, ಜಿಲ್ಲಾಡಳಿತದ ಕಣ್ಣೆದುರೇ ಕಾನೂನು ಉಲ್ಲಂಘಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರೀ ಸಂಖ್ಯೆಯಲ್ಲಿಪೊಲೀಸ್‌ ಸಿಬ್ಬಂದಿಯಿದ್ದರೂ ಬಂದೋಬಸ್ತ್‌ ಕಲ್ಪಿಸಿದ್ದು ಹೊರತುಪಡಿಸಿದರೆ ಕೋವಿಡ್‌ ನಿಯಮ ಉಲ್ಲಂಘನೆ ಸಂಬಂಧ ಪ್ರಶ್ನಿಸುವ, ತಡೆಯುವ ಪ್ರಯತ್ನ ನಡೆಸಿದ್ದು ಕಾಣಲಿಲ್ಲ. ಪಾದಯಾತ್ರೆಯ ವೇಳೆಯಂತೂ ಎಲ್ಲನಿಯಮಗಳನ್ನು ಗಾಳಿಗೆ ತೂರಿ ಜನರ ಓಡಾಟವಿತ್ತು.

ಈ ನಡುವೆ, ಕೋವಿಡ್‌ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಸರಕಾರ ಹೇಳಿದೆ.

ಪ್ರಾಣಿಗಳಿಗೆ ಮಾಲಿನ್ಯ ಕಂಟಕ

ಸಂರಕ್ಷಿತ ಅರಣ್ಯ ಪ್ರದೇಶ ಅಕ್ಷರಶಃ ರಾಜಕೀಯದ ವೇದಿಕೆಯಾಗಿತ್ತು. ವೇದಿಕೆ ಜತೆಗೆ, ಪಾದಾಯಾತ್ರೆ ಉದ್ದಕ್ಕೂ ಹಾಕಿದ್ದ ಡಿಜಿಯಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿದ್ದ ವನ್ಯಜೀವಿಗಳು ಮೂಕವೇದನೆ ಅನುಭವಿಸಿದ್ದು ಸುಳ್ಳಲ್ಲ. ಇಷ್ಟೆಲ್ಲನಡೆಯುತ್ತಿದ್ದರೂ, ಅರಣ್ಯ ಇಲಾಖೆ ಮೌನಕ್ಕೆ ಶರಣಾಗಿದ್ದು ಮಾತ್ರವಲ್ಲ, ಒಬ್ಬ ಸಿಬ್ಬಂದಿಯು ಇತ್ತ ಸುಳಿಯಲಿಲ್ಲ. ಮಹಷಿರ್‌ ಮೀನು, ನೀರು ನಾಯಿ ಸೇರಿದಂತೆ 250ಕ್ಕೂ ಹೆಚ್ಚಿನ ಪ್ರಬೇಧ ಪಕ್ಷಿ ಸಂಕುಲ ಇದೇ ಕಾವೇರಿ ವನ್ಯಜೀವಿಧಾಮದಲ್ಲಿವೆ.

ಮೇಕೆದಾಟು ಪಾದಯಾತ್ರೆಯಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರು!

ನೀರಿಗಾಗಿ ಹೋರಾಟ ಎಂಬ ಹೆಸರಿನಲ್ಲಿ ಮೇಕೆದಾಟು ಪಾದಯಾತ್ರೆ ಕೈಗೊಳ್ಳುವ ಮೂಲಕ ಕಾಂಗ್ರೆಸ್‌ ನಾಯಕರು ಎಲ್ಲ ನಿಯಮಗಳನ್ನು ನೀರು ಪಾಲು ಮಾಡಿರುವುದು ವಿಪರ್ಯಾಸ!



Read more

[wpas_products keywords=”deal of the day sale today offer all”]