Karnataka news paper

ಮೈಸೂರು ತುಪ್ಪ ಕಲಬೆರಕೆ ಪ್ರಕರಣದಲ್ಲಿ ಶಾಮೀಲು: ಸರಬರಾಜು ಏಜೆನ್ಸಿ ವಿರುದ್ಧ ಕೇಸ್‌


ಹೈಲೈಟ್ಸ್‌:

  • ಮೈಸೂರಿನ ನಂಜನಗೂಡು ರಸ್ತೆಯ ಹೊಸ ಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋದಾಮು
  • 1 ಲೀಟರ್‌ ಪ್ಯಾಕ್‌ನಲ್ಲಿ ನಂದಿನಿ ತುಪ್ಪ ಖರೀದಿಸಿ ಬಳಿಕ ಕಲ ಬೆರೆಕೆ ಮಾಡುತ್ತಿದ್ದರು
  • ಪೊಲೀಸ್‌ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ಬೆಂಗಳೂರು: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಸಿದಂತೆ ತುಪ್ಪ ಪೂರೈಸಿದ ಬೆಂಗಳೂರಿನ ಕೆಎಂಎಫ್‌ ಒಕ್ಕೂಟದ ಸಗಟು ಮಾರಾಟಗಾರ ಏಜೆನ್ಸಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ.

ಕೆಎಂಎಫ್‌ ಹೆಚ್ಚುವರಿ ನಿರ್ದೇಶಕ ಡಾ. ಬಿ. ಪಿ. ಸುರೇಶ್‌ ನೀಡಿದ್ದ ದೂರಿನ ಆಧಾರದ ಮೇರೆಗೆ ಪೊಲೀಸರು ಬಸವನ ಗುಡಿಯ ಶೃತಿ ಮಾರ್ಕೆಟಿಂಗ್‌ ಕಾರ್ಪೊರೇಷನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೈಸೂರಿನ ನಂಜನಗೂಡು ರಸ್ತೆಯ ಹೊಸ ಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋದಾಮು ಪತ್ತೆಯಾಗಿತ್ತು. ಇಲ್ಲಿ 15 ಕೆಜಿ ಟನ್‌ ಹಾಗೂ 1 ಲೀಟರ್‌ ಪ್ಯಾಕ್‌ನಲ್ಲಿ ನಂದಿನಿ ತುಪ್ಪ ಖರೀದಿಸಿ ಬಳಿಕ ಕಲ ಬೆರೆಕೆ ಮಾಡುತ್ತಿದ್ದರು. ಇವರ ವಿರುದ್ಧ ಅಲ್ಲಿನ ಪೊಲೀಸ್‌ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ
ಈ ಜಾಲದಲ್ಲಿ ಕೆಲ ಸಗಟು ಮಾರಾಟಗಾರರೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಮೈಸೂರಿನಲ್ಲಿ ಉತ್ಪಾದಿಸಿದ ತುಪ್ಪವನ್ನು ಬೆಂಗಳೂರು ನಗರ ಹಾಗೂ ಸುತ್ತ – ಮುತ್ತಲೂ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲಿಸಲು ಕರ್ನಾಟಕದ ಹಾಲು ಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳ ವಿವಿಧ ತಂಡ ರಚಿಸಲಾಗಿತ್ತು.

ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಜಾಲ: ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ
ಈ ತಂಡ ಬೆಂಗಳೂರು ನಗರದ ವಿವಿಧೆಡೆ ಅಂಗಡಿ, ಗೋದಾಮಿನಲ್ಲಿ ದಾಸ್ತಾನು ಮಾಡಲಾದ 1 ಲೀಟರ್‌ ತುಪ್ಪದ ಪ್ಯಾಕೆಟ್‌ ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಕಚೇರಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ತುಪ್ಪದ ಮಾದರಿ ನಕಲಿ ಎಂಬುದು ದೃಢಪಟ್ಟಿತ್ತು. ಬಸವನಗುಡಿಯ ಶೃತಿ ಮಾರ್ಕೆಟಿಂಗ್‌ ಕಾರ್ಪೊರೇಷನ್‌ ಈ ಅಂಗಡಿಗಳಿಗೆ ತುಪ್ಪ ಸರಬರಾಜು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಾ. ಬಿ. ಪಿ. ಸುರೇಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಂದಿನಿ ನಕಲಿ ತುಪ್ಪ ತಡೆಗೆ ಜಾಗೃತ ದಳ; ಕೆಎಂಎಫ್‌ ನಿರ್ದೇಶಕರ ನೇತೃತ್ವದಲ್ಲಿ ಏಳು ಮಂದಿ ತಂಡ



Read more

[wpas_products keywords=”deal of the day sale today offer all”]