
ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಒಂದು ಪೋಸ್ಟ್‌ಗೆ ಐದು ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
2021ರಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಮೊದಲ ಐವತ್ತು ತಾರೆಗಳ ಪಟ್ಟಿಯಲ್ಲಿ 19ನೇ ಸ್ಥಾನವನ್ನು ವಿರಾಟ್ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿರುವ ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಒಂದು ಪೋಸ್ಟ್‌ಗೆ ₹ 11.91 ಕೋಟಿ ಗಳಿಸಿದ್ದಾರೆ. ಇದೇ ಪಟ್ಟಿಯಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಏಳನೇ ಸ್ಥಾನ ಪಡೆದಿದ್ದು, ₹ 8.68 ಕೋಟಿ ಗಳಿಸಿದ್ದಾರೆ.
ಭಾರತದ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು 27ನೇ ಸ್ಥಾನ ಗಳಿಸಿದ್ದು, ಒಂದು ಪೋಸ್ಟ್‌ಗೆ ನಾಲ್ಕು ಕೋಟಿ ಗಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ತಾರೆಗಳು ತಮ್ಮ ಅಭಿಮಾನಿಗಳೊಂದಿಗೆ ಸಂವಹನ ಸಾಧಿಸುತ್ತಿದ್ದಾರೆ. ಇದರಿಂದಾಗಿ ಅವರ ಜನಪ್ರಿಯತೆಯು ಇಮ್ಮಡಿಸುತ್ತಿದೆ. ಜೊತೆಗೆ ಸಾಮಾಜಿಕ ತಾಣವೂ ಬೆಳೆಯುತ್ತಿದೆ. ಪ್ರತಿವರ್ಷ ಅತಿ ಹೆಚ್ಚು ಜನಪ್ರಿಯತೆ ಸಾಧಿಸುವ ತಾರೆಗಳನ್ನು ಈ ತಾಣಗಳು ಪಟ್ಟಿ ಮಾಡುತ್ತಿವೆ. ಈ ಬಾರಿ ಇನ್ಸ್ಟಾಗ್ರಾಮ್‌ನಲ್ಲಿ ಹಾಲಿವುಡ್ ತಾರೆಯರು ಸಿಂಹಪಾಲು ಪಡೆದಿದ್ದಾರೆ ಎಂದು ಕ್ರಿಕೆಟ್ ಟ್ರ್ಯಾಕರ್ ಡಾಟ್ ಕಾಮ್ ವೆಬ್‌ಸೈಟ್ ಪ್ರಕಟಿಸಿದೆ.
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಬಿಎಫ್ಸಿಗೆ ಗೆಲುವಿನ ಕನಸು
Read more from source
[wpas_products keywords=”deals of the day offer today electronic”]