Karnataka news paper

‘ರಿಯಲ್‌ ಹೀರೋಸ್‌’, ಇಂಡಿಯನ್ ಆರ್ಮಿಗೆ ಹನುಮ ವಿಹಾರಿ ಸಲ್ಯೂಟ್!


ಹೈಲೈಟ್ಸ್‌:

  • ಇಂಡಿಯನ್‌ ಆರ್ಮಿ ಯೋಧನ ವೈರಲ್‌ ವಿಡಿಯೋಗೆ ಹನುಮ ವಿಹಾರಿ ಪ್ರತಿಕ್ರಿಯೆ.
  • ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿರುವ ವಿಹಾರಿ.
  • ದ್ವಿತೀಯ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಬದಲು ಬ್ಯಾಟ್‌ ಬೀಸಿದ್ದ ಹೈದರಾಬಾದ್‌ ಆಟಗಾರ.

ಬೆಂಗಳೂರು: ಹಿಮಾಲಯದ ತಪ್ಪಲಿನಲ್ಲಿ ಹಿಮ ಸುರಿಯುತ್ತಿದ್ದರೂ ಅಂಜದೆ ದೇಶದ ಗಡಿ ಕಾಯುತ್ತಿರುವ ಭಾರತೀಯ ಸೇನೆಯ ಯೋಧನೊಬ್ಬನ ವಿಡಿಯೋ ಭಾನುವಾರ ಸೋಷಿಯಲ್‌ ಮೀಡಿಯಾಗಳಲ್ಲಿ ಕಿಚ್ಚು ಹಚ್ಚಿದೆ.

ಈ ವೈರಲ್‌ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಭಾರತ ಟೆಸ್ಟ್‌ ತಂಡದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ, ಇಂಡಿಯನ್‌ ಆರ್ಮಿ ಯೋಧರೇ ‘ನಿಜವಾದ ಹೀರೋಸ್‌’ ಎಂದು ಸಲ್ಯೂಟ್‌ ಹೊಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಮೂಲಕ ಹೈದರಾಬಾದ್‌ ಮೂಲದ ಬಲಗೈ ಬ್ಯಾಟ್ಸ್‌ಮನ್‌ ಕಮ್‌ಬ್ಯಾಕ್‌ ಮಾಡಿದ್ದರು. ಕಳೆದ ವರ್ಷ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಆಟವಾಡಿ ಭಾರತಕ್ಕೆ ಸೋಲು ತಪ್ಪಿಸಿದ್ದ ವಿಹಾರಿ, ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದಿದ್ದರು. ಈಗ ಗಾಯಾಳು ವಿರಾಟ್‌ ಕೊಹ್ಲಿ ಸ್ಥಾನದಲ್ಲಿ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಆಡುವ ಮೂಲಕ ಟೀಮ್ ಇಂಡಿಯಾ ಪರ ಮರಳಿ ಕಣಕ್ಕಿಳಿದರು.

ಕೊನೇ ಟೆಸ್ಟ್‌ಗೆ ಕೊಹ್ಲಿ ಲಭ್ಯತೆ ಬಗ್ಗೆ ಮಾಹಿತಿ ನೀಡಿದ ಕೋಚ್‌ ದ್ರಾವಿಡ್‌!

ಇನ್ನು ಗಡಿ ಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಎಡೆ ಬಿಡದೆ ಹಿಮ ಸುರಿಯುತ್ತಲೇ ಇದೆ. ಹಿಮಪಾತಕ್ಕೂ ಜಗ್ಗದ ಭಾರತೀಯ ಯೋಧರು ಗಡಿ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವಿಡಿಯೋಗೆ ಹನುಮ ವಿಹಾರಿ ನೀಡಿರುವ ಪ್ರತಿಕ್ರಿಯೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು 25 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹರಿದು ಬಂದಿದೆ.

ಅಂದಹಾಗೆ ಈ ವಿಡಿಯೋವನ್ನು ಭದ್ರತಾ ಸಚಿವಾಲಯದ ಉಧಮ್‌ಪುರ್‌ ಪಿಆರ್‌ಒ ಮೊದಲು ಶೇರ್‌ ಮಾಡಿದ್ದಾರೆ. ಸಮುದ್ರ ಮಟ್ಟಕ್ಕಿಂತಲೂ 17 ಸಾವಿರ ಅಡಿಗಳ ಎತ್ತರದಲ್ಲಿ ಇರುವ ಸ್ಥಳದಲ್ಲಿ ಭಾರತ ಸೇನೆಯ ಯೋಧನೊಬ್ಬ ಹಿಮ ಸುರಿಯುತ್ತಿದ್ದರೂ ಗಡಿ ಕಾಯುವ ಕೆಲಸದಲ್ಲಿ ನಿಂತ್ತಿರುವುದು ಭಾರಿ ಮೆಚ್ಚುಗೆ ಗಿಟ್ಟಿಸಿದೆ. ಭಾರತೀಯ ಯೋಧರ ಮನೋಬಲವನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ವಿಹಾರಿಗೆ ಭಾರತ ತಂಡದಲ್ಲಿ ಸ್ಥಾನ ಅಭದ್ರ
ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ನಾಯಕ ವಿರಾಟ್‌ ಕೊಹ್ಲಿ ಬೆನ್ನು ನೋವಿನ ಸಮಸ್ಯೆ ಎದುರಿಸಿ ತಂಡಕ್ಕೆ ಅಲಭ್ಯರಾದರು. ಪರಿಣಾಮ ಬೆಂಚ್‌ ಕಾಯುತ್ತಾ ಕುಳಿತಿದ್ದ ಹನುಮ ವಿಹಾರಿಗೆ ಕೊನೆಗೂ ಅವಕಾಶದ ಬಾಗಿಲು ತೆರೆಯಿತು. ಮೊದಲ ಇನಿಂಗ್ಸ್‌ನಲ್ಲಿ 53 ಎಸೆತಗಳಲ್ಲಿ 20 ರನ್‌ ಗಳಿಸಿದ ವಿಹಾರಿ, 2ನೇ ಇನಿಂಗ್ಸ್‌ನಲ್ಲಿ 84 ಎಸೆತಗಳಲ್ಲಿ ಅಜೇಯ 40 ರನ್‌ ಗಳಿಸಿ ಗಮನ ಸೆಳೆದರು.

ಆಫ್ರಿಕಾ ವಿರುದ್ಧ ಭಾರತ 2ನೇ ಟೆಸ್ಟ್‌ ಸೋಲಲು 3 ಕಾರಣ ತಿಳಿಸಿದ ಗಂಭೀರ್‌!

ಆದರೆ, ಕೇಪ್‌ ಟೌನ್‌ನಲ್ಲಿ ಜನವರಿ 11ರಿಂದ ಆರಂಭವಾಗಲಿರುವ ಸರಣಿ ನಿರ್ಣಾಯಕ ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಿಹಾರಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಗುಣಮುಖರಾಗಿರುವ ವಿರಾಟ್‌ ಕೊಹ್ಲಿ ತಂಡ ಸೇರಲಿದ್ದಾರೆ. ಹೀಗಾಗಿ ಸೆಂಚೂರಿಯನ್‌ನಲ್ಲಿ ಜಯ ತಂದ ಹನ್ನೊಂದರ ಬಳಗವನ್ನು ಕಾಯ್ದುಕೊಂಡು ವಿಹಾರಿಯನ್ನು ಹೊರಗಿಡುವ ಸಾಧ್ಯತೆ ಇದೆ.

ಕಳೆದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್‌ ಪೂಜಾರಗೆ ಮತ್ತೊಂದು ಅವಕಾಶ ಸಿಗುವುದು ಬಹುತೇಕ ಖಾತ್ರಿಯಾಗಿದೆ. ಹೀಗಾಗಿ ವಿಹಾರಿ ಮತ್ತೊಂದು ಅವಕಾಶ ಸಲುವಾಗಿ ಬೆಂಚ್‌ ಕಾಯುವುದನ್ನು ಮುಂದುವರಿಸಲಿದ್ದಾರೆ.



Read more

[wpas_products keywords=”deal of the day sale today offer all”]