ಹೈಲೈಟ್ಸ್:
- ಧಾರಾವಾಹಿ, ಬಿಗ್ ಬಾಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಮ್ಯಾ ಪಂಜಾಬಿ ಭಾಗವಹಿಸಿದ್ದಾರೆ
- ಈಗಾಗಲೇ ಎರಡು ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕಾಮ್ಯಾ ಪಂಜಾಬಿ
- ಕಾಮ್ಯಾ ಪಂಜಾಬಿ ವೈಯಕ್ತಿಕ ಜೀವನದ ಕುರಿತಂತೆ ಟ್ರೋಲ್ ಆಗುತ್ತಿರುತ್ತದೆ
ಇತ್ತೀಚೆಗೆ ಮಹಿಳಾ ಸಬಲೀಕರಣ ಕುರಿತಂತೆ ಕಾಮ್ಯಾ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್ ಬಂದಿವೆ. ‘ಒಂದು ಮದುವೆಯನ್ನು ಉಳಿಸಿಕೊಳ್ಳಲಾಗಲಿಲ್ಲ, ಆಮೇಲೆ ಇನ್ನೊಂದು ಮದುವೆ. ಮಿತಿ ಇದೆ’ ಅಂತ ಒಬ್ಬರು ಕಾಮೆಂಟ್ ಮಾಡಿದ್ದರು. ಅದಕ್ಕೆ ಕಾಮ್ಯಾ ಕೂಡ ಸರಿಯಾಗಿ ಉತ್ತರ ನೀಡಿದ್ದಾರೆ.
“ನನಗೆ ಜೀವನ ನಡೆಸಲು, ಖುಷಿಯಾಗಿರಲು ಯಾವುದೇ ಹಕ್ಕು ಇಲ್ಲವೇ? ವಿಚ್ಛೇದನ ಆದರೆ ಮಹಿಳೆ ಸಾಯಬೇಕೇ? ವಿಚ್ಛೇದನದಿಂದ ಮಹಿಳೆಯ ಜೀವನ ಮುಗಿಯತ್ತಾ? ನಿಮ್ಮ ಹಾಗೆ ಮಾತನಾಡುವವರ ವಿರುದ್ಧ ಮಹಿಳೆ ಧ್ವನಿ ಎತ್ತವೇಕು, ಎತ್ತುತ್ತಾಳೆ. ಮಹಿಳೆ ಅಂತ ಅಬಲೆ ಅಂದುಕೊಳ್ಳಬೇಡಿ, ನಾನು ಹೋರಾಟ ಮಾಡುವೆ” ಎಂದು ಕಾಮ್ಯಾ ಪಂಜಾಬಿ ಅವರು ನೆಗೆಟಿವ್ ಕಾಮೆಂಟ್ ಮಾಡಿದೋರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮದುವೆಯಾಗಿ ಸ್ವಲ್ಪ ದಿನಕ್ಕೆ ಲಿಪ್‌ಲಾಕ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಮಹಿಳಾ ಬಿಗ್ ಬಾಸ್ ಸ್ಪರ್ಧಿ
‘Shakti: Astitva Ke Ehsaas Ki’ ಶೋನಲ್ಲಿ ಕಾಮ್ಯಾ ಪಂಜಾಬಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಉದ್ಯಮಿ ಬಂಟಿ ನೇಗಿ ಅವರನ್ನು 2003ರಲ್ಲಿ ಕಾಮ್ಯಾ ಮದುವೆಯಾಗಿದ್ದರು. 2013ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು. ಈ ದಂಪತಿಗೆ ಆರಾ ಎಂಬ ಮಗಳಿದ್ದಳು. ಕಿರುತೆರೆ ನಟ ಕರಣ್ ಪಟೇಲ್ ಜೊತೆಗೂ ಕಾಮ್ಯಾ ರಿಲೇಶನ್‌ಶಿಪ್ ಇತ್ತು. ಕರಣ್ ಪಟೇಲ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಅವರಿಂದ 2015ರಲ್ಲಿ ಕಾಮ್ಯಾ ಬ್ರೇಕಪ್ ಮಾಡಿಕೊಂಡರು. ದೆಹಲಿ ಮೂಲದ ಡಾಕ್ಟರ್ Shalabh Dang ಅವರ ಜೊತೆ 2020ರಲ್ಲಿ ಕಾಮ್ಯಾ ಎರಡನೇ ಬಾರಿಗೆ ವಿವಾಹ ಆಗಿದ್ದಾರೆ.
“ಸಾಕಷ್ಟು ಸಮಯದಿಂದ ಈ ರೀತಿ ಟ್ರೋಲ್ಸ್ ಆಗುತ್ತಿವೆ. ನಾವು ಈಗ ಎದುರಿಸುತ್ತಿರುವುದು ಹೊಸತೇನಲ್ಲ. ನನ್ನ ಮಗಳು, ಮೊದಲ ಮದುವೆ, ವಿಚ್ಛೇದನ, ಎರಡನೇ ಮದುವೆ ಬಗ್ಗೆಯೂ ಟ್ರೋಲ್ ಆಗಿದೆ. ಸಾಕಷ್ಟು ಬಾರಿ ನಾನು ಅದನ್ನೆಲ್ಲ ತಿರಸ್ಕಾರ ಭಾವದಿಂದ ನೋಡುವೆ. ಆದರೆ ಕೆಲವೊಮ್ಮೆ ತಿರುಗಿಸಿ ಉತ್ತರ ನೀಡಬೇಕಾಗುತ್ತದೆ. ಅವರು ಮಾಡುತ್ತಿರೋದು ತಪ್ಪು ಅಂತ ಹೇಳಿ ನಾವು ಬದಲಾಯಿಸಬೇಕಾಗುತ್ತದೆ” ಎಂದು ನಟಿ ಕಾಮ್ಯಾ ಪಂಜಾಬಿ ಹೇಳಿದ್ದಾರೆ.
‘ಬಿಗ್ ಬಾಸ್’ ಕಾರ್ಯಕ್ರಮದ ಟ್ಯಾಲೆಂಟ್ ಮ್ಯಾನೇಜರ್, 23ರ ಯುವತಿ ಪಿಸ್ತಾ ಧಾಕಡ್ ದುರಂತ ಸಾವು!
“ಹುಟ್ಟಿದಾಗಿನಿಂದ ಮಕ್ಕಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇರುತ್ತಾರೆ. ಆದರೆ ನಾನು ನನ್ನ ಮಗಳನ್ನು ಸೋಶಿಯಲ್ ಮೀಡಿಯಾದಿಂದ ದೂರ ಇಟ್ಟಿರುವೆ. ಅವಳಿಗೆ ಈಗ 12 ವರ್ಷ. ಜನ ಈ ರೀತಿ ಮಾತನಾಡುತ್ತಾರೆ ಅಂತ ಅವಳಿಗೆ ಗೊತ್ತಿಲ್ಲ. ಈ ಟ್ರೋಲ್ಸ್ ಬಗ್ಗೆಯೂ ಅವಳಿಗೆ ಜ್ಞಾನವಿಲ್ಲ. ಆದರೆ ಇದರ ಕುರಿತು ಮಾತನಾಡೋದನ್ನು ಅವಳು ಕೆಲ ಬಾರಿ ಕೇಳಿದ್ದಾಳೆ. ನಾನು ಒಂದಷ್ಟು ಸಮಯ ಸೋಶಿಯಲ್ ಮೀಡಿಯಾದಿಂದ ನಾನು ಅವಳನ್ನು ದೂರ ಇಡುವೆ. ಆದರೆ ಅವಳು ಸೋಶಿಯಲ್ ಮೀಡಿಯಾಕ್ಕೆ ಬಂದಮೇಲೆ ಇವೆಲ್ಲವುಗಳ ವಿರುದ್ಧ ಹೋರಾಟ ಮಾಡುತತಾಳೆ ಎಂದು ನಂಬಿದ್ದೇನೆ. ಅವಳ ತಾಯಿ ಹೇಗೆ ಸಾಕಷ್ಟು ವರ್ಷಗಳಿಂದ ಈ ಟ್ರೋಲ್ಸ್ ವಿರುದ್ಧ ಹೋರಾಟ ಮಾಡುತ್ತಿದ್ದಾಳೆ ಎಂದು ನನ್ನ ಮಗಳು ಅರಿತುಕೊಳ್ಳುತ್ತಾಳೆ” ಎಂದು ಕಾಮ್ಯಾ ಪಂಜಾಬಿ ಹೇಳಿದ್ದಾರೆ.
2001ರಿಂದ ಕಾಮ್ಯಾ ಪಂಜಾಬಿ ಅವರು ಸಾಕಷ್ಟು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿಯೂ ಬಿಗ್ ಬಾಸ್ ಶೋಗಳಲ್ಲಿ ಕಾಮ್ಯಾ ಪಂಜಾಬಿ ಸಾಕಷ್ಟು ಬಾರಿ ಅತಿಥಿಯಾಗಿ ಹೋಗಿದ್ದರು.