Karnataka news paper

ಚೀನಾ ವಿದೇಶಾಂಗ ಸಚಿವ–ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ಭೇಟಿ


Prajavani

ಕೊಲಂಬೊ (ಪಿಟಿಐ): ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಭಾನುವಾರ ಭೇಟಿಯಾಗಿ ಪ್ರವಾಸೋದ್ಯಮ, ಹೂಡಿಕೆಯನ್ನು ಉತ್ತೇಜಿಸುವ ಮತ್ತು ಕೋವಿಡ್‌ ಸೋಂಕಿನ ವಿರುದ್ಧ ಹೋರಾಡುವ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದ 65ನೇ ವರ್ಷಾಚರಣೆಯ ಸಂದರ್ಭದಲ್ಲಿ ಎರಡೂ ದೇಶಗಳ ನಾಯಕರ ಭೇಟಿ ಮಹತ್ವ ಪಡೆದಿದೆ. 

ರಾಜ್ಯ ಕೌನ್ಸಿಲರ್‌ ಸಹ ಆಗಿರುವ ವಾಂಗ್‌ ಎರಡು ದಿನಗಳ ಭೇಟಿಗಾಗಿ ಶನಿವಾರ ಮಾಲ್ಡೀವ್ಸ್‌ನಿಂದ ಇಲ್ಲಿಗೆ ಆಗಮಿಸಿದರು. ಅವರು ಈ ವೇಳೆ ರಾಷ್ಟ್ರದ ಉನ್ನತ ನಾಯಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. 

‘ವಾಂಗ್‌ ಅವರೊಂದಿಗಿನ ಭೇಟಿಯು ಬಹಳ ಸಂತಸವನ್ನುಂಟು ಮಾಡಿದೆ’ ಎಂದು ಪ್ರಧಾನಿ ಮಹಿಂದಾ ಅವರು ಟ್ವೀಟ್‌ ಮಾಡಿದ್ದಾರೆ.

ಚೀನಾದ ಸಾವಯವ ರಸಬೊಬ್ಬರ ಆಮದಿಗೆ ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕ ಎರಡೂ ದೇಶಗಳ ಸಂಬಂಧ ಒತ್ತಡಕ್ಕೆ ಸಿಲುಕಿತ್ತು.‌ ಚೀನಾಕ್ಕೆ ಹಣ ಪಾವತಿಗೆ ದೇಶದ ವಾಣಿಜ್ಯ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ವಾಂಗ್ ಅವರು ಭೇಟಿ ನೀಡುತ್ತಲೇ, ಶ್ರೀಲಂಕಾ ಪೀಪಲ್ಸ್ ಬ್ಯಾಂಕ್‌ ಚೀನಾಕ್ಕೆ 6.9 ದಶಲಕ್ಷ ಡಾಲರ್‌ ಹಣವನ್ನು ಬಿಡುಗಡೆ ಮಾಡಿದೆ.

 



Read more from source

[wpas_products keywords=”deals of the day offer today electronic”]