Karnataka news paper

ವೈದ್ಯರಲ್ಲಿ ಕೋವಿಡ್ ಸೋಂಕು: ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗಳಲ್ಲಿ ಸರ್ಜನ್‌ಗಳೇ ಇಲ್ಲ!


ಹೈಲೈಟ್ಸ್‌:

  • ದೇಶದ ಅನೇಕ ಆಸ್ಪತ್ರೆಗಳ ನಿವಾಸಿ ವೈದ್ಯರಲ್ಲಿ ಕೋವಿಡ್ ಸೋಂಕು
  • ಶಸ್ತ್ರಚಿಕಿತ್ಸೆ ನಡೆಸಲು ತಜ್ಞ ವೈದ್ಯರ ಕೊರತೆ, ರೋಗಿಗಳ ಪರದಾಟ
  • ಪಟ್ನಾದ ಏಮ್ಸ್ ಆಸ್ಪತ್ರೆಯ 30ರಲ್ಲಿ 14 ವೈದ್ಯರಲ್ಲಿ ಕೊರೊನಾ ವೈರಸ್
  • ಅನೇಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸದ ಆಪರೇಷನ್ ಥಿಯೇಟರ್‌

ಪಟ್ನಾ: ಕೊರೊನಾ ವೈರಸ್ ಪ್ರಕರಣಗಳಲ್ಲಿನ ಏಕಾಏಕಿ ಏರಿಕೆ, ಆರೋಗ್ಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿನ ನಿವಾಸಿ ವೈದ್ಯರು, ಶಸ್ತ್ರ ಚಿಕಿತ್ಸೆ ಪರಿಣತರು ಕೋವಿಡ್ 19 ಸೋಂಕಿಗೆ ಒಳಗಾಗುತ್ತಿರುವುದರಿಂದ ರೋಗಿಗಳ ಸೇವೆಗೆ ಭಾರಿ ತೊಡಕಾಗಿದೆ. ಇದರಿಂದ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಪಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) 30 ನಿವಾಸಿ ವೈದ್ಯರ ಪೈಕಿ 14 ಮಂದಿ ಹಾಗೂ ಅರವಳಿಕೆ ವಿಭಾಗದ ವೈದ್ಯಕೀಯ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ಅನೇಕ ಪ್ರಮುಖ ಶಸ್ತ್ರ ಚಿಕಿತ್ಸೆಗಳನ್ನು ತಡೆಹಿಡಿಯಲಾಗಿದೆ ಎಂದು ಸಂಸ್ಥೆಯ ಡೀನ್ ತಿಳಿಸಿದ್ದಾರೆ.
402 ಸಂಸತ್ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್: ಬಜೆಟ್ ಅಧಿವೇಶನಕ್ಕೆ ತೊಡಕು?
ಆಸ್ಪತ್ರೆಯ 150ಕ್ಕೂ ಹೆಚ್ಚು ಉದ್ಯೋಗಿಗಳು ಕೋವಿಡ್ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಶೇ 70ರಷ್ಟು ಮಂದಿ ವೈದ್ಯರಾಗಿದ್ದಾರೆ. ‘ದೈನಂದಿನ ಪ್ರಕರಣಗಳಿಗಾಗಿ ನಮ್ಮ ಆರು ಆಪರೇಷನ್ ಥಿಯೇಟರ್‌ಗಳು ಮತ್ತು ಮೂರು ನಾಲ್ಕು ತುರ್ತು ಸೇವಾ ಶಸ್ತ್ರಚಿಕಿತ್ಸೆ ಕೊಠಡಿಗಳು ಶುಕ್ರವಾರ ಕಾರ್ಯನಿರ್ವಹಿಸಿದ್ದವು. ಆದರೆ ಸೋಮವಾರ ಎಷ್ಟು ಆಪರೇಷನ್ ಥಿಯೇಟರ್‌ಗಳು ಕಾರ್ಯನಿರ್ವಹಣೆ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮತ್ತೆ ಮೂವರು ವೈದ್ಯರು ಅನಾರೋಗ್ಯದ ಮಾಹಿತಿ ನೀಡಿದ್ದಾರೆ. ಅವರ ಕೋವಿಡ್ ವರದಿಗಾಗಿ ಕಾಯುತ್ತಿದ್ದೇವೆ. ನಾವು ಈಗಾಗಲೇ 30ರಲ್ಲಿ 14 ನಿವಾಸಿ ವೈದ್ಯರ ಕೊರತೆ ಎದುರಿಸುತ್ತಿದ್ದೇವೆ. ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳೂ ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದಾರೆ’ ಎಂದು ಸಂಸ್ಥೆಯ ಡೀನ್ ಡಾ. ಉಮೇಶ್ ಭದಾನಿ ತಿಳಿಸಿದ್ದಾರೆ.

ಅನಸ್ತೇಷಿಯಾ ವಿಭಾಗದಲ್ಲಿ 20 ಸ್ನಾತಕೋತ್ತರ ವಿದ್ಯಾರ್ಥಿಗಳು, 20 ಹಿರಿಯ ನಿವಾಸಿ ವೈದ್ಯರು ಮತ್ತು 12 ಸಹಾಯಕ ಪ್ರೊಫೆಸರ್ ಹುದ್ದೆಯ ಸಿಬ್ಬಂದಿ ಇದ್ದಾರೆ. ಸಂಸ್ಥೆಯಲ್ಲಿ 33 ಸಂಪೂರ್ಣ ಕಾರ್ಯನಿರ್ವಹಿಸುವ ಆಪರೇಷನ್ ಥಿಯೇಟರ್‌ಗಳಿವೆ. ಆದರೆ ಸಾಮಾನ್ಯ ದಿನಗಳಲ್ಲಿ 15-16 ಓಟಿಗಳ ನಿರ್ವಹಣೆ ಮಾತ್ರ ಸಾಧ್ಯವಾಗಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಓಟಿಗಳ ಸಾಮರ್ಥ್ಯ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಒಂದೇ ದಿನ 1.59 ಲಕ್ಷ ಕೋವಿಡ್ ಪ್ರಕರಣ: ಶೇ 10ಕ್ಕೆ ಏರಿಕೆಯಾದ ಪಾಸಿಟಿವಿಟಿ ದರ
ಇರುವ ಮಾನವಶಕ್ತಿಯನ್ನೇ ಬಳಸಿಕೊಂಡು ಎಮರ್ಜೆನ್ಸಿ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಗರಿಷ್ಠ ಸಂಖ್ಯೆಯನ್ನು ದಿನಕ್ಕೆ 50ರಂತೆ ಸೀಮಿತಗೊಳಿಸಲಾಗಿದೆ. ಇದೇ ಪರಿಸ್ಥಿತಿ ಮಹಾರಾಷ್ಟ್ರದ ಅನೇಕ ಆಸ್ಪತ್ರೆಗಳಲ್ಲಿ ಉಂಟಾಗಿದೆ.



Read more

[wpas_products keywords=”deal of the day sale today offer all”]