Karnataka news paper

ಟಾಪ್‌ 10 ಕ್ರಿಪ್ಟೋ ಕರೆನ್ಸಿಗಳ ಮೌಲ್ಯದಲ್ಲಿ ಇಳಿಕೆ! ಬಿಟ್‌ಕಾಯಿನ್‌, ಇಥೆರಿಯಂ ಶೇ.6ರಷ್ಟು ಕುಸಿತ!


ಹೈಲೈಟ್ಸ್‌:

  • ವಾರಾಂತ್ಯದಲ್ಲಿ ಭಾರೀ ಇಳಿಕೆ ಕಂಡಿದ್ದ ಕ್ರಿಪ್ಟೋ ಮಾರುಕಟ್ಟೆ
  • ಕ್ರಮೇಣ ಆಲ್ಟ್‌ಕಾಯಿನ್‌ಗಳ ಖರೀದಿಗೆ ಮುಂದಾದ ಹೂಡಿಕೆದಾರರು
  • ಆದರೂ, ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಕ್ರಿಪ್ಟೋ ನಾಣ್ಯಗಳು ಕುಸಿತ ಮುಂದುವರಿಕೆ

ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ವಾರಾಂತ್ಯದಲ್ಲಿ ಭಾರೀ ಇಳಿಕೆ ಕಂಡಿತ್ತು. ಆದರೀಗ ಕೊಂಚ ಚೇತರಿಸಿಕೊಳ್ಳುತ್ತಿದೆ. ಹೂಡಿಕೆದಾರರು ಕ್ರಮೇಣವಾಗಿ ಮೌಲ್ಯ ಇಳಿಕೆಯಾಗಿದ್ದ ಆಲ್ಟ್‌ಕಾಯಿನ್‌ಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೂ, ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಹೆಚ್ಚಿನ ಟೋಕನ್‌ಗಳ ಮೌಲ್ಯ ಕುಸಿತ ಮುಂದುವರಿದೇ ಇದೆ.

ಬೆಳಗಿನ ವಹಿವಾಟಿನಲ್ಲಿ ಟಾಪ್ 10 ಡಿಜಿಟಲ್ ಟೋಕನ್‌ಗಳ ಪೈಕಿ 6 ಕ್ರಿಪ್ಟೋ ನಾಣ್ಯಗಳು ಕಡಿಮೆ ವಹಿವಾಟು ನಡೆಸುತ್ತಿವೆ. ಟೆರ್ರಾ ಮತ್ತು ಪೋಲ್ಕಾಡಾಟ್‌ ನಾಣ್ಯಗಳು ಅತ್ಯಲ್ಪ ಲಾಭ ಹೊಂದಿವೆ. ಆದರೆ, ಕಾರ್ಡಾನೊ ಶೇ. 6ರಷ್ಟು ಮೌಲ್ಯ ಕಳೆದುಕೊಂಡಿದೆ.

ಕಳೆದ ದಿನಕ್ಕೆ ಹೋಲಿಸಿದರೆ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ ಶೇಕಡಾವಾರು 2.25 ಟ್ರಿಲಿಯನ್‌ ಡಾಲರ್‌ಗೆ ಕುಸಿದಿದೆ. ಆದರೂ, ಒಟ್ಟು ಕ್ರಿಪ್ಟೋ ಮಾರುಕಟ್ಟೆ ಮೌಲ್ಯವು ಶೇ.8 ರಷ್ಟು ಕುಸಿದು 70.34 ಬಿಲಿಯನ್‌ ಡಾಲರ್‌ಗೆ ತಲುಪಿದೆ.

ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ನಿಯಮ ಅಗತ್ಯ – ಪ್ರಧಾನಿ ಮೋದಿ

ಮಾರುಕಟ್ಟೆ ಬಂಡವಾಳೀಕರಣದಲ್ಲಿ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿರುವ ಬಿಟ್‌ಕಾಯಿನ್ ವಹಿವಾಟಿನಲ್ಲಿಕೂಡ ಸ್ವಲ್ಪ ಇಳಿಕೆಯಾಗಿದೆ. ಬಿಟ್‌ಕಾಯಿನ್‌ ಸುಮಾರು $48,000 ಡಾಲರ್‌ ಆಸುಪಾಸಿನಲ್ಲಿ ವಹಿವಾಟು ನಡೆಸಿತು ಮತ್ತು ETH ಸಹ ಕಡಿಮೆಯಾಯಿತು ಎಂದು ಮುಡ್ರೆಕ್ಸ್‌ (Mudrex)ನ CEO ಮತ್ತು ಸಹ-ಸಂಸ್ಥಾಪಕ ಇದುಲ್‌ ಪಟೇಲ್ ಹೇಳಿದರು. “ಇಥೆರಿಯಂ ಮೌಲ್ಯ 4,000 ಡಾಲರ್‌ಗಿಂತಲೂ ಕಡಿಮೆಯಾಗಿದ್ದು, ನಾವು ಆಲ್ಟ್‌ಕಾಯಿನ್‌ಗಳಾದ್ಯಂತ ಪ್ರಮುಖ ಕುಸಿತವನ್ನು ನೋಡಬಹುದು” ಎಂದು ಅವರು ಹೇಳಿದರು.

ತಜ್ಞರ ಮಾತು
ಮಿಯಾಮಿಯ ಮೇಯರ್ ಒಬ್ಬರು ಬಿಟ್‌ಕಾಯಿನ್‌ನಲ್ಲಿಯೇ ತನ್ನ ಸಂಬಳ ಪಡೆಯುತ್ತಿದ್ದಾರೆ. ಅಲ್ಲದೆ ತನ್ನ 401 ಸಾವಿರ ಡಾಲರ್‌ ಮೊತ್ತದ ನಿವೃತ್ತಿ ನಿಧಿಯ ಒಂದು ಭಾಗವನ್ನು ಬಿಟ್‌ಕಾಯಿನ್‌ ಮೂಲಕವೇ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರಿಂದ ಈ ವಾರ ಬಿಟ್‌ಕಾಯಿನ್‌ನ ಮೂಲಭೂತ ಅಂಶಗಳು ಮತ್ತಷ್ಟು ಸುಧಾರಿಸಿದ್ದವು. ರಾಜಕೀಯ ನಾಯಕರು ಬಿಟ್‌ಕಾಯಿನ್‌ನಲ್ಲಿ ತಮ್ಮ ನಂಬಿಕೆಯನ್ನು ಪ್ರದರ್ಶಿಸಿದಾಗ, ಆರ್ಥಿಕ ವಲಯದಲ್ಲಿ ಅದನ್ನು ಅದನ್ನು ಒಂದು ಆಸ್ತಿಯಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ವಾಝಿರ್‌ಎಕ್ಸ್ ಟ್ರೇಡ್ ಡೆಸ್ಕ್ ಹೇಳಿದೆ.

ಬಿಟ್‌ ಕಾಯಿನ್‌ ಮೌಲ್ಯ ಶೇ.20 ಕುಸಿತ! ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ!

ಪ್ರೊಅಸೆಟ್ಸ್‌ ಎಕ್ಸ್‌ಚೇಂಜ್‌ ವಿಶ್ಲೇಷಣೆ ಇದು
ಕಳೆದ ಒಂದು ವಾರದಲ್ಲಿ ಬಿಟ್‌ಕಾಯಿನ್‌ ಮೌಲ್ಯದಲ್ಲಿ ಹೆಚ್ಚಿನ ಬೆಳವಣಿಗೆಯೇನು ಕಾಣಲಿಲ್ಲ. ಏಕೆಂದರೆ ಬೆಲೆಗಳು ತಮ್ಮ ಮಧ್ಯಂತರ ಕುಸಿತವನ್ನು ಮುಂದುವರೆಸಿದವು. ಮತ್ತು $ 51,600 ವರೆಗೆ ಸಣ್ಣ ಬ್ರೇಕ್‌ಔಟ್ ಪ್ರಯತ್ನವು ಹಿಂದಿನ ಮಂಗಳವಾರ ಕಾರ್ಯರೂಪಕ್ಕೆ ಬರಲು ವಿಫಲವಾಯಿತು. ಬಿಟ್‌ಕಾಯಿನ್ ಸರಾಸರಿ ಮೌಲ್ಯ 47,500 ಡಾಲರ್‌ ಮಟ್ಟದಲ್ಲಿ ಇದೆ. ಆದರೆ, ಈ ಮೌಲ್ಯ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಕ್ರಿಪ್ಟೋ ನಾಣ್ಯಗಳು ತ್ವರಿತ ಚೇತರಿಕೆ ಕಾಣುವ ಲಕ್ಷಣಗಳಿಲ್ಲ ಎನ್ನುತ್ತಾರೆ ತಜ್ಞರು.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more…