ಹೈಲೈಟ್ಸ್:
- ಯುವಕರಿಗೆ ಆಟದ ಮೈದಾನವಾಗಿ ಬದಲಾದ ದೇಗುಲ ಆವರಣ
- ಪ್ರವಾಸಿ ತಾಣಗಳಲ್ಲೂ ಜನರಿಲ್ಲ
- ಮಂಡ್ಯ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ಫುಲ್ ಟೈಟ್
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೀಕೆಂಡ್ ಕರ್ಫ್ಯೂನಿಂದಾಗಿ ಸದಾ ಗಿಜಿಗುಡುತ್ತಿದ್ದ ಮಂಡ್ಯ ಜಿಲ್ಲೆ, ಇದೀಗ ಸ್ತಬ್ಧಗೊಂಡಿದೆ. ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಾದ ಮೇಲುಕೋಟೆ ಬೆಟ್ಟ, ಶ್ರೀರಂಗಪಟ್ಟಣ ಪ್ರವಾಸಿಗರು ಬರದೆ ಭಣಗುಡುತ್ತಿದ್ದವು.
ಪ್ರವಾಸಿ ತಾಣಗಳಾದ ಕೆ.ಆರ್.ಎಸ್, ಕಾವೇರಿ, ಬಲಮುರಿ ಪಕ್ಷಿಧಾಮ, ದರಿಯಾ ದೌಲತ್, ಗುಂಬಸ್‌ನ ಪ್ರ ವಾಸಿ ತಾಣಗಳು ಖಾಲಿ ಹೊಡೆಯುತ್ತಿದ್ದವು. ಇನ್ನು ಜಿಲ್ಲೆಯ ಪ್ರಸಿದ್ದ ದೇಗುಲಗಳಾದ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಗಂಜಾಂನ ನಿಮಿಷಾಂಭ ದೇಗುಲ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇಗುಲಗಳು ಭಕ್ತರಿಲ್ಲದೆ ಬಾಗಿಲು ಬಂದ್ ಆಗಿದ್ದವು.
ಇನ್ನು ದೇಗುಲಗಳ ಬಳಿ ಭಕ್ತರಿಲ್ಲದೆ ದೇಗುಲದ ಆವರಣದಲ್ಲಿ ಹುಡುಗುರು ಕ್ರಿಕೆಟ್, ಚಿನ್ನಿ ದಾಂಡು ಆಟ ಆಡುತ್ತಾ, ದೇಗುಲ ಆವರಣವನ್ನು ಆಟದ ಮೈದಾನ ಮಾಡಿಕೊಂಡಿದ್ದರು.
ಪ್ರವಾಸಿ ತಾಣ ಸೇರಿ ದೇಗುಲದ ಆವರಣ ಬಳಿ ಇರುವ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕಂಗಾಲಾಗಿದ್ರೆ, ಪ್ರವಾಸಿಗರಿಗೆ ಮುದ ನೀಡ್ತಿದ್ದ ಕುದುರೆ ಸವಾರಿಯಿಂದ ಜೀವನ ನಡೆಸ್ತಿದ್ದ ಜನರೂ ಪರದಾಟ ತೋಡಿಕೊಂಡರು. ತುತ್ತಿನ ಚೀಲ ತುಂಬಿಸಿಕೊಳ್ಳುವ ಏಕೈಕ ಮಾರ್ಗವಾದ ಕುದುರೆ ಸವಾರಿ ಕೆಲಸವಿಲ್ಲದೆ ಕುದುರೆಗಳನ್ನು ಕಟ್ಟಿ ಹಾಕಿ ತಮ್ಮ ಸಂಕಟ ಬಿಚ್ಚಿಟ್ಟರು.
ಒಟ್ಟಿನಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಹೇರಲಾಗಿರುವ ವೀಕೆಂಡ್ ಕರ್ಫ್ಯೂಗೆ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದಾ ಜನರಿಂದ ಮತ್ತು ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಮಂಡ್ಯ ಜಿಲ್ಲೆ ಇದೀಗ ಸ್ತಬ್ಧಗೊಂಡಿದೆ.

ವೀಕೆಂಡ್ ಕರ್ಫ್ಯೂಗೆ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಭಣಭಣ: ದೇಗುಲಗಳೂ ಬಂದ್
Read more
[wpas_products keywords=”deal of the day sale today offer all”]