Karnataka news paper

ಇಡೀ ಕುಟುಂಬಕ್ಕೆ ಕೋವಿಡ್ ಪಾಸಿಟಿವ್: ಯೋಧನಂತೆ ಹೋರಾಡು ಎಂದ ಹೀನಾ ಖಾನ್


ಮುಂಬೈ: ಬಾಲಿವುಡ್‌ ನಟಿ ಹೀನಾ ಖಾನ್ ಅವರನ್ನು ಹೊರತುಪಡಿಸಿ ಇಡೀ ಕುಟುಂಬಸ್ಥರಿಗೆ ಕೋವಿಡ್‌  ದೃಢಪಟ್ಟಿರುವ ಕುರಿತು  ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಿರಂತರವಾಗಿ ಮಾಸ್ಕ್ ಧರಿಸಿದ ಕಾರಣಕ್ಕೆ ಹೀನಾ ಖಾನ್ ಮುಖದ ಮೇಲೆ ಕೆಂಪಾದ ಗುರುತುಗಳು ಕಾಣಿಸಿಕೊಂಡಿರುವುದನ್ನು ಫೋಟೊದಲ್ಲಿ ಕಾಣಬಹುದಾಗಿದೆ.

‘ಕಟು ವಾಸ್ತವ: 2020ಕ್ಕಿಂತಲೂ 2022ನೇ ವರ್ಷ ಎರಡು ಪಟ್ಟು ಹೆಚ್ಚು ಕಷ್ಟಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಕುಟುಂಬದಲ್ಲಿನ ಎಲ್ಲರಿಗೂ ಕೋವಿಡ್ ದೃಢಪಟ್ಟು, ಮನೆಯಲ್ಲಿ ನೀವು ಮಾತ್ರ ನೆಗೆಟಿವ್ ಆದಾಗ, ದಿನದ 24 ಗಂಟೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳೊಂದಿಗೆ ಸಜ್ಜಾಗಬೇಕಾಗುತ್ತದೆ ಮತ್ತು ಇಡೀ ಕುಟುಂಬವನ್ನು ನೋಡಿಕೊಳ್ಳಬೇಕಾಗುತ್ತದೆ. ಆಗ ನನಗಾಗಿರುವಂತೆ ಮುಖದ ಮೇಲೆ ಗುರುತು ಉಳಿದುಕೊಳ್ಳುತ್ತದೆ. ಜೀವನವೇ ತನ್ನನ್ನು ತಾನು ಅಡ್ಡಿಪಡಿಸಿಕೊಳ್ಳುವಾಗ ಯೋಧನಾಗು ಅಥವಾ ಅದರಿಂದ ಹೊರಬರಲು ಕನಿಷ್ಠ ಪ್ರಯತ್ನಿಸು ಎಂಬ ಮಾತುಗಳಿವೆ. ಇದನ್ನು ಹೇಳಲೆಂದೇ ನಾನು ಈ ಪೋಸ್ಟ್‌ನಲ್ಲಿ ಪ್ರಯತ್ನಿಸಿರುವೆ. ಗಾಯದ ಗುರುತುಗಳೊಂದಿಗೆ ಒಬ್ಬ ಯೋಧನಂತೆ ನಾವೆಲ್ಲರೂ ಮತ್ತೆ ಮತ್ತೆ ಪ್ರಯತ್ನಿಸಬೇಕು ಮತ್ತು ಹೋರಾಡಬೇಕು. ಇದು ಸಹ ಕಳೆದು ಹೋಗುತ್ತದೆ ಮತ್ತು ಜೀವನದಲ್ಲಿ ನಿಮಗೆ ಕಷ್ಟಗಳು ಎದುರಾದಾಗ ಇದನ್ನು ನೆನಪಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಹೀನಾ ಖಾನ್ ಕೋವಿಡ್‌ಗೆ ತುತ್ತಾಗಿದ್ದರು.





Read More…Source link

[wpas_products keywords=”deal of the day party wear for men wedding shirt”]