ಹೈಲೈಟ್ಸ್:
- ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಣ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲುಂಡಿದ್ದ ಆತಿಥೇಯ ನ್ಯೂಜಿಲೆಂಡ್.
- ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಬೃಹತ್ ಮೊತ್ತದ ಕಡೆಗೆ ದಾಪುಗಾಲಿಟ್ಟಿರುವ ಕಿವೀಸ್.
ಎರಡನೇ ವಿಕೆಟ್‌ಗೆ ಕ್ಯಾಪ್ಟನ್ ಟಾಮ್ ಲೇಥಮ್ (ಅಜೇಯ 186) ಅವರೊಟ್ಟಿಗೆ ಮುರಿಯದ 201 ರನ್‌ಗಳ ಜೊತೆಯಾಟವನ್ನಾಡಿರುವ ಕಾನ್ವೇ, ಸರಣಿಯಲ್ಲಿ ತಮ್ಮ ಎರಡನೇ ಶತಕವನ್ನು ಎದುರು ನೋಡುತ್ತಿದ್ದಾರೆ. ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಡೆವೋನ್ 122 ರನ್‌ಗಳನ್ನು ಬಾರಿಸಿದ್ದರು. ಕಿವೀಸ್ 2ನೇ ಟೆಸ್ಟ್‌ನ ಮೊದಲ ದಿನದ ಅಂತ್ಯಕ್ಕೆ 90 ಓವರ್‌ಗಳಲ್ಲಿ 1 ವಿಕೆಟ್‌ಗೆ 349 ರನ್‌ಗಳನ್ನು ಗಳಿಸಿದೆ.
ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಕಾನ್ವೇ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ವೃತ್ತಿ ಬದುಕಿನಲ್ಲಿ ಆಡಿದ ಮೊದಲ 5 ಟೆಸ್ಟ್ ಪಂದ್ಯಗಳಲ್ಲಿನ ಪ್ರಥಮ ಇನಿಂಗ್ಸ್‌ನಲ್ಲಿ ಸತತವಾಗಿ 50ಕ್ಕೂ ಹೆಚ್ಚು ರನ್ ಸ್ಕೋರ್ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿ ದಕ್ಷಿಣ ಆಫ್ರಿಕಾ ಸಂಜಾತ ನ್ಯೂಜಿಲೆಂಡ್ ಆಟಗಾರ ಕಾನ್ವೇಗೆ ಲಭ್ಯವಾಗಿದೆ.
ಪೂಜಾರ ಬ್ಯಾಟಿಂಗ್‌ನಲ್ಲಿ ಹಾಶೀಮ್ ಆಮ್ಲಾ ಕಂಡಿದ್ದೇನೆ ಎಂದ ಗವಾಸ್ಕರ್!
2021ರ ಇಂಗ್ಲೆಂಡ್ ಪ್ರವಾಸದಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಮನಮೋಹಕ ದ್ವಿಶತಕ ಬಾರಿಸುವ ಮೂಲಕ ಡೆವೋನ್ ಕಾನ್ವೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲೂ 80 ರನ್ ಬಾರಿಸಿ ಕಿವೀಸ್ ಜಯದ ರೂವಾರಿ ಆಗಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್ ಆಗಿ ಹೊರ ಹೊಮ್ಮಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ನಡೆದ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿ ಫೈನಲ್ ಪಂದ್ಯ ಕಾನ್ವೇ ವೃತ್ತಿಬದುಕಿನ ಮೂರನೇ ಟೆಸ್ಟ್ ಪಂದ್ಯ. ಇಲ್ಲೂ ಕೂಡ ಕಾನ್ವೇ ಸ್ಥಿರತೆ ಕಾಯ್ದುಕೊಂಡು ಮೊದಲ ಇನಿಂಗ್ಸ್‌ನಲ್ಲಿ 54 ರನ್ ಬಾರಿಸಿದ್ದರು. ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್ ವಿಶ್ವ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.
2021ರ ನವೆಂಬರ್-ಡಿಸೆಂಬರ್‌ನಲ್ಲಿ ನಡೆದ ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ ಕಾನ್ವೇ ಗಾಯದ ಸಮಸ್ಯೆ ಕಾರಣ ಅಲಭ್ಯರಾಗಿದ್ದರು. ಈಗ ಬಾಂಗ್ಲಾದೇಶ ವಿರುದ್ಧದ ಸರಣಿಯೊಂದಿಗೆ ಕಮ್‌ಬ್ಯಾಕ್ ಮಾಡಿ ಸತತ ಎರಡನೇ ಶತಕವನ್ನು ಎದುರು ನೋಡುತ್ತಿದ್ದಾರೆ.
ಸಿಡ್ನಿ ಟೆಸ್ಟ್ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಖವಾಜ!
ಗವಾಸ್ಕರ್ ದಾಖಲೆ ಸನಿಹ ಕಾನ್ವೇ
ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಆಡಿದ ಮೊದಲ 6 ಟೆಸ್ಟ್‌ಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಹೆಸರಲ್ಲಿದೆ. ಆದರೆ, ಗವಾಸ್ಕರ್ ಎಲ್ಲ ಅರ್ಧಶತಗಳನ್ನು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರಲಿಲ್ಲ. ಕಾನ್ವೇ ಮುಂದಿ ಟೆಸ್ಟ್‌ನಲ್ಲಿ ಕನಿಷ್ಠ ಫಿಫ್ಟಿ ಬಾರಿಸಿದರೂ ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ. ಗವಾಸ್ಕರ್ ತಮ್ಮ ಮೊದಲ 12 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 65 ಮತ್ತು 67*, 116 ಮತ್ತು 64*, 1 ಮತ್ತು 117*, 124 ಮತ್ತು 220, 4 ಮತ್ತು 53, 57 ಮತ್ತು 24 ರನ್‌ಗಳನ್ನು ಗಳಿಸಿದ್ದರು.
30 ವರ್ಷದ ಎಡಗೈ ಬ್ಯಾಟ್ಸ್‌ಮನ್ ಡೆವೋನ್ ಕಾನ್ವೇ ಸದ್ಯ ಆಡಿರುವ 9 ಇನಿಂಗ್ಸ್‌ಗಳಲ್ಲಿ 613 ರನ್‌ಗಳನ್ನು ಬಾರಿಸಿದ್ದಾರೆ.
ಡೆವೋನ್ ಕಾನ್ವೇ ವಿಶೇಷ ವಿಶ್ವ ದಾಖಲೆ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಐದು ಟೆಸ್ಟ್ ಪಂದ್ಯಗಳ ಪ್ರಥಮ ಇನಿಂಗ್ಸ್‌ಗಳಲ್ಲಿ ಸತತ 50+ ಸ್ಕೋರ್ ಮಾಡಿದ ಮೊದಲ ಬ್ಯಾಟ್ಸ್‌ಮನ್
- ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ 200 ರನ್
- ಇಂಗ್ಲೆಂಡ್ ಎದುರು ಎಡ್ಜ್‌ಬಾಸ್ಟನ್‌ನಲ್ಲಿ 80 ರನ್
- ಭಾರತ ವಿರುದ್ಧ ಸೌತ್‌ಹ್ಯಾಂಪ್ಟನ್‌ನಲ್ಲಿ 54 ರನ್
- ಬಾಂಗ್ಲಾದೇಶ ಎದುರು ಬೌಂಟ್ ಮೌಂಗಾನುಯ್‌ನಲ್ಲಿ 122 ರನ್
- ಬಾಂಗ್ಲಾದೇಶ ಎದುರು ಕ್ರೈಸ್ಟ್‌ಚರ್ಚ್‌ನಲ್ಲಿ 99* ರನ್
Read more
[wpas_products keywords=”deal of the day gym”]