Classroom
ನೀವು ಯಾವುದೇ ಅಪಾಯವಿಲ್ಲದ, ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿ ಹಿಂದಕ್ಕೆ ಪಡೆಯಲು ಸಾಧ್ಯವಾಗುವ ಕಡೆಯಲ್ಲಿ ಹಣವನ್ನು ಇರಿಸಲು ಬಯಸುವ ಗ್ರಾಹಕರು ಸಾಮಾನ್ಯವಾಗಿ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಾದ ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ಉಳಿತಾಯ ಯೋಜನೆಗಳು ಸ್ಥಿರ ಆದಾಯದ ಹೂಡಿಕೆದಾರರಲ್ಲಿ ಬಹಳ ಹಿಂದಿನಿಂದಲೂ ಜನಪ್ರಿಯವಾಗಿವೆ. ಆದರೆ ಕೆಲವೊಮ್ಮೆ ಈ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿನ ಹಣವು ವರ್ಷ ಕಳೆದರೂ ಹಿಂದಕ್ಕೆ ಪಡೆಯದೆ ಹಾಗೆಯೇ ಬಾಕಿ ಉಳಿದಿರುತ್ತದೆ.
ದೀರ್ಘ ಹೂಡಿಕೆಯ ಅವಧಿ ಅಥವಾ ಬಹು ಖಾತೆಗಳನ್ನು ಹೊಂದಿರುವ ಕಾರಣ, ಅನೇಕ ಜನರು ತಮ್ಮ ಉಳಿತಾಯ ಮತ್ತು ಹೂಡಿಕೆ ಯೋಜನೆಗಳ ಬಗ್ಗೆ ಮರೆತುಬಿಡುತ್ತಾರೆ. ನಿರ್ದಿಷ್ಟ ಸಮಯದ ನಂತರ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿಂದ ಹಿಂದಕ್ಕೆ ಪಡೆಯದೆ ಬಾಕಿ ಆಗಿರುವ ಹಣವನ್ನು ಬೇರೆ ಸರ್ಕಾರಿ ಯೋಜನೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಇನ್ನು ಮಾಹಿತಿಯ ಪ್ರಕಾರ, ಹಲವಾರು ಕಲ್ಯಾಣ ಮತ್ತು ಜಾಗೃತಿ ಫಂಡ್‌ಗಳು ಇದೆ. ಅಂತಹ ಖಾತೆಗಳಿಗೆ ಜನರು ಹಣವನ್ನು ವರ್ಗಾವಣೆ ಮಾಡುತ್ತಾರೆ.
ತಿಂಗಳಿಗೆ 12,500 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ ಪಡೆಯಿರಿ 40 ಲಕ್ಷಕ್ಕಿಂತ ಅಧಿಕ ಹಣ!
ಆದರೂ ಖಾತೆದಾರರು ಮತ್ತು ಪಾಲಿಸಿದಾರರು ಈ ಹಣವನ್ನು ನೇರವಾಗಿ ಈ ಫಂಡ್‌ನಿಂದ ಕ್ಲೈಮ್ ಮಾಡಬಹುದು. ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್‌ಗಳಿಂದ ಕ್ಲೈಮ್ ಮಾಡದ ಹಣವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಫಂಡ್‌ಗೆ (ಡಿಇಎಎಫ್), ಕ್ಲೈಮ್ ಮಾಡದ ವಿಮೆ, ಪಿಪಿಎಫ್ ಹಾಗೂ ಇಪಿಎಫ್ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (ಎಸ್‌ಸಿಡಬ್ಲ್ಯೂಎಫ್) ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಕ್ಲೈಮ್ ಮಾಡದ ಹಣಕ್ಕೆ ವರ್ಗಾಯಿಸಲಾಗಿದೆಯೇ ಎಂದು ಗ್ರಾಹಕರು ತಿಳಿದಿರಬೇಕು. ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ (ಐಇಪಿಎಫ್)ಗೆ ವರ್ಗಾವಣೆ ಮಾಡಲಾಗಿದೆಯೇ ಎಂಬುವುದನ್ನು ಕೂಡಾ ತಿಳಿದಿರಬೇಕು. ಹಾಗಾದರೆ ನಾವು ಪಡೆಯದೆ ಹಾಗೆಯೇ ಬಾಕಿ ಉಳಿದ ಹಣವನ್ನು ಟ್ರ್ಯಾಕ್ ಮಾಡುವುದು ಹೇಗೆ?, ಇಲ್ಲಿದೆ ವಿವರ ಮುಂದೆ ಓದಿ..

ಬಾಕಿ ಉಳಿದಿರುವ ಹಣವನ್ನು ಟ್ರ್ಯಾಕ್ ಮಾಡುವುದು ಹೇಗೆ?
* ಮೊದಲು ಇಂಡಿಯಾ ಪೋಸ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ https://www.indiapost.gov.in/vas/Pages/IndiaPostHome.aspx
* Banking and Remittance ಮೇಲೆ ಕ್ಲಿಕ್ ಮಾಡಿ
* Post Office Savings Scheme ಅನ್ನು ಆಯ್ಕೆಮಾಡಿ
* ಬಳಿಕ select Senior Citizen Welfare Fund ಆಯ್ಕೆ ಮಾಡಿ
* ಉಳಿತಾಯ ಬ್ಯಾಂಕ್, ಪಿಪಿಎಫ್, ಕಿಸಾನ್ ವಿಕಾಸ್ ಪತ್ರದಂತಹ ಖಾತೆಗಳ ಆಧಾರದ ಮೇಲೆ ಪಟ್ಟಿ ಬರಲಿದೆ
* ಯಾವ ಖಾತೆ ಎಂದು ಕ್ಲಿಕ್ ಮಾಡಿದರೆ, ನಿಮಗೆ ರಾಜ್ಯವಾರು ಖಾತೆ ವಿವರ ಲಭ್ಯವಾಗಲಿದೆ.
ವಿಮಾ ಹಣದ ವಿಚಾರದಲ್ಲಿ ಹೇಳುವುದಾದರೆ, ಉದಾಹರಣೆಗೆ, ನಿಗದಿತ ದಿನಾಂಕದಿಂದ 10 ವರ್ಷಗಳ ಅಂತ್ಯದಲ್ಲಿ ಹಣವು ಹಾಗೆಯೇ ಉಳಿದಿದ್ದರೆ ಅದನ್ನು ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತದೆ. ಫಲಾನುಭವಿಗಳು ತಮ್ಮ ಪಾಲಿಸಿಗಳ ಅಡಿಯಲ್ಲಿ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (ಎಸ್‌ಸಿಡಬ್ಲ್ಯೂಎಫ್) ವರ್ಗಾಯಿಸಿದ ದಿನಾಂಕದಿಂದ 25 ವರ್ಷಗಳವರೆಗೆ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ಎಸ್‌ಸಿಡಬ್ಲ್ಯೂಎಫ್ ನಿಧಿಗೆ ವರ್ಗಾಯಿಸಿದ ನಂತರ 25 ವರ್ಷಗಳ ಅವಧಿಯವರೆಗೆ ಕ್ಲೈಮ್ ಮಾಡದಿದ್ದರೆ ಆ ಹಣವನ್ನು ಹಣಕಾಸು ಕಾಯಿದೆ, 2015 ರ ಸೆಕ್ಷನ್ 126 ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಹಣಕಾಸು ಸಚಿವಾಲಯದ ಪ್ರಕಾರ, ಹಿರಿಯ ನಾಗರಿಕರ ಕಲ್ಯಾಣ ನಿಧಿಯ ಹಣವನ್ನು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗುತ್ತದೆ.
English summary
Post Office Small Saving Scheme: How To Track Unclaimed Money In PPF, NSC?
Post Office Small Saving Scheme: How Customers Can Track Unclaimed Money In PPF, NSC?.
Story first published: Sunday, January 9, 2022, 16:10 [IST]
Read more…
[wpas_products keywords=”deal of the day”]