Karnataka news paper

ವಿದ್ಯಾರ್ಥಿಗಳ ಶುಲ್ಕ ಗುಳುಂ: ಇ.ಡಿಯಿಂದ ಬೆಂಗಳೂರಿನ ಖಾಸಗಿ ವಿವಿ ಮಾಜಿ ಕುಲಪತಿ ಬಂಧನ


ಹೈಲೈಟ್ಸ್‌:

  • ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಅಂಗೂರ್
  • ವಿದ್ಯಾರ್ಥಿಗಳ ಪೋಷಕರಿಂದ ಸ್ವಂತ ಬ್ಯಾಂಕ್ ಖಾತೆಗೆ ಶುಲ್ಕ ರವಾನಿಸಿಕೊಂಡ ಆರೋಪ
  • ಮಧುಕರ್ ಹಾಗೂ ಇತರರಿಂದ ಸುಮಾರು 107 ಕೋಟಿ ರೂಪಾಯಿ ಶುಲ್ಕ ವಂಚನೆ
  • ಮಾಜಿ ಕುಲಪತಿಯನ್ನು ಬಂಧಿಸಿದ ಜಾರಿ ನಿರ್ದೇಶನಾಲಯ, 7 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಸುಮಾರು 4,500 ವಿದ್ಯಾರ್ಥಿಗಳ ಪೋಷಕರಿಂದ ಶುಲ್ಕದ ಹೆಸರಿನಲ್ಲಿ ಸಂಗ್ರಹಿಸಿದ 107 ಕೋಟಿ ರೂಪಾಯಿ ಹಣವನ್ನು ವಂಚಿಸಿದ ಆರೋಪದಲ್ಲಿ ಬೆಂಗಳೂರು ಮೂಲದ ಖಾಸಗಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಜಿ ಅಂಗೂರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಅವರನ್ನು ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯದ ಮುಂದೆ ಶನಿವಾರ ಹಾಜರುಪಡಿಸಲಾಗಿದ್ದು, ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇ.ಡಿ (ED) ಹೇಳಿಕೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇ.ಡಿ ದೇಶಾದ್ಯಂತ ತನಿಖೆ ನಡೆಸಬಹುದು; ಹೈಕೋರ್ಟ್ ಅಭಿಪ್ರಾಯ
ವಿದ್ಯಾರ್ಥಿಗಳ ಪೋಷಕರಿಗೆ ಇ-ಮೇಲ್ ಹಾಗೂ ನೋಟಿಸ್ ಪತ್ರದ ಮೂಲಕ ಮಾಹಿತಿ ನೀಡಿದ್ದ ಮಧುಕರ್ ಅಂಗೂರ್ ಮತ್ತು ಇತರರು, ಕಾಲೇಜು ಶುಲ್ಕವನ್ನು ಅಲಯನ್ಸ್ ವಿಶ್ವವಿದ್ಯಾಲಯದ ಅಧಿಕೃತ ಖಾತೆಗಳಿಗೆ ರವಾನಿಸುವುದು ಬೇಡ. ಅದರ ಬದಲಾಗಿ ಅಂಗೂರ್ ಹಾಗೂ ಇತರರು ಶ್ರೀವಾರಿ ಶೈಕ್ಷಣಿಕ ಸೇವೆಗಳು ಹೆಸರಿನಲ್ಲಿ ಅಕ್ರಮವಾಗಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ತಮ್ಮ ಮಕ್ಕಳ ಶುಲ್ಕವನ್ನು ಕಳುಹಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಲಾಗಿತ್ತು.

‘ಹೀಗಾಗಿ ಸುಮಾರು 4,500 ವಿದ್ಯಾರ್ಥಿಗಳ ಪೋಷಕರು ತಮ್ಮ ಶುಲ್ಕದ ಮೊತ್ತವನ್ನು ಅಕ್ರಮವಾಗಿ ತೆರೆದ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಿದ್ದರು. ವಿದ್ಯಾರ್ಥಿಗಳ ವರ್ಗದಿಂದ ಸಂಗ್ರಹಿಸಿದ ಟ್ಯೂಷನ್ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಇತರೆ ಶುಲ್ಕಗಳು ಸುಮಾರು 107 ಕೋಟಿ ರೂ ಮೊತ್ತದ್ದಾಗಿದ್ದು, ಅದನ್ನು ಅಂಗೂರ್ ಹಾಗೂ ಇತರರು ಹಂಚಿಕೊಂಡಿದ್ದರು’ ಎಂದು ಇ.ಡಿ ಹೇಳಿದೆ.
ಹಾಲು ಉತ್ಪಾದಕರ ಸಹಕಾರ ಸಂಘದ ಹಣ ದುರುಪಯೋಗ; ಆರೋಪಿಗೆ ಜೈಲು ಶಿಕ್ಷೆ
ಈ ಶುಲ್ಕದ ಪಾವತಿಯನ್ನು 2016-17ನೇ ಸಾಲಿನಲ್ಲಿ ಮಾಡಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಅಂಗೂರ್ ಹಾಗೂ ಅವರ ಕುಟುಂಬದ ಸದಸ್ಯರಾದ ಪ್ರಿಯಾಂಕಾ ಎಂ ಅಂಗೂರ್, ರವಿ ಕುಮಾರ್ ಕೆ, ಶ್ರುತಿ ಮತ್ತು ಪಾವನಾ ದಿಬ್ಬೂರ್ ಅವರಿಗೆ ಸೇರಿದ 19 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು.

ಮಾಜಿ ಕುಲಪತಿ ಅಂಗೂರ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಇ.ಡಿ ಅಕ್ರಮ ಹಣ ವರ್ಗಾವಣೆಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಬೆಂಗಳೂರು ಪೊಲೀಸರು ಮತ್ತು ಇತರೆ ಸಂಸ್ಥೆಗಳು ಅವರ ವಿರುದ್ಧ ಕನಿಷ್ಠ 4 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಅವುಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿತ್ತು.



Read more

[wpas_products keywords=”deal of the day sale today offer all”]