ಹೈಲೈಟ್ಸ್:
- ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಿನ್ನೆಲೆ
- ಸರ್ಕಾರ ಬದುಕಿದ್ಯಾ ಎಂಬುವುದನ್ನು ತೋರಿಸುತ್ತೇವೆ!
- ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕಿಡಿ
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದಾರೆ. ಇದೊಂದು ವಿಶೇಷ ಪ್ರಕರಣ ರೀತಿಯಲ್ಲಿ ಸ್ಥಿತಿ ಕಾಂಗ್ರೆಸ್ ನಿರ್ಮಾಣ ಮಾಡಿದೆ. ಕಾನೂನು ಉಲ್ಲಂಘನೆ ಮಾಡಿದ್ರೆ ಶಿಸ್ತು ಕ್ರಮಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಳಂಬ, ವಿವಾದ, ರಾಜಕೀಯ ತಿಕ್ಕಾಟದ ಸುತ್ತ ‘ಮೇಕೆದಾಟು ಯೋಜನೆ’
ಕಾಂಗ್ರೆಸ್ ನವರು ಮಾಡ್ತಿರೋದು ಬೀದಿ ನಾಟಕ. ಇದನ್ನು ನಾನು ಖಂಡಿಸ್ತಿವಿ. ರಾಜ್ಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಇದೆ. ಈಗ ಪಾದಯಾತ್ರೆ ಮಾಡಿದ್ರೆ ಕೊರೊನಾ ಜಾಸ್ತಿ ಆಗುತ್ತೆ. ಚುನಾವಣೆಗೋಸ್ಕರ ಕಾಂಗ್ರೆಸ್ ಬೀದಿ ನಾಟಕ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ನವರು ಕಾವೇರಿಗೆ ಮಾಡುತ್ತಿರುವ ಅಪಮಾನ ಎಂದರು.
ಬಿಬಿಎಂಪಿ ಚುನಾವಣೆ ಗುರಿಯಾಗಿಟ್ಟುಕೊಂಡು ಬೀದಿ ನಾಟಕ ಶುರುಮಾಡಿದ್ದಾರೆ. ಇದು ನನಗೆ ಖೇದ ಉಂಟುಮಾಡಿದೆ. ಇದಕ್ಕೆ ನನ್ನ ಧಿಕ್ಕಾರವಿದೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು..? ಮೇಕೆದಾಟುಗೆ ಏನೇ ಒಳ್ಳೆ ಕೆಲಸ ಆಗಬೇಕು ಅಂದ್ರೆ ಬಿಜೆಪಿಯಿಂದ ಅದರಲ್ಲೂ ಬೊಮ್ಮಾಯಿ ಸರ್ಕಾರದಿಂದ ಮಾತ್ರ ಎಂದರು.
ರಾಜ್ಯದಲ್ಲಿ ಬರುವ ಕೋವಿಡ್ ಕೇಸ್ ಸುಳ್ಳು ಹೇಳ್ತಿರಾ ಎಂಬ ಆರೋಪ ವಿಚಾರವಾಗಿ, ಮಹಾರಾಷ್ಟ್ರದಲ್ಲಿ ಅಷ್ಟೊಂದು ಕೇಸ್ ಗಳು ಬರುತ್ತಿದ್ಯಾಲ್ಲಾ ಹಾಗಾದರೆ ಅದು ಸುಳ್ಳಾ..? ನಾವೇನಾದರೂ ಕೇಸ್ ಜಾಸ್ತಿ ಮಾಡಿ ಅಂದ್ವಾ..? ಅಲ್ಲಿರೋದು ನಿಮ್ಮದೇ ಸರ್ಕಾರ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
Read more
[wpas_products keywords=”deal of the day sale today offer all”]