Karnataka news paper

100 ಮಿಲಿಯನ್‌ ಡಾಲರ್‌ ಕೊಟ್ಟು ಅಮೆರಿಕದ ಪ್ರಸಿದ್ಧ ಪಂಚತಾರಾ ಹೋಟೆಲ್‌ ಖರೀದಿಸಿದ ರಿಲಾಯನ್ಸ್‌!


ಮುಂಬೈ: ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ( Reliance Industries Limited – RIL ) ಸುಮಾರು 100 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ಅಮೆರಿಕ ಮಿಡ್ ಟೌನ್‌ ಮ್ಯಾನ್‌ಹ್ಯಾಟ್ಟನ್‌ನಲ್ಲಿರುವ ‘ಮಂಡರಿನ್‌ ಓರಿಯಂಟಲ್‌ ನ್ಯೂಯಾರ್ಕ್‌’ ಎನ್ನು ಪಂಚತಾರಾ ಹೋಟೆಲ್ ಒಂದನ್ನು ಖರೀದಿಸಲು ಮುಂದಾಗಿದೆ.

ಈ ಬಗ್ಗೆ ರಿಯಾಲನ್ಸ್‌ನಿಂದಲೇ ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಈ ಬಗ್ಗೆ ಶನಿವಾರ ಸ್ಟಾಕ್ ಎಕ್ಸ್‌ಜೇಂಜ್‌ ಫೈಲಿಂಗ್‌ನಲ್ಲಿ (stock exchange filing) ಹೇಳಿಕೆ ನೀಡುವ ರಿಲಾಯನ್ಸ್‌, ಕೇಮನ್ ಐಲ್ಯಾಂಡ್ಸ್ ಮೂಲದ ಕೊಲಂಬಸ್ ಸೆಂಟರ್ ಕಾರ್ಪ್ (Cayman) ಅನ್ನು ಸರಿಸುಮಾರು 98.15 ಮಿಲಿಯನ್ ಡಾಲರ್ ಈಕ್ವಿಟಿ ಮೌಲ್ಯಕ್ಕೆ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಿದೆ.

$3 ಟ್ರಿಲಿಯನ್‌ ಮುಟ್ಟಿದ ಆ್ಯಪಲ್‌ ಬಂಡವಾಳ: ಇದು ಅಮೆರಿಕ, ಚೀನಾ, ಜಪಾನ್‌, ಜರ್ಮನಿಯ ಒಟ್ಟು ಜಿಡಿಪಿಗೆ ಸಮ
ಕೊಲಂಬರ್‌ ಸೆಂಟರ್‌ ಕಾರ್ಪೊರೇಷನ್‌ ಅನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಮಂಡರಿನ್‌ ಓರಿಯಂಟಲ್‌ ನ್ಯೂಯಾರ್ಕ್‌ ಹೋಟೆಲ್‌ನ ಶೇ. 73.37 ರಷ್ಟು ಶೇರುಗಳು ರಿಲಾಯನ್ಸ್‌ನ ಪಾಲಾಗಲಿದೆ. ಹೀಗಾಗಿ ಈ ಪಂಚತಾರ ಹೋಟೆಲ್‌ನ ನಿರ್ವಹಣೆಯನ್ನು ರಿಲಾಯನ್ಸ್ ಇಂಡಸ್ಟ್ರಿಯಲ್‌ ಇನ್ವೆಸ್ಟ್‌ಮೆಂಟ್‌ ಆಂಡ್ ಹೋಲ್ಡಿಂಗ್ಸ್‌ ಲಿಮಿಟೆಡ್‌ (Reliance Industrial Investments and Holdings Ltd) ಮಾಡಲಿದೆ. ಮಾರ್ಚ್‌ 2022ರ ಅಂತ್ಯದೊಳಗಾಗಿ ಖರೀದಿ ಪ್ರಕ್ರಿಯೆ ಮುಗಿಯಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಶೇ. 73.37 ರಷ್ಟು ಶೇರುಗಳು ರಿಲಾಯನ್ಸ್‌ ಪಾಲಾದರೆ, ಉಳಿದ ಶೇ. 26.63 ರಷ್ಟು ಶೇರುಗಳು ಉಳಿದ ರಿಲಾಯನ್ಸ್‌ ಸ್ವಾಧೀನ ಪಡಿಸಿಕೊಂಡ ಅದೇ ಮೌಲ್ಯದಲ್ಲಿ ಹೊಟೆಲ್‌ನ ಇತರ ಮಾಲೀಕರ ಪಾಲಾಗಲಿದೆ.

ಗ್ರಾಹಕರ ದತ್ತಾಂಶಗಳನ್ನು 2 ವರ್ಷಗಳ ಕಾಲ ಸಂಗ್ರಹಿಸಿಡಿ: ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ
2003ರಲ್ಲಿ 80 ಕೊಲಂಬಸ್‌ ಸರ್ಕಲ್‌ನಲ್ಲಿ ಆರಂಭವಾದ ಈ ಐಷಾರಾಮಿ ಮಂಡರಿನ್‌ ಓರಿಯಂಟಲ್‌ ನ್ಯೂಯಾರ್ಕ್‌ ಹೋಟೆಲ್‌ ಸೆಂಟ್ರಲ್ ಪಾರ್ಕ್ ಮತ್ತು ಕೊಲಂಬಸ್ ವೃತ್ತದ ಪಕ್ಕದಲ್ಲಿದೆ. ಇದೀಗ ಇದರ ಬಹುಪಾಲು ಒಡೆತನ ಅಂಬಾನಿ ಒಡೆತನ ರಿಲಾಯನ್ಸ್‌ ಪಾಲಾಗಿದೆ.



Read more

[wpas_products keywords=”deal of the day sale today offer all”]