Karnataka news paper

ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿ: ಆರ್ ಅಶೋಕ್


ಹೈಲೈಟ್ಸ್‌:

  • ʼಬೆಳಗಾವಿ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿʼ
  • ಮತಾಂತರ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರುತ್ತೇವೆ ಎಂದ ಆರ್‌ ಅಶೋಕ್‌
  • ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿ

ಬೆಳಗಾವಿ: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರುತ್ತೇವೆ. ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ. ಎಲ್ಲರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿಯಿರಬೇಕು. ಈಗಾಗಲೇ ಸಂವಿಧಾನದಲ್ಲಿ ಇದು ಇದೆ. ಇನ್ನಷ್ಟು ಕಠಿಣ ಕಾನೂನು‌ ತರ್ತಿದ್ದೇವೆ ಎಂದರು.

ಕಾಂಗ್ರೆಸ್‌ನವರಿಗೆ ಬಹುಸಂಖ್ಯಾತರ ಬಗ್ಗೆ ಗಮನವೇ ಇಲ್ಲ. ಅವರ ಪರಂಪರೆಯೇ ಈಗಾಗಿರುವ ಕಾರಣದಿಂದಾಗಿ ದೇಶದಲ್ಲಿಯೇ ಮೂಲೆ‌ ಗುಂಪಾಗಿದ್ದಾರೆ. ಈ ರೀತಿಯ ವಿರೋಧ ಹಾಗೂ ಪ್ರತಿಭಟನೆಯನ್ನು ನಡೆಸುವ ಮೂಲಕ ಇನ್ನಷ್ಟು ಮೂಲೆಗುಂಪಾಗಲು ಅವರೇ ಹಳ್ಳ ತೋಡಿಕೊಂಡಂತೆ. ಅವರು ಎಲ್ಲರ ಪರವಾಗಿ ಇರಬೇಕು. ಯಾವುದೋ ಒಂದು ಸಮುದಾಯದ ಪರವಾಗಿ ನಿಂತರು ಎಂದರೆ, ಕಾಂಗ್ರೆಸ್ ಯಾವ ಹೀನಾಯ ಸ್ಥಿತಿಗೆ ತಲುಪಿದೆ ಎಂಬ ಅರಿವು ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಧರ್ಮದಲ್ಲಿಯೂ ಮತಾಂತರ ಅನ್ನುವುದು ಅಪರಾಧ. ಮತಾಂತರ ಮಾಡುವುದು, ಆಮಿಷ ಒಡ್ಡುವುದು, ಹಸು, ಬಟ್ಟೆ, ಆಸ್ಪತ್ರೆ ಖರ್ಚು ಕೊಡುತ್ತೇನೆ ಎಂದು ಮತಾಂತರ ಮಾಡುವುದನ್ನು ನಾವು ಖಂಡಿಸುತ್ತೇವೆ. ಮತಾಂತರ ನಿಷೇಧ ಕಾಯ್ದೆ ಈಗಾಗಲೇ ಇದೆ ಅದನ್ನು ಇನ್ನಷ್ಟು ಕಠಿಣ ಕಳಿಸುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.

ಭಾರತವನ್ನು ಪಾಕಿಸ್ತಾನ ಆಗಲು ಬಿಡುವುದಿಲ್ಲ: ಕೆಎಸ್ ಈಶ್ವರಪ್ಪ ಆಕ್ರೋಶ
ನಾವು ಈ ಕಾನೂನನ್ನು ಬಲಪಡಿಸುತ್ತವೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್‌ನವರು ಕೂಗಲು ಶುರು ಮಾಡಿದರೆ ನಿಜಕ್ಕೂ ಕಾಂಗ್ರೆಸ್ ಯಾವ ಸ್ಥಿತಿ ತಲುಪಿದೆ ಎಂಬ ಅರಿವಾಗುತ್ತದೆ. ನಾವು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಲವ್ ಜಿಹಾದ್ ಸಹ ಇದರ ಒಂದು ಅಂಗವೇ ಆಗಿದೆ. ಮತಾಂತರ ಮಾಡುವುದಕ್ಕಾಗಿಯೇ ಲವ್ ಜಿಹಾದ್ ಮಾಡಲಾಗುತ್ತದೆ. ಇದು ಸಹ ಒಂದು ರೀತಿಯ ಆಮಿಷವೇ ಆಗಿದೆ. ಮದುವೆ ಮಾಡಿಕೊಳ್ಳುತ್ತೇನೆ, ಅದಕ್ಕೂ ಮುನ್ನ ಮತಾಂತರ ಆಗಬೇಕು ಎಂಬುದು ಸಹ ಒಂದು ಆಮಿಷ ಆಗಿದೆ. ಇಲ್ಲಿ ಎರಡು ವಿಚಾರಗಳು ದೇಶದ ಒಗ್ಗಟ್ಟಿಗೆ ಮಾರಕವಾಗಿದೆ. ಇನ್ನೊಂದು ಬಾರಿ ಪಾಕಿಸ್ತಾನ, ಬಾಂಗ್ಲಾದೇಶ ಪ್ರತ್ಯೇಕ ಆದ ರೀತಿ ಇನ್ನೊಮ್ಮೆ ಆಗಬಾರದು. ಇದಕ್ಕೆ ಕಟ್ಟುನಿಟ್ಟಿನ ಕಾನೂನು ಆಗಬೇಕು ಆಗ ಮಾತ್ರ ದೇಶ ಉಳಿಯಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಲವ್‌ ಜಿಹಾದ್ ನಿಷೇಧ ಕಾಯ್ದೆ ಕೂಡ ಜಾರಿಗೆ ತರುತ್ತೇವೆ; ವಿ.ಸುನೀಲ್ ಕುಮಾರ್
‘ಭಾರತವನ್ನು ಪಾಕಿಸ್ತಾನ ಆಗಲು ಬಿಡಲ್ಲ’
ಇನ್ನು, ಇದೇ ವಿಷಯದ ಬಗ್ಗೆ ಮಾತನಾಡಿದ ಸಚಿವ ಕೆಎಸ್‌ ಈಶ್ವರಪ್ಪ ಭಾರತವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ. ಪಾಕಿಸ್ತಾನದಲ್ಲಿ ಶೇ.24ರಷ್ಟು ಹಿಂದುಗಳು ಈಗ ಶೇ.3ರಷ್ಟು ಆಗಿದ್ದಾರೆ. ಅದೇ ರೀತಿ ಭಾರತವನ್ನು ಪಾಕಿಸ್ತಾನ ಮಾಡೋಕೆ ಹೊರಟಿದ್ದೀರಾ..? ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಪಾಕಿಸ್ತಾನದಲ್ಲಿ ಮತಾಂತರ ಹೆಸರಲ್ಲಿ ಕೊಲೆ ಸುಲಿಗೆಯಾಗ್ತಿದೆ. ಆ ರೀತಿ ನಮ್ಮ ದೇಶದಲ್ಲಿ ನಡೆಯೋಕೆ ಬಿಡೋದಿಲ್ಲ. ಮುಗ್ದರನ್ನ ಮತಾಂತರ ಮಾಡುವುದಕ್ಕೆ ಬಿಡುವುದಿಲ್ಲ‌‌‌ ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ತಂದು ದೇಶವಿಭಜನೆ ಮಾಡೋಕೆ ಹೊರಡಬೇಡಿ : ಕೆಜೆ ಜಾರ್ಜ್



Read more