Karnataka news paper

Mokshitha Pai: ‘ಪಾರು’ ಖ್ಯಾತಿಯ ಮೋಕ್ಷಿತಾ ಪೈ ನಟಿಸಿರುವ ‘ನಿರ್ಭಯಾ 2’ ಶೂಟಿಂಗ್ ಕಂಪ್ಲೀಟ್‌


ಹೈಲೈಟ್ಸ್‌:

  • ‘ಪಾರು’ ಧಾರಾವಾಹಿಯಿಂದ ಜನಪ್ರಿಯರಾಗಿರುವ ಮೋಕ್ಷಿತಾ ಪೈ
  • ಮೋಕ್ಷಿತಾಗೆ ಸಿನಿಮಾರಂಗದಿಂದ ಸಿಕ್ಕಾಪಟ್ಟೆ ಆಫರ್ಸ್‌
  • ಹೊಸ ಸಿನಿಮಾ ಒಪ್ಪಿಕೊಂಡು ಶೂಟಿಂಗ್ ಕೂಡ ಮುಗಿಸಿರುವ ಮೋಕ್ಷಿತಾ

ಕಿರುತೆರೆಯಲ್ಲಿ ‘ಪಾರು‘ ಧಾರಾವಾಹಿ ಮೂಲಕ ಜನಮನಸೂರೆಗೊಂಡ ನಟಿ ಮೋಕ್ಷಿತಾ ಪೈ. ‘ಪಾರು’ ಧಾರಾವಾಹಿ ಮೋಕ್ಷಿತಾಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆನಂತರ ಎಲ್ಲರಿಂದ ಕೇಳಿಬಂದ ಪ್ರಶ್ನೆ, ಮೋಕ್ಷಿತಾ ಸಿನಿಮಾ ಮಾಡೋದು ಯಾವಾಗ? ಅದಕ್ಕೂ ಈಗ ಉತ್ತರ ಸಿಕ್ಕಿದೆ. ಮೋಕ್ಷಿತಾ ನಟಿಸಿರುವ ಹೊಸ ಸಿನಿಮಾ ‘ನಿರ್ಭಯಾ 2‘ ಸದ್ದಿಲ್ಲದೇ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಸಿನಿಮಾಕ್ಕೆ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

ಕಥೆ, ಚಿತ್ರಕಥೆ ಬರೆದು ರಾಜು ಕುಣಿಗಲ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ‘ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ‘ನಿರ್ಭಯ 2′ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ. ಈ ಸಿನಿಮಾಕ್ಕೆ ಬಾಲಕೃಷ್ಣ ಕೆ.ಆರ್. ಬಂಡವಾಳ ಹೂಡಿದ್ದಾರೆ.

ಮುಖ್ಯಪಾತ್ರದಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಂಡಿದ್ದು, ಅರ್ಜುನ್ ಕೃಷ್ಣ, ಹರೀಶ್ ಎಚ್.ಆರ್., ಕುಸುಮಾ, ರಾಧಾ ರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇ ಗೌಡ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯ್ಕ್‌ ಬರೆದಿದ್ದಾರೆ. ಆಕಾಶಪರ್ವ ಅವರ ಸಂಗೀತ ಸಂಯೋಜನೆ ಈ ಸಿನಿಮಾಕ್ಕಿದೆ. ಚಿತ್ರಕ್ಕೆ ರಂಗ್ ಮಂಜು ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣದ ಹೊಣೆ ಗುಂಡ್ಲುಪೇಟೆ ಸುರೇಶ್ ಅವರದ್ದು. ‘ನಿರ್ಭಯ 2’ ಚಿತ್ರಕ್ಕೆ ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ.

‘ಪಾರು’ ಧಾರಾವಾಹಿಯಲ್ಲಿ ಆದಿ ನಿಶ್ಚಿತಾರ್ಥ ಯಾರ ಜೊತೆ? ರೋಚಕ ತಿರುವಿನಲ್ಲಿದೆ ಈ ಸೀರಿಯಲ್

ಈ ಹಿಂದೆ ದುನಿಯಾ ವಿಜಯ್ ನಿರ್ದೇಶನದ ಸಿನಿಮಾವೊಂದರಲ್ಲಿ ಮೋಕ್ಷಿತಾ ನಟಿಸುತ್ತಾರೆ ಎನ್ನಲಾಗಿತ್ತು. ಆ ಬಗ್ಗೆ ಮಾತನಾಡಿದ್ದ ಮೋಕ್ಷಿತಾ, ‘ಪಾರು ಧಾರಾವಾಹಿ ಆರಂಭವಾದಾಗಿನಿಂದ ನನಗೆ 9 ಸಿನಿಮಾಗಳಲ್ಲಿ ನಟಿಸಲು ಆಫರ್‌ ಬಂದಿತ್ತು. ಪಾತ್ರಗಳು ಇಷ್ಟವಾಗದೇ ಬಿಟ್ಟಿದ್ದೆ. ಆದರೆ ಈ ಚಿತ್ರದ ಕಥೆ ಕೇಳಿದಾಗ ನನಗೆ ಆ 9 ಸಿನಿಮಾಗಳನ್ನು ಬಿಟ್ಟಿದ್ದು ಒಳ್ಳೆಯದಾಯಿತು ಎನಿಸಿತು. ನಮ್ಮ ಮನೆಯಲ್ಲಿ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ’ ಎಂದಿದ್ದರು ಮೋಕ್ಷಿತಾ. ಸದ್ಯಕ್ಕಂತೂ ಆ ಸಿನಿಮಾದ ಕೆಲಸಗಳು ಯಾವ ಹಂತದಲ್ಲಿವೆ? ಯಾವಾಗ ಶುರುವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಅದಕ್ಕೂ ಮೊದಲೇ ಮೋಕ್ಷಿತಾ ‘ನಿರ್ಭಯಾ 2’ ಮೂಲಕ ಸದ್ದು ಮಾಡುತ್ತಿದ್ದಾರೆ.

ಕೊಡಗಿನಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸಿದ ‘ಪಾರು’! ಅಲ್ಲೇನು ಮಾಡ್ತಿದ್ದಾರೆ ನಟಿ ಮೋಕ್ಷಿತಾ ಪೈ?

‘ಪಾರು ಧಾರಾವಾಹಿ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ತುಂಬ ಖುಷಿ ಇದೆ’- ನಟಿ ಮೋಕ್ಷಿತಾ ಪೈ

Photos: ‘ಪಾರು’ & ‘ಸತ್ಯ’ ಧಾರಾವಾಹಿ ತಂಡಗಳ ‘ಹೋಳಿ’ ಹಬ್ಬದ ಸೆಲೆಬ್ರೇಷನ್‌ ಹೇಗಿದೆ ನೋಡಿ!



Read more

[wpas_products keywords=”deal of the day party wear dress for women stylish indian”]